ಲಂಡನ್: ಇಲ್ಲಿನ ಪ್ರಸಿದ್ಧ ಕೋವೆಂಟ್ ಗಾರ್ಡನ್ ನ ನೈಟ್ ಕ್ಲಬ್ ನ ಟಾಯ್ಲೆಟ್ ನಲ್ಲಿ ಇಬ್ಬರ ಜತೆ ಲೈಂಗಿಕ ಚಟುವಟಿಕೆ ನಡೆಸಿದ್ದ ಆರೋಪ ಎದುರಿಸುತ್ತಿದ್ದ ಬ್ಯಾಂಕ್ ಅಧಿಕಾರಿಯನ್ನು ಕೆಲಸದಿಂದ ವಜಾಮಾಡಿರುವ ಘಟನೆ ಪಶ್ಚಿಮ ಲಂಡನ್ ನಲ್ಲಿ ನಡೆದಿದೆ.
ಟ್ರಿಬ್ಯುನಲ್ ವಿಚಾರಣೆ ವೇಳೆ ಜಾರ್ಜ್ ಎಲೆಫ್ತೆರಿಯೋ ನಾನು ಇಬ್ಬರು ಸಹೋದ್ಯೋಗಿಗಳ ಜತೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂಬ ಬಗ್ಗೆ ನೋಟಿಸ್ ನೀಡದೆ ಕೆಲಸದಿಂದ ತೆಗೆದುಹಾಕಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಅನಾಮಧೇಯ ಪುರುಷ ಮತ್ತು ಮಹಿಳಾ ಉದ್ಯೋಗಿಗಳ ಆರೋಪದ ಪ್ರಕಾರ, ನೈಟ್ ಕ್ಲಬ್ ನಲ್ಲಿ ಡರ್ಟಿ ಮಾರ್ಟಿನಿ ಆಲ್ಕೋಹಾಲ್ ಸೇವನೆ ನಂತರ ಬ್ಯಾಂಕರ್ ಇಬ್ಬರು ಮಹಿಳಾ ಸಹೋದ್ಯೋಗಿಗಳ ಜತೆ ಟಾಯ್ಲೆಟ್ ನಲ್ಲಿ ರಾಸಲೀಲೆಯಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದರು.
ನೈಟ್ ಕ್ಲಬ್ ನಲ್ಲಿ ನಡೆದ ಈ ಘಟನೆ ಬಗ್ಗೆ ಜಾರ್ಜ್ ಎಲೆಫ್ತೆರಿಯೋ ತಂಡದ ಸದಸ್ಯರು ಬಾಸ್ ಗೆ ಬರೆದ ಪತ್ರದ ನಂತರ ಸುದ್ದಿ ಬಹಿರಂಗವಾಗಿತ್ತು. ಬ್ರಯಾನ್ ಕಮರ್ಷಿಯಲ್ ಬ್ಯಾಂಕ್ ನ ಮುಖ್ಯಸ್ಥರಾಗಿದ್ದು, ಅವರಿಗೆ ದೂರು ನೀಡಿರುವುದಾಗಿ ವರದಿ ವಿವರಿಸಿದೆ.
ಜಾರ್ಜ್ ಎಲೆಫ್ತೆರಿಯೋ ಕ್ಲೈಡೆಸ್ಡಲ್ ಬ್ಯಾಂಕ್ ನ ಮ್ಯಾನೇಜರ್ ಆಗಿದ್ದರು. ಇಬ್ಬರ ಜತೆ ದೈಹಿಕ ಸಂಬಂಧ ಹೊಂದಿದ್ದ ಆರೋಪ ಮೇಲೆ ಜಾರ್ಜ್ ಹುದ್ದೆ ಕಳೆದುಕೊಂಡಿರುವುದಾಗಿ ವರದಿ ತಿಳಿಸಿದೆ.