Advertisement

Bank of Maharashtra :ಅತ್ಯಧಿಕ ಠೇವಣಿ ಸಂಗ್ರಹ

10:27 PM Feb 08, 2024 | Team Udayavani |

ಬೆಂಗಳೂರು: ಸಾರ್ವಜನಿಕ ವಲಯದ ಬ್ಯಾಂಕ್‌ ಠೇವಣಿ ಕ್ರೋಢೀಕರಣ ಪಟ್ಟಿಯಲ್ಲಿ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ (ಬಿಒಎಂ) ಅತ್ಯಧಿಕ ಠೇವಣಿ ಸಂಗ್ರಹಿಸುವ ಮೂಲಕ ಅಗ್ರಸ್ಥಾನ ಪಡೆದುಕೊಂಡಿದೆ. ಹೆಚ್ಚಿನ ಬ್ಯಾಂಕ್‌ಗಳು ಎರಡಂಕಿಯ ಬೆಳವಣಿಗೆಯನ್ನು ಸಾಧಿಸುವಲ್ಲಿ ವಿಫ‌ಲವಾಗಿವೆ.

Advertisement

ಸಾರ್ವಜನಿಕ ವಲಯದ 12 ಬ್ಯಾಂಕ್‌ಗಳಲ್ಲಿ ಬ್ಯಾಂಕ್‌ ಆಫ್ ಮಹಾರಾಷ್ಟ್ರ ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮಾತ್ರ 2023ರ ಡಿಸೆಂಬರ್‌ 31ಕ್ಕೆ ಕೊನೆಗೊಂಡ ಮೂರನೇ ತ್ರೆ„ಮಾಸಿಕದಲ್ಲಿ ಠೇವಣಿಗಳಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು(ಪಿಎಸ್‌ಬಿಎಸ್‌) ಪ್ರಕಟಿಸಿದ ತ್ರೆ„ಮಾಸಿಕ ಅಂಕಿ-ಅಂಶಗಳ ಪ್ರಕಾರ, ಪುಣೆ ಮೂಲದ ಬ್ಯಾಂಕ್‌ ಆಫ್ ಮಹಾರಾಷ್ಟ್ರ ಠೇವಣಿ ಸಂಗ್ರಹದಲ್ಲಿ ಶೇ.17.89 ಪ್ರಗತಿ ಸಾಧಿಸಿದೆ. ಇದೇ ವೇಳೆ ಎಸ್‌ಬಿಐ ಬ್ಯಾಂಕ್‌ ಶೇ.12.8, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ ಶೇ.9.53, ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ಶೇ.9.10 ಏರಿಕೆಯಾಗಿದೆ.

ಉಳಿತಾಯ ಹಾಗೂ ಚಾಲ್ತಿ ಖಾತೆಗಳ ಠೇವಣಿಗಳಲ್ಲಿ ಬಿಒಎಂ ಶೇ.50.19ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ಶೇ.48.98ನೊಂದಿಗೆ ಸೆಂಟ್ರಲ್‌ ಬ್ಯಾಂಕ್‌ ಇಂಡಿಯಾ ದ್ವಿತೀಯ ಸ್ಥಾನ ಪಡೆದುಕೊಂಡಿದೆ. 2023ರ ಡಿ. 31ಕ್ಕೆ ಕ್ರಮವಾಗಿ ಬ್ಯಾಂಕ್‌ ಆಫ್ ಮಹಾರಾಷ್ಟ್ರ ಶೇ.2.04 ಹಾಗೂ ಎಸ್‌ಬಿಐ ಶೇ.2.42ರಷ್ಟು ಕಡಿಮೆ ಅನುತ್ಪಾದಕ ಆಸ್ತಿಗಳನ್ನು (ಎನ್‌ಪಿಎಎಸ್‌)ವರದಿ ಮಾಡಿದೆ.
ಹಣಕಾಸು ವರ್ಷದ ಮೂರನೇ ತ್ತೈಮಾಸಿಕ ಅಂತ್ಯದಲ್ಲಿ ಬಂಡವಾಳ ಸಮಪರ್ಕತೆಯ ಅನುಪಾತ ಬಿಒಎಂ ಶೇ.16.85, ಐಒಬಿ ಶೇ.16.80, ಪಂಜಾಬ್‌ ಸಿಂಧ್‌ ಬ್ಯಾಂಕ್‌ ಶೇ.16.13ರಷ್ಟಿದೆ. 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳ 2023 ತ್ತೈಮಾಸಿಕ ಅವಧಿಯಲ್ಲಿ ಗಳಿಸಿ ಒಟ್ಟು 104,649 ಕೋಟಿ ರೂ. ಲಾಭದಲ್ಲಿ 98,355 ಕೋ. ರೂ. ನಿವ್ವಳ ಲಾಭ ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next