Advertisement

Banking; ಬ್ಯಾಂಕ್‌ಗಳಿಗೆ ವಾರಕ್ಕೆ 5 ದಿನ ಕೆಲಸ: ಈ ವರ್ಷವೇ ಜಾರಿ?

11:58 PM Mar 01, 2024 | Team Udayavani |

ನವದೆಹಲಿ: ಬ್ಯಾಂಕ್‌ಗಳಲ್ಲಿ ವಾರಕ್ಕೆ 5 ದಿನ ಮಾತ್ರ ಕೆಲಸ ಎಂಬ ನಿಯಮವು ಪ್ರಸಕ್ತ ವರ್ಷದಿಂದಲೇ ಜಾರಿಗೆ ಬರುವ ಸಾಧ್ಯತೆ ಅಧಿಕವಾಗಿದೆ. ವಿವಿಧ ಬ್ಯಾಂಕ್‌ಗಳ ಉದ್ಯೋಗಿಗಳ ಸಂಘಟಿತ ಒಕ್ಕೂಟ, ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್‌ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದ್ದು, ಅದನ್ನು ಸರ್ಕಾರ ಪರಿಗಣಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದೆ.

Advertisement

ಆದರೆ, ಬ್ಯಾಂಕ್‌ಗಳ ಶಾಖೆಗಳ ಕಾರ್ಯನಿರ್ವಹಣೆ ಅವಧಿಯಲ್ಲಿ(ಗ್ರಾಹಕರು ವಹಿವಾಟು ನಡೆಸುವ ಅವಧಿ) ಇಳಿಕೆ ಮಾಡಲಾಗುವುದಿಲ್ಲ ಎಂದು ಯೂನಿಯನ್‌ ಹೇಳಿಕೊಂಡಿದೆ. ಆದರೆ, ಕೇಂದ್ರ ವಿತ್ತ ಸಚಿವಾಲಯದ ಅನುಮೋದನೆ ಪಡೆದ ಬಳಿಕವೇ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳು ಇವೆ. ಸದ್ಯ ಬ್ಯಾಂಕ್‌ ಶಾಖೆಗಳಿಗೆ ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ಸಾರ್ವಜನಿಕ ರಜೆ ಇದೆ. ಆದರೆ, ತಿಂಗಳ ಎಲ್ಲ ಶನಿವಾರ, ಭಾನುವಾರವೂ ರಜೆ ನೀಡಬೇಕು ಎನ್ನುವುದು ಉದ್ಯೋಗಿಗಳ ಬೇಡಿಕೆಯಾಗಿದೆ.

ಇದರ ಜತೆಗೆ ಬ್ಯಾಂಕ್‌ ಉದ್ಯೋಗಿಗಳು ಬಹು ನಿರೀಕ್ಷಿತ ಬೇಡಿಕೆ ವೇತನ ಏರಿಕೆಯೂ ಜೂನ್‌ನಿಂದ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಬ್ಯಾಂಕ್‌ ಉದ್ಯೋಗಿಗಳ ಒಕ್ಕೂಟ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next