Advertisement
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಕೂಡ ಬೆಂಬಲ ಸೂಚಿಸಿದೆ. ಶನಿವಾರ ಕೂಡ ಬ್ಯಾಂಕ್‌ಗಳು ಬಂದ್ ಆಗಲಿದೆ. ಕೆಲವು ಎಟಿಎಂಗಳಲ್ಲಿ ಶುಕ್ರವಾರ ದಂದು ಹಣ ಇತ್ತು. ಬ್ಯಾಂಕ್‌ಗೆ ರಜಾ ಇದ್ದ ಕೆಲವೊಂದು ಎಟಿಎಂಗಳಲ್ಲಿ ಹೆಚ್ಚಿದ ಜನಸಂದಣಿ ಇತ್ತು. ಈ ಬಾರಿಯ ಪ್ರತಿಭಟನೆಗೂ ಸರಕಾರ ಮಣಿಯದಿದ್ದರೆ ಮಾ.11, 12 ಮತ್ತು 13ರಂದು ಒಟ್ಟು 3 ದಿನ ಮುಷ್ಕರ ನಡೆಸಲಿದ್ದೇವೆ. ಇವೆರಡೂ ಪ್ರತಿಭಟನೆಗಳಿಗೂ ವೇತನ ಒಪ್ಪಂದ ಸರಿಪಡಿಸದಿದ್ದರೆ, ಎ.1ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಿದ್ದೇವೆ ಎಂದಿದ್ದಾರೆ.
ಕುಂದಾಪುರ: ಬ್ಯಾಂಕ್ ಮುಷ್ಕರ ನಡೆಯುತ್ತಿರುವಂತೆಯೇ ಜನ ಹಣಕಾಸಿನ ವಹಿವಾಟಿಗೆ ಅಂಚೆ ಇಲಾಖೆಯನ್ನು ಆಶ್ರಯಿಸಿದ್ದಾರೆ. ಶುಕ್ರವಾರ ತಾಲೂಕಿನ ವಿವಿಧೆಡೆ ಅಂಚೆ ಇಲಾಖೆ ಮೂಲಕ ಹಣಕಾಸಿನ ವ್ಯವಹಾರ ನಡೆದಿದೆ. ಬ್ಯಾಂಕ್ ಅಥವಾ ಎಟಿಎಂ ಇಲ್ಲದಿದ್ದರೆ ನಿಮ್ಮ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ನೀಡಿದರೆ ಅಲ್ಲಿ ಬೆರಳಚ್ಚು ಪಡೆಯುವ ಮೂಲಕ ವ್ಯವಹಾರ ನಡೆಸಲಾಗುತ್ತದೆ. ಯಾವುದೇ ಬ್ಯಾಂಕಿನಲ್ಲಿರುವ ಆಧಾರ್ ಸಂಖ್ಯೆಗೆ ಲಿಂಕ್ ಆದ ಖಾತೆಯ ಹಣ ಪಡೆಯಬಹುದು, ಖಾತೆಯ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದು. ಅಂಚೆ ಇಲಾಖೆ ಕೂಡ ಈ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಬ್ಯಾಂಕ್ ಮುಷ್ಕರದ ಮಧ್ಯೆಯೇ ಇಂತಹ ಕೆಲವು ಆಶಾದಾಯಕ ಬೆಳವಣಿಗೆಗಳು ಜನ ಹೆಚ್ಚು ಹೆಚ್ಚು ಬಾರಿ ಅಂಚೆ ಕಚೇರಿಯೆಡೆಗೆ ಹೋಗುವಂತೆ ಮಾಡಿದೆ.
Related Articles
Advertisement