Advertisement

ಪ್ರಮುಖರಿಗೆ ಬಡ್ಡಿ ಬಿಸಿ

11:08 PM Nov 03, 2022 | Team Udayavani |

ಲಂಡನ್‌/ವಾಷಿಂಗ್ಟನ್‌: ಬ್ಯಾಂಕ್‌ ಆಫ್ ಇಂಗ್ಲೆಂಡ್‌ ಗುರುವಾರ ಬಡ್ಡಿ ದರವನ್ನು ಶೇ.0.75 ಹೆಚ್ಚು ಮಾಡಿದೆ. ಇದರಿಂದಾಗಿ ಬಡ್ಡಿ ಪ್ರಮಾಣ ಹಾಲಿ ಶೇ.2.25ರಿಂದ ಶೇ.3ಕ್ಕೆ ಏರಿಕೆಯಾಗಿದೆ.  ಮೂವತ್ತು ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಗರಿಷ್ಠ ಪ್ರಮಾಣ ಏರಿಕೆಯಾಗಿದೆ. ಇಷ್ಟು ಮಾತ್ರವಲ್ಲ 2024ರ ಮಧ್ಯಭಾಗದ ವರೆಗೆ ಅಂದರೆ ಬರೋಬ್ಬರಿ ಎರಡು ವರ್ಷಗಳ ಕಾಲ ಆರ್ಥಿಕ ಹಿಂಜರಿತವನ್ನು ಅನಿವಾರ್ಯವಾಗಿ ಬ್ರಿಟನ್‌ನ ನಾಗರಿಕರು ಎದುರಿಸಲು ಸಜ್ಜಾಗಿರಬೇಕು ಎಂದೂ ಬ್ಯಾಂಕ್‌ ಆಫ್ ಇಂಗ್ಲೆಂಡ್‌ ಮುನ್ನೆಚ್ಚರಿಕೆ ನೀಡಿದೆ.

Advertisement

1989ರ ಬಳಿಕ ಇದೇ ಮೊದಲ ಬಾರಿಗೆ ಗರಿಷ್ಠ ಪ್ರಮಾಣದಲ್ಲಿ ಬಡ್ಡಿದರ ಏರಿಕೆಯಾಗಿದೆ. ಇಷ್ಟು ಮಾತ್ರವಲ್ಲದೆ, 2008ರಲ್ಲಿ ಜಗತ್ತಿಗೆ ವಿತ್ತೀಯ ಕೊರತೆ ಬಾಧಿಸಿದ ಬಳಿಕ ಪರಿಸ್ಥಿತಿಯಲ್ಲಿಯೂ ಏರಿಕೆ ಪ್ರಮಾಣವೂ ಗರಿಷ್ಠವೇ ಆಗಿದೆ. ಕಠಿಣ ನಿರ್ಧಾರ ವನ್ನು ಪ್ರಕಟಿಸಿದ ಬ್ಯಾಂಕ್‌ ಆಫ್ ಇಂಗ್ಲೆಂಡ್‌ನ‌ ಗವರ್ನರ್‌ ಆ್ಯಂಡ್ರೂ ಬೈಲಿ “ಮುಂದಿನ ದಿನಗಳಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗು ತ್ತದೆ. ಬಡ್ಡಿದರ, ನಿರುದ್ಯೋಗದ ಪ್ರಮಾಣ ಹೆಚ್ಚಾಗಲಿದೆ. ಜಿಡಿಪಿ ಪ್ರಮಾಣ ಕುಸಿತವಾಗಲಿದೆ. ಮುಂದಿನ ಎಂಟು ತ್ತೈಮಾಸಿಕ (2024ರ ಮಧ್ಯಭಾಗ)ಗಳ ವರೆಗೆ ಆರ್ಥಿಕ ಹಿಂಜರಿತ ಕಾಡಬಹುದು’ ಎಂದು ಹೇಳಿದ್ದಾರೆ.

ಈಗಾಗಲೇ ಬ್ರಿಟನ್‌ನಲ್ಲಿ ಹಣದುಬ್ಬರ ಪ್ರಮಾಣ 40 ವರ್ಷಗಳಷ್ಟು ಗರಿಷ್ಠ ಏರಿಕೆಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಬಡ್ಡಿದರ ಹೆಚ್ಚಳ ಮಾಡದೆ ಬೇರೆ ದಾರಿಯೇ ಇಲ್ಲ ಎಂದು ಗವರ್ನರ್‌ ಹೇಳಿದ್ದಾರೆ.

ದೇಶಕ್ಕೆ ಶತ್ರು: ಹೆಚ್ಚುತ್ತಿರುವ ಹಣದುಬ್ಬರ ದೇಶಕ್ಕೆ ಶತ್ರು ಎಂದು ಬ್ರಿಟನ್‌ ವಿತ್ತ ಸಚಿವ ಜೆರೆಮಿ ಹಂಟ್‌ ಪ್ರತಿಪಾದಿಸಿದ್ದಾರೆ. ಕುಟುಂಬಗಳಿಗೆ, ಪಿಂಚಣಿದಾರರಿಗೆ, ಉದ್ದಿಮೆಗಳಿಗೆ ಇದು ಪ್ರತಿಕೂಲವಾಗಿ ಪರಿಣಮಿಸಲಿದೆ. ಅದರ ತೀವ್ರತೆ ತಗ್ಗಿಸುವುದೇ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಅಮೆರಿಕದಲ್ಲೂ ಶೇ.0.75 ಬಡ್ಡಿ ಏರಿಕೆ: 
ಅಮೆರಿಕದ ಫೆಡರಲ್‌ ರಿಸವರ್ಸ್‌ ಕೂಡ ಬಡ್ಡಿದರವನ್ನು ಶೇ.0.75 ಏರಿಕೆ ಮಾಡಿದೆ. ಇದರಿಂದಾಗಿ ಆ ದೇಶದಲ್ಲಿ ಶೇ.3.75ರಿಂದ ಶೇ.4ಕ್ಕೆ ಏರಿಕೆಯಾಗಿದೆ. ಈ ಏರಿಕೆ ಕೂಡ 2008ರ ಬಳಿಕ ಅತ್ಯಂತ ಗರಿಷ್ಠ ಪ್ರಮಾಣದ್ದಾಗಿದೆ. ಜತೆಗೆ ಈ ಏರಿಕೆ ನಾಲ್ಕನೇಯದ್ದು ಮತ್ತು ಕೊನೇಯದ್ದು ಎಂಬ ಸುಳಿವನ್ನೂ ನೀಡಿದೆ. ದರ ಏರಿಕೆಯ ಮೂಲಕ ಹಣದುಬ್ಬರ ಪ್ರಮಾಣವನ್ನು ಶೇ.2ರ ವರೆಗೆ ತಗ್ಗಿಸುವ ಗುರಿ ಇದೆ ಎಂದು ಫೆಡರಲ್‌ ರಿಸರ್ವ್‌ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next