ನವ ದೆಹಲಿ : ಸರಕಾರ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೊಡ್ಡ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್ ಆಫ್ ಬರೋಡಾ 1,209 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಹೇಳಿದೆ. ಕಳೆದ ವರ್ಷದ ಇದೇ ತ್ರೈ ಮಾಸಿಕದಲ್ಲಿ ನಷ್ಟ ಅನುಭವಿಸಿತ್ತು. ಅಂದರೇ, ಹಿಂದಿನ ಆರ್ಥಿಕ ವರ್ಷದ ಇದೇ ತ್ರೈ ಮಾಸಿಕದಲ್ಲಿ ಬ್ಯಾಂಕ್ ಆಫ್ ಬರೋಡಾ 864 ಕೋಟಿಯಷ್ಟು ನಷ್ಟ ಅನುಭವಿಸಿತ್ತು ಎಂದು ತಿಳಿಸಿದೆ.
ಇದನ್ನೂ ಓದಿ : ಉ. ಪ್ರ ಚುನಾವಣೆ : ರಾಜ್ಯಾದ್ಯಂತ ‘ಬೂತ್ ವಿಜಯ್ ಅಭಿಯಾನ’ ಅಡಿಯಲ್ಲಿ ಕಾರ್ಯಕ್ರಮ : ಬಿಜೆಪಿ
ಎನ್ ಪಿಎ ಅಥವಾ ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇಕಡಾ 9.39 ರಷ್ಟು ಇದ್ದದ್ದರಿಂದ ಶೇ 8.86 ರಷ್ಟಕ್ಕೆ ಕಡಿಮೆ ಆಗಿದೆ. ಆದರೆ, ನಿವ್ವಳ ಎನ್ ಪಿಎ ಶೇಕಡಾ 2.83 ರಿಂದ ಶೇ 3.03ಕ್ಕೆ ಹೆಚ್ಚಳವಾಗಿದೆ ಎಂದಿದೆ.
ಇನ್ನು, ಬ್ಯಾಂಕ್ ನ ಒಟ್ಟಾರೆ ವರಮಾನವು 30,312 ಕೋಟಿಗಳಿಂದ 20,022 ಕೋಟಿಗೆ ಅಲ್ಪ ಕುಸಿತ ಕಂಡಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿರುವುದಾಗಿ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಮತ್ತೆ ಗೆಲುವಿನ ಹಳಿಯೇರಿದ ಆಸೀಸ್: ನಾಲ್ಕನೇ ಪಂದ್ಯದಲ್ಲಿ ಬಾಂಗ್ಲಾಗೆ ಸೋಲು