Advertisement

ಇಂಡಿಯನ್‌ ಬ್ಯಾಂಕ್‌ನಿಂದ ಬ್ಯಾಂಕರ್ ಅಭಿಯಾನ ಸಭೆ

12:58 AM Aug 19, 2019 | Team Udayavani |

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಹಣಕಾಸು ಸಚಿವಾಲಯ ನೀಡಿರುವ ನಿರ್ದೇಶನದ ಮೇರೆಗೆ ಇಂಡಿಯನ್‌ ಬ್ಯಾಂಕ್‌, ಬ್ಯಾಂಕರ್‌ಗಳ ಅಭಿಪ್ರಾಯ ಸಂಗ್ರಹ ಅಭಿಯಾನ ಸಭೆ ಆಯೋಜಿಸಿತ್ತು.

Advertisement

ರಹೇಜಾ ಟವರ್ಸ್‌ನ ವೃತ್ತ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇಂಡಿಯನ್‌ ಬ್ಯಾಂಕಿನ ಮಹಾಪ್ರಬಂಧಕ (ಕ್ರೆಡಿಟ್‌ ಮಾನಿಟರಿಂಗ್‌) ಎಸ್‌.ಚೇಳಿಯನ್‌ ಮಾತನಾಡಿ ಮುಂಬರುವ ವರ್ಷಗಳಲ್ಲಿ ದೇಶೀಯ ಆರ್ಥಿಕತೆ ಬೆಳೆವಣಿಗೆಯ ಹಾದಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಸಕ್ರಿಯ ಭಾಗವಹಿಸಬೇಕು ಎನ್ನುವುದು ಈ ಅಭಿಪ್ರಾಯ ಸಂಗ್ರಹ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.

ದೇಶದ ಆರ್ಥಿಕತೆ ಗಾತ್ರ 5 ಟ್ರಿಲಿಯನ್‌ ಡಾಲರ್‌ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಬ್ಯಾಂಕ್‌ ಶಾಖೆಗಳ ಮಟ್ಟದಲ್ಲಿ ಹೊಸ ಆಲೋಚನೆಗಳನ್ನು ಕ್ರೋಡೀಕರಣಗೊಳಿಸುವ ಪ್ರಕ್ರಿಯೆಗೆ ದೇಶಾದ್ಯಂತ ಚಾಲನೆ ದೊರೆಯಲಿದೆ. ನಮ್ಮ ಬ್ಯಾಂಕಿನ ಉನ್ನತ ಆಡಳಿತ ಶಾಖಾ ಪ್ರಬಂಧಕರ ಜೊತೆಗೂಡಿ ದೇಶದ ವಿವಿಧ ಭಾಗಗಳಲ್ಲಿ ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ.

ಅದರ ಪ್ರಕಾರ ಬ್ಯಾಂಕಿನ ಅಭಿವೃದ್ಧಿ, ಗ್ರಾಹಕರ ಅಗತ್ಯಗಳಿಗೆ ಹಾಗೂ ಬ್ಯಾಂಕಿಂಗ್‌ ಕ್ಷೇತ್ರ ಎದುರಿಸುತ್ತಿರುವ ಸವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವ ಕುರಿತು ಚಿಂತನ, ಮಂಥನ ನಡೆಸಿ ಎಂಎಸ್‌ಎಂಇ, ಕೃಷಿ, ಸ್ಟಾರ್ಟ್‌ಅಪ್‌, ಮುದ್ರಾ ಸಾಲ, 59 ನಿಮಿಷದಲ್ಲಿ ಪಿಎಸ್‌ಬಿ ಸಾಲ, ಸ್ವಸಹಾಯ ಸಂಘ ಮತ್ತು ಡಿಜಿಟಲ್‌ ಬ್ಯಾಂಕಿಂಗ್‌ ಸವಾಲುಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next