ನವದೆಹಲಿ: ಒಂದು ವೇಳೆ ನಿಮಗೇನಾದರು ಬ್ಯಾಂಕ್ ನಲ್ಲಿ ಅಗತ್ಯ ಕೆಲಸವಿದ್ದರೆ ಶುಕ್ರವಾರ(ಮಾರ್ಚ್ 12)ವೇ ಮುಗಿಸಿ. ಯಾಕೆಂದರೆ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಗೆ ರಜೆ ಇದ್ದು, ಇದರಿಂದ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500 ಅಂಕ ಏರಿಕೆ, 15,000 ಗಡಿ ದಾಟಿದ ನಿಫ್ಟಿ
ಬ್ಯಾಂಕಿಂಗ್ ವಲಯವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್ ಬಿಯು) ಮಾರ್ಚ್ 15 ಮತ್ತು 16ರಂದು ಎರಡು ದಿನಗಳ ಕಾಲ ರಾಷ್ಟ್ರೀಯ ಬಂದ್ ಗೆ ಕರೆ ನೀಡಿದೆ.
ಮಾರ್ಚ್ 13 ಎರಡನೇ ಶನಿವಾರ ಬ್ಯಾಂಕ್ ಗೆ ರಜೆ, ಮಾರ್ಚ್ 14 ಭಾನುವಾರ, 15, 16 ಬ್ಯಾಂಕ್ ನೌಕರರ ಮುಷ್ಕರ ಇದರಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ನಲ್ಲಿ ಯಾವುದೇ ಸೇವೆ ಲಭ್ಯವಾಗುವುದಿಲ್ಲ. ಎಟಿಎಂನಲ್ಲಿ ಕ್ಯಾಶ್ ತೆಗೆಯಲು ಕೂಡಾ ಸಮಸ್ಯೆಯಾಗಬಹುದು. ಈ ಕಾರಣದಿಂದ ವಾರಾಂತ್ಯಕ್ಕೆ ಬೇಕಾಗುವಷ್ಟು ಹಣ ತೆಗೆದಿಟ್ಟುಕೊಳ್ಳುವುದು ಉತ್ತಮ.
ಅಷ್ಟೇ ಅಲ್ಲ 2021ರ ಮಾರ್ಚ್ ತಿಂಗಳಿನಲ್ಲಿ ಕೆಲವು ದಿನಗಳು ಬ್ಯಾಂಕ್ ಸೇವೆ ಲಭ್ಯ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಈಗಾಗಲೇ ತಿಳಿಸಿತ್ತು. ಮತ್ತೊಂದೆಡೆ ಬ್ಯಾಂಕ್ ನೌಕರರ 9 ಒಕ್ಕೂಟಗಳನ್ನು ಒಳಗೊಂಡಿರುವ ಯುಎಫ್ ಬಿಯು ಸಂಘಟನೆಯ ಪ್ರತಿಭಟನೆಗೆ ಕರೆ ಕೊಟ್ಟಿರುವುದರಿಂದ ಗ್ರಾಹಕರ ಮೇಲೆ ಇನ್ನಷ್ಟು ಪರಿಣಾಮ ಬೀರುವಂತಾಗಿದೆ ಎಂದು ವರದಿ ತಿಳಿಸಿದೆ.