Advertisement

ರವಿವಾರವೂ ಬ್ಯಾಂಕ್‌ ಖಾತೆಗೆ ಹಣ ಜಮೆ : ಆ. 1ರಿಂದ ಹಣಕಾಸು ವರ್ಗಾವಣೆಯಲ್ಲಿ ಹೊಸ ವ್ಯವಸ್ಥೆ

12:26 AM Jun 05, 2021 | Team Udayavani |

ಮುಂಬಯಿ: ಈ ವರ್ಷದ ಆಗಸ್ಟ್‌ 1ರಿಂದ ರವಿವಾರ ರಜೆ ಇದ್ದರೂ ಸಂಬಳ, ಡಿವಿಡೆಂಡ್‌ ಸಹಿತ ಇತರ ಪಾವತಿಗಳು ಗ್ರಾಹಕರ ಖಾತೆಗೆ ಪಾವತಿಯಾಗಲಿವೆ. ಜತೆಗೆ ಪ್ರತೀ ತಿಂಗಳ ಸಾಲದ ಕಂತು ಕೂಡ ರಜೆ ಇದ್ದರೂ ಕಡಿತಗೊಳ್ಳಲಿದೆ.

Advertisement

ಈ ಬಗ್ಗೆ ಆರ್‌ಬಿಐ ಶುಕ್ರವಾರ ಹೊಸ ನೀತಿ ಬಿಡುಗಡೆ ಮಾಡಿದೆ. ನ್ಯಾಶನಲ್‌ ಅಟೊಮೇಟೆಡ್‌ ಕ್ಲಿಯರಿಂಗ್‌ ಹೌಸ್‌ ಎಂಬ ಹೊಸ ಸೂತ್ರದ ಅನ್ವಯ ಈ ಕ್ರಮ ಜಾರಿಯಾಗಲಿದೆ. ಇದರಿಂದಾಗಿ ಬ್ಯಾಂಕ್‌ಗಳಿಗೆ ರಜೆ ಇದ್ದರೂ ವಾರದ 7 ದಿನಗಳಲ್ಲಿ ನಿರಂತರವಾಗಿ ಪಾವತಿ ಪ್ರಕ್ರಿಯೆ ಮುಂದುವರಿಯಲಿದೆ.

ದೊಡ್ಡ ಮೊತ್ತದ ಹಣವನ್ನು ಹಲವು ಮಂದಿ ಗ್ರಾಹಕರ ಖಾತೆಗಳಿಗೆ ಸುಲಭವಾಗಿ ವರ್ಗಾಯಿಸುವ ನಿಟ್ಟಿನಲ್ಲಿ ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೊಸ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿದೆ. ವಿತ್ತೀಯ ಸಂಸ್ಥೆ ಗಳು, ಬ್ಯಾಂಕ್‌ಗಳು, ಕಾರ್ಪೊರೇಟ್‌ ಸಂಸ್ಥೆಗಳು, ಸರಕಾರಗಳಿಗೆ ಈ ವ್ಯವಸ್ಥೆ ಅನುಕೂಲಕರವಾಗಿ ಪರಿಣಮಿಸಲಿದೆ.

ಯಾವುದಕ್ಕೆ ಅನುಕೂಲ?
ಸಂಸ್ಥೆಗಳು, ಸರಕಾರಗಳಿಗೆ ಡಿವಿ ಡೆಂಡ್‌, ಬಡ್ಡಿ ಪಾವತಿ, ಸಂಬಳ ವಿತರಣೆ, ಪಿಂಚಣಿ ನೀಡಿಕೆ, ಬಿಲ್‌ ಪಾವತಿ, ಸಾಲ ಕಂತು ಪಾವತಿ, ಮ್ಯೂಚ್ಯುವಲ್‌ ಫ‌ಂಡ್‌ ಹೂಡಿಕೆ, ವಿಮಾ ಪ್ರೀಮಿಯಂ ಪಾವತಿ ಮಾಡಲು ರಜೆಯ ದಿನ ಗಳಲ್ಲೂ ಸಾಧ್ಯವಾಗಲಿದೆ. ರಜೆಯಂದೂ ಸರಕಾರಿ ಯೋಜನೆಗಳ ಫ‌ಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸಾಧ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next