Advertisement

2019ರ ಡಿಸೆಂಬರ್‌ನಲ್ಲಿ ಯೆಸ್‌ ಬ್ಯಾಂಕಿಗೆ 18,564 ಕೋಟಿ ನಷ್ಟ

10:08 AM Mar 16, 2020 | sudhir |

ನವದೆಹಲಿ: ಸಂಕಷ್ಟಕ್ಕೀಡಾಗಿರುವ ಯೆಸ್‌ ಬ್ಯಾಂಕ್‌ 2019ರ ಡಿಸೆಂಬರ್‌ ಅಂತ್ಯದ ವೇಳೆಗೆ 18,564 ಕೋಟಿ ರೂ. ನಷ್ಟ ಅನುಭವಿಸಿದೆ. ಇದರ ಜತೆಗೆ ಬ್ಯಾಂಕ್‌ನ ಅನುತ್ಪಾದಕ ಆಸ್ತಿ ಪ್ರಮಾಣ 40,709 ಕೋಟಿ ರೂ. ಗೆ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಮುಕ್ತಾಯವಾಗಿದ್ದ ಹಿಂದಿನ ತ್ತೈಮಾಸಿಕದಲ್ಲಿ ನಷ್ಟದ ಪ್ರಮಾಣ 17,134 ಕೋಟಿ ರೂ. ಆಗಿತ್ತು. ನಷ್ಟದಲ್ಲಿರುವ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ಆರ್‌ಬಿಐ ಮಾ.5ರಂದು ಸೂಪರ್‌ಸೀಡ್‌ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next