Advertisement
ಕಳೆದ ಏಪ್ರಿಲ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಐದು ಸಹವರ್ತಿ ಬ್ಯಾಂಕುಗಳನ್ನು ತನ್ನ ಒಡಲಲ್ಲಿ ವಿಲೀನ ಮಾಡಿಕೊಂಡ ಮೇಲೆ, ಬ್ಯಾಂಕುಗಳ ವಿಲೀನದ ಪ್ರಕ್ರಿಯೆ ಮುನ್ನೆಲೆಗೆ ಬಂತು. ಇಂದು ಅನುತ್ಪಾದಕ ಅಸ್ತಿಗಳು, ಸುಸ್ತಿ ಸಾಲದ ವಸೂಲಿಯ ನಂತರ ಅತಿ ಹೆಚ್ಚು ಚರ್ಚೆಗೊಳಗಾಗುತ್ತಿರುವ ವಿಷಯವೆಂದರೆ ಬ್ಯಾಂಕುಗಳ ವಿಲೀನ. ಭವಿಷ್ಯದಲ್ಲೂ ಒಂದಷ್ಟು ಬ್ಯಾಂಕ್‌ಗಳು ವಿಲೀನ ಪ್ರಕ್ರಿಯೆಯಲ್ಲಿ ಸರತಿಯಲ್ಲಿ ನಿಂತಿವೆ.
ಸಾಮಾನ್ಯ ಭಾಷೆಯಲ್ಲಿ ಇದು ಒಂದು ಬ್ಯಾಂಕಿನ ಮಾಲೀಕತ್ವವು ಕಾನೂನಿನ ಅಡಿಯಲ್ಲಿ ಸಂಬಂಧಪಟ್ಟವರ ಅನುಮತಿಯೊಂದಿಗೆ ಇನ್ನೊಂದು ಬ್ಯಾಂಕ್‌ಗೆ ವರ್ಗಾವಣೆ ಯಾಗಿ ತನ್ನತನ ಮತ್ತು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳವುದು. ಈ ವರ್ಗಾವಣೆಯಲ್ಲಿ ಬ್ಯಾಂಕಿನ ಸ್ವತ್ತು ಮಾತ್ರವಲ್ಲ; ಹಲವು ಬಾರಿ ವ್ಯವಹಾರದ ಸ್ಥಳ ಕೂಡ ಬದಲಾಗುತ್ತದೆ. ಹಾಗೆಯೇ ಬ್ಯಾಂಕಿನಲ್ಲಿ ಗ್ರಾಹಕರ ವ್ಯವಹಾರವನ್ನು ನೋಡಿಕೊಳ್ಳುವ ಸಿಬ್ಬಂದಿಗಳ ಬದಲಾವಣೆಯೂ ಆಗಬಹುದು. ಬ್ಯಾಂಕ್ ಅಥವಾ ವ್ಯವಹಾರದಲ್ಲಿ ಮೂಲಭೂತವಾದ ಯಾವುದೇ ಬದಲಾವಣೆ ಆಗದೆ, ವಿಲೀನದ ನಂತರ ಕೆಲವು ಕಾಸ್ಮೆಟಿಕ್ ಬದಲಾವಣೆಯನ್ನು ಕಾಣಬಹುದು. ವಿಲೀನ ಪ್ರಕ್ರಿಯೆಯ ನಂತರ, ಗ್ರಾಹಕರ ಸ್ವತ್ತು-ಸಾಲಗಳು ಯಾವುದೇ ರೀತಿಯ ಮೌಲ್ಯವರ್ಧನೆ ಅಥವಾ ಅಪಮೌಲ್ಯವನ್ನು ಅನುಭವಿಸುವುದಿಲ್ಲ. ಸಾಲ ನೀಡಿಕೆ, ಬಡ್ಡಿ, ವಸೂಲಾತಿ ವಿಷಯದಲ್ಲಿ ವಿಲೀನದ ನಂತರ ಯಾವುದೇ ಬದಲಾವಣೆಯೂ ಆಗುವುದಿಲ್ಲ. ವಿಲೀನದಲ್ಲಿ ಎಷ್ಟು ವಿಧಗಳು ಇರುತ್ತವೆ?
ವಿಲೀನದಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. ಎರಡು ಬ್ಯಾಂಕುಗಳ ನಿರ್ದೇಶಕ ಮಂಡಳಿ, ಅಡಳಿತ ಮಂಡಳಿ ಒಂದು ನಿರ್ದಿಷ್ಟ ಉದೇಶಕ್ಕಾಗಿ ಕಾನೂನಿನ ಅಡಿಯಲ್ಲಿ ಸ್ವ ಇಚ್ಚೆಯಮೇರೆಗೆ ವಿಲೀನಕ್ಕೆ ಮುಂದಾಗುವುದು. ಒಂದು ಬ್ಯಾಂಕ್ ಮುಳುಗುತ್ತಿದ್ದು, ಆ ಬ್ಯಾಂಕ್ ಗ್ರಾಹಕರನ್ನು, ಶೇರುದಾರರನ್ನು ಹಣಕಾಸು ನಷ್ಟದಿಂದ ರಕ್ಷಿಸಲು, ಸರ್ಕಾರ ಅ ಬ್ಯಾಂಕನ್ನು ಒಂದು ಸದೃಢ ಬ್ಯಾಂಕಿನೊಂದಿಗೆ ವಿಲೀನಗೊಳಿಸುತ್ತದೆ. ಮುಳುಗುತ್ತಿದ್ದ ನ್ಯೂ ಬ್ಯಾಂಕ್ ಆಫ್ ಇಂಡಿಯಾವನ್ನು ಪಂಜಾಬ… ನ್ಯಾಷನಲ… ಬ್ಯಾಂಕ್ ನಲ್ಲಿ ವಿಲೀನಗೊಳಿಸಿದಂತೆ.
Related Articles
ಯಾವ ಯಾವ ರೀತಿಯ ವಿಲೀನಗಳಾಗಬಹುದು?
1) ಒಂದು ರಾಷ್ಟ್ರೀಕೃತ ಬ್ಯಾಂಕ್ ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ( ನ್ಯೂ ಬ್ಯಾಂಕ್ ಕಾಫ್ ಇಂಡಿಯಾ
ಪಂಜಾಬ್ ನ್ಯಾಷನಲ… ಬ್ಯಾಂಕ್‌ನಲ್ಲಿ)
2) ಒಂದು ಖಾಸಗಿ ಬ್ಯಾಂಕ್ ಇನ್ನೊಂದು ಖಾಸಗಿ ಬ್ಯಾಂಕ್‌ನಲ್ಲಿ ( ಟೈಮ್ಸ್ ಬ್ಯಾಂಕ್, ಎಚ್‌ಡಿ ಎಫ್ಸಿ ಬ್ಯಾಂಕ್‌ನಲ್ಲಿ)
3) ಒಂದು ಖಾಸಗಿ ಬ್ಯಾಂಕ… ಒಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ( ಟ್ರೇಡರ್ಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದಲ್ಲಿ)
4) ಜಿಲ್ಲಾ ಸಹ ಕಾರಿ ಬ್ಯಾಂಕುಗಳು ರಾಜ್ಯ ಅಪೆಕ್ಸ್ ಬ್ಯಾಂಕುಗಳಲ್ಲಿ ( ಛತ್ತೀಸ್‌ಗಢ ಡಿ.ಸಿ.ಸಿ ಬ್ಯಾಂಕುಗಳು ಛತ್ತಿಸ್‌ಗಢ ಅಪೆಕ್ಸ್ ಬ್ಯಾಂಕ್)
Advertisement
ವಿಲೀನದ ಚಿಂತನೆಯ ಹಿಂದಿನ ಕಾರಣ ಏನು?ಜಾಗತಿಕ ಮಟ್ಟದ 50 ದೊಡ್ಡ ಬ್ಯಾಂಕ್‌ಗಳ ಪಟ್ಟಿಯಲ್ಲಿ ಭಾರತದ ಒಂದೇ ಒಂದು ಬ್ಯಾಂಕ್ ಇಲ್ಲ. ದೇಶದಲ್ಲಿ ಅತಿ ದೊಡ್ಡ ಬ್ಯಾಂಕ್ ಎಂದು ಹಣೆ ಪಟ್ಟಿ ಕಟ್ಟಿಕೊಂಡಿರುವ ಸ್ಟೇಟ… ಬ್ಯಾಂಕ್ ಆಫ್ ಇಂಡಿಯಾ ಕೂಡಾ, ಜಗತ್ತಿನ 100 ದೊಡ್ಡ ಬ್ಯಾಂಕುಗಳಲ್ಲಿ 62 ನೇ ಸ್ಥಾನದಲ್ಲಿ ಇದೆ. (ಸಹವರ್ತಿ ಬ್ಯಾಂಕ್‌ಗಳ ವಿಲೀನದ ನಂತರ ಇದು 45 ಕ್ಕೆ ಏರಿದೆ). ವಿದೇಶಿ ಬ್ಯಾಂಕುಗಳಿಗೆ ಹೋಲಿಸಿದರೆ ನಮ್ಮ ಬ್ಯಾಂಕುಗಳ ಶೇರು ಬಂಡವಾಳ ತೀರಾ ಕಡಿಮೆ. ಅಂತೆಯೇ, ವಿದೇಶಿ ಬ್ಯಾಂಕುಗಳು ನಮ್ಮ ಬ್ಯಾಂಕ್‌ಗಳೊಂದಿಗೆ ದೊಡ್ಡ ಮೊತ್ತದ ವ್ಯವಹಾರ ಮಾಡಲು ಹಿಂದೇಟು ಹಾಕುತ್ತವೆ. ಪಶ್ಚಿಮ ಏಷ್ಯಾದ ಒಂದು ಬ್ಯಾಂಕ್, ಸಾಕಷ್ಟು ಶೇರು ಬಂಡವಾಳ ಇಲ್ಲವೆಂದು ನಮ್ಮ ದೇಶದ ಒಂದು ಬ್ಯಾಂಕಿನ ಲೆಟರ್ ಆಫ್ ಕ್ರೆಡಿಟ… ಮಾನ್ಯ ಮಾಡಲು ಹಿಂದೇಟು ಹಾಕಿತ್ತಂತೆ. ಹಾಗೆಯೇ ಸಾವಿರಾರು ಕೋಟಿ ಮೊತ್ತದ ಸಾಲದ ಬೇಡಿಕೆಯನ್ನು, ಶೇರು ಬಂಡವಾಳದ ಕೊರತೆಯಿಂದಾಗಿ , ಒಂದೇ ಬ್ಯಾಂಕ್, ತಾನೊಬ್ಬನೇ ಇನ್ನೊಂದು ಬ್ಯಾಂಕಿನ ಅಥವಾ ಬ್ಯಾಂಕ್ ಒಕ್ಕೂಟದ ಸಹಾಯವಿಲ್ಲದೇ ಸ್ಪಂದಿಸಲು ಸಾಧ್ಯವಾಗದಿರುವುದು, ಸರ್ಕಾರ, ಬ್ಯಾಂಕುಗಳನ್ನು ವಿಲೀನ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಮತ್ತು ಸಾಕಷ್ಟು ಶೇರು ಬಂಡವಾಳದ ಸಾಮರ್ಥ್ಯ ಇರುವ ಬ್ಯಾಂಕುಗಳ ಸ್ಥಾಪನೆಗೆ ಮುಂದಾಗಿರುವುದು, ಬ್ಯಾಂಕುಗಳ ವಿಲೀನದ ಪರಿಕಲ್ಪನೆಯ ಹಿಂದಿನ ಕಾರಣ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕುಗಳ ಸಂಖ್ಯೆ ಗಿಂತ , ಗಾತ್ರ ಮುಖ್ಯ ಎಂದು ಈಗಿನ ಅರ್ಥ ಸಚಿವರು ಹೇಳಿದ್ದಾರೆ. ಶಾಖೆಗಳ ಸಂಖ್ಯೆಯ ನಿಟ್ಟಿನಲ್ಲಿ ದಿನದಿಂದ ದಿನಕ್ಕೆ ಬ್ಯಾಂಕುಗಳು ದೊಡ್ಡದಾಗುತ್ತಿವೆ. ಆದರೆ ವ್ಯವಹಾರ, ಶೇರು ಬಂಡವಾಳದ ದೃಷ್ಟಿಯಲ್ಲಿ ದೊಡ್ಡದಾಗುತ್ತಿಲ್ಲವೆನ್ನುವ ಕೊರಗು ಸರ್ಕಾರದ್ದು. ಶಾಖೆಗಳು ಹೆಚ್ಚಿದಂತೆ ನಿರ್ವಹಣಾ ವೆಚ್ಚ ಹೆಚ್ಚಾಗುತ್ತದೆ. ಒಂದು ಕಿಲೋಮೀಟರ್ ರಸ್ತೆಯಲ್ಲಿ ಡಜನ್ ಬ್ಯಾಂಕ್‌ಗಳಿದ್ದರೆ, ಬ್ಯಾಂಕುಗಳು ಲಾಭ ಗಳಿಸುವುದು ಹೇಗೆ ಅನ್ನೋ ಪ್ರಶ್ನೆ ಇದೆ. ಈ ಎಲ್ಲಾ ಅಂಶಗಳನ್ನು ವಿಸ್ತೃತವಾಗಿ ವಿಶ್ಲೇಶಿಸಿದ ಸರ್ಕಾರ, ಬ್ಯಾಂಕುಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲು, ಅವುಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸಲು, ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು, ಬ್ಯಾಂಕುಗಳ ಶೇರುಬಂಡವಾಳವನ್ನು ಹೆಚ್ಚಿಸಲು ಅವುಗಳ ಹಾಗೂ ಗಾತ್ರವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿದೆಯಂತೆ. ಈಗ ಪುನಃ ವಿಲೀನ ಏಕೆ?
ಅರ್ಥಿಕ ಸಂಕಷ್ಟದಲ್ಲಿರುವ ಬ್ಯಾಂಕುಗಳು, ಬದಲಾದ ಅರ್ಥಿಕ-ರಾಜಕೀಯ ವಾತಾವರಣ, ಬ್ಯಾಂಕುಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸುವ ಅನಿವಾರ್ಯತೆ, ಬ್ಯಾಂಕುಗಳನ್ನು ಸದೃಢಗೊಳಿಸಿ , ಅವುಗಳಲ್ಲಿ ಜನಸಾಮಾನ್ಯ ಗ್ರಾಹಕರ ವಿಶ್ವಾಸ ಹೆಚ್ಚುವಂತೆ ಮಾಡುವ ಸಂದಿಗªತೆ ಸರ್ಕಾರವನ್ನು ವಿಲೀನದ ನಿಟ್ಟಿನಲ್ಲಿ ಪ್ರೇರೇಪಿಸುತ್ತಿದೆ. ಸುಮಾರು 15 ಲಕ್ಷ$ ಕೋಟಿ ತಲುಪಿರುವ ವಸೂಲಾಗದ ಸಾಲ, ಮನ್ನಾ ಮಾಡಿದ 3.10 ಲಕ್ಷ ಕೋಟಿ ಸಾಲ, ಸರ್ಕಾರ ವಿಲೀನ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಮಾಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸಹವರ್ತಿ ಬ್ಯಾಂಕ್‌ಗಳ ವಿಲೀನದ ನಂತರ 20 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ವಿಲೀನದ ಮೂಸೆಯಲ್ಲಿವೆ. ವಿಲೀನದ ಮಾನದಂಡವೇನು, ಎಷ್ಟು ಬ್ಯಾಂಕುಗಳು ಇರಬೇಕು, ಯಾವ ರೀತಿಯ ಬ್ಯಾಂಕುಗಳು ಇರಬೇಕು, ಅವುಗಳ ಕೇಂದ್ರ ಸ್ಥಾನ ಯಾವುದು ಎನ್ನುವುದು ಇನ್ನೂ ನಿರ್ಧಾರವಾಗಬೇಕಾಗಿದೆ. ವಿಲೀನದ ಚರ್ಚೆಯ ಆರಂಭದ ದಿನಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐದು ವಲಯ ಬ್ಯಾಂಕುಗಳ ಬಗೆಗೆ ಒಲವು ಇತ್ತು. ಇತ್ತೀಚಿಗಿನ ದಿನಗಳಲ್ಲಿ 5-6 ಅಥವಾ 10-12 ಬ್ಯಾಂಕುಗಳನ್ನಾಗಿ ಪರಿವರ್ತಿಸಬಹುದು ಎನ್ನುವ ವದಂತಿ ಹರಿದಾಡುತ್ತಿತ್ತು. ಬಲಿಷ್ಟ- ದುರ್ಬಲ, ದುರ್ಬಲ- ದುರ್ಬಲ, ಬಲಿಷ್ಟ- ಬಲಿಷ್ಟ, ದಕ್ಷಿ$ಣ- ದಕ್ಷಿ$ಣ, ದಕ್ಷಿ$ಣ-ಉತ್ತರ, ಉತ್ತರ- ಉತ್ತರ, ಪಶ್ಚಿಮ- ಪೂರ್ವ ಕೇಂದ್ರೀಕೃತ ಬ್ಯಾಂಕುಗಳು, ಹೀಗೆ ಹಲವಾರು ಕಾಂಬಿನೇಷನ್ ಮತ್ತು ಮಾನದಂಡಗಳು ಪರಿಶೀಲನೆಯಲ್ಲಿದೆ. ವಿಲೀನದಲ್ಲಿರುವ ಸಮಸ್ಯೆಗಳೇನು?
ಪ್ರತಿಯೊಂದು ಬ್ಯಾಂಕಿಗೂ ತನ್ನದೇ ಆದ ವಿಶಿಷ್ಟ ಪ್ರಾದೇಶಿಕ – ಭೌಗೋಳಿಕ, ಭಾಷಾ,ಸಂಸðತಿ ಮತ್ತು ಕಾರ್ಯ ವೈಖರಿಯ ಹಿನ್ನೆಲೆ ಇರುತ್ತದೆ. ಈ ಹಿನ್ನೆಲೆಯಿಂದ ಬಂದ ಸಿಬ್ಬಂದಿಗಳನ್ನು ಒಗ್ಗೂಡಿಸುವುದು ತುಂಬಾ ಕಷ್ಟ. ಈ ಕಾರ್ಯ ಬಹು ಸಮಯವನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ, ಪ್ರತಿಯೊಂದು ಬೇರೆ-ಬೇರೆ ಟೆಕ್ನಿಕಲ… ಪ್ಲಾಟ್ ಫಾರ್ಮ್ ಹೊಂದಿದ್ದು, ಇದೂ ತೊಡಕಾಗುತ್ತದೆ. ಎಸ್‌ಬಿಐನ ಸಹವರ್ತಿ ಬ್ಯಾಂಕ್‌ಗಳು ವಿಲೀನವಾದಾಗ, ಅವು ಒಂದೇ ಸಮೂಹಕ್ಕೆ ಸೇರಿಸಿದ್ದರಿಂದ ಹೆಚ್ಚಿನ ಸಮಸ್ಯೆ ಎದುರಾಗಲಿಲ್ಲ. ಹಾಗೆಯೇ, ಸಿಬ್ಬಂದಿಗಳ ಜ್ಯೇಷ್ಠತೆ, ವರ್ಗಾವರ್ಗಿ ಕೂಡಾ ಸುಗಮ ಅಡಳಿತಕ್ಕೆ ಅಡಚಣೆ ಯಾಗುವುದಲ್ಲದೇ, ನ್ಯಾಯಾಲಯದಲ್ಲಿ ಹೋರಾಟಕ್ಕೂ ದಾರಿಯಾಗಬಹುದು. ಅದರಂತೆ ಶಾಖೆಗÙ rಚಠಿಜಿಟnಚlಜಿzಚಠಿಜಿಟn ಮಾಡುವಾಗ, ಉಳಿಸುವ ಮತ್ತು ಅಳಿಸುವ ಶಾಖೆಗಳ ಬಗೆಗೆ ಸಂಘರ್ಷವಾಗುವುದನ್ನು ಅಲ್ಲಗೆಳೆಯಲಾಗದು. ಉನ್ನತ ದರ್ಜೆಯಲ್ಲಿರುವವರು ಎಲ್ಲರನ್ನೂ ಅದೇ ಸ್ಥಾನದಲ್ಲಿ ಉಳಿಸಿಕೊಳ್ಳುವುದು ಕಷ್ಟ. ಎರಡು ಬ್ಯಾಂಕ್‌ಗಳು ವಿಲೀನವಾದಾಗ ಬ್ಯಾಂಕ್‌ನ ಚೇರ್‌ಮನ್ ಸ್ಥಿತಿ ಏನು? ಕೆಲವು ಉನ್ನತ ಅಧಿಕಾರಿಗಳು ಸ್ವಲ್ಪ ಕೆಳ ದರ್ಜೆಯಲ್ಲಿ ಮುಂದುವರಿಯಬೇಕಾಗುತ್ತದೆ ಅಥವಾ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ವಿಲೀನವಾದ ಬ್ಯಾಂಕ್‌ಗಳ ಸಿಬ್ಬಂದಿಯನ್ನು ಎರಡನೇ ದರ್ಜೆಯವರನ್ನಾಗಿ ನಡೆಸಿಕೊಳ್ಳುವ ಭಯ ಕೂಡಾ ಇದೆ. ಈ ವಿಲೀನ ಪ್ರಕ್ರಿಯೆಯಿಂದ ಯಾರೂ ಕೆಲಸ ಕಳೆದುಕೊಳ್ಳುವುದಿಲ್ಲ. ಆದರೆ ನೆಚ್ಚಿನ ಸ್ಥಳದಿಂದ ಎತ್ತಂಗಡಿ ಯಾಗಬಹುದು. ಹೊಸ ಸ್ಥಳಕ್ಕೆ ಹೊಂದಿಕೊಳ್ಳಲು ಕಷ್ಟವಾಗಬಹುದು. ಉದ್ಯೋಗ ಬಡ್ತಿಯಲ್ಲಿ, ಜ್ಯೇಷ್ಠತೆ ನಿಟ್ಟಿನಲ್ಲಿ ಸಮಸ್ಯೆಗಳು ಎದುರಾಗಬಹುದು. ಈಗ ಬ್ಯಾಂಕುಗಳಲ್ಲಿ ನಿವೃತ್ತಿ ಪರ್ವ ನಡೆಯುತ್ತಿದ್ದು, ಹೆಚ್ಚುವರಿ ಸಿಬ್ಬಂದಿಗಳನ್ನು ಉಳಿಸಿಕೊಳ್ಳುತ್ತಿದ್ದು, ಒಂದರಡು ವರ್ಷದಲ್ಲಿ ಸಿಬ್ಬಂದಿಗಳ ಸಂಖ್ಯೆಯ ಸಮತೋಲನ ಕಾಣಬಹುದು. ವಿಲೀನದಿಂದ ಶಾಖೆಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ಉದ್ಯೋಗ ನೀಡಿಕೆಯ ಅವಕಾಶವೇ ಕಡಿಮೆಯಾಗಬಹುದು. ಕಾರ್ಮಿಕ ಸಂಘಗಳ ವಿರೋಧವೇಕೆ?
ಈ ವಿಲೀನ ಪ್ರಕ್ರಿಯೆಯಲ್ಲಿ ಕಾರ್ಮಿಕ ಸಂಘದ ನಾಯಕರು, ಸದಸ್ಯರು, ಬ್ಯಾಂಕ್ ಖಾಸಗೀಕರಣದ ಹಿಂದೆ ಇರಬಹುದಾದ ದೂರಗಾಮಿ ಗೌಪ್ಯ ಅಜೆಂಡಾವನ್ನು ಸಂಶಯಿಸುತ್ತಿದ್ದಾರೆ. ವಿಲೀನ ಪ್ರಕ್ರಿಯೆ ಪೂರ್ಣಗೊಂಡ ನಂತರ, ಬ್ಯಾಂಕ್‌ಗಳು ಸೋಷಿಯಲ್ ಬ್ಯಾಂಕಿಂಗ್ ಬಿಟ್ಟು ಲಾಭ ತರುವ ಕಮರ್ಶಿಯಲ… ಬ್ಯಾಂಕಿಂಗ್‌ನತ್ತ ಸರಿಯಬಹುದು ಅನ್ನುವವರೂ ಇದ್ದಾರೆ. ಅರ್ಥಿಕವಾಗಿ ಕೆಳಸ್ತಳದಲ್ಲಿದ್ದವರಿಗೆ ಮತ್ತು ಶೋಷಿತರಾದವರಿಗೆ ಆಶ್ರಯವಾಗದೇ ಮುಂದಿನ ದಿನಗಳಲ್ಲಿ ಉಳ್ಳವರಿಗೆ ಮಾತ್ರ ಸೀಮಿತವಾಗಿ ಅವರಿಗೆ ಊರು ಗೋಲಾಗಬಹುದು. ವಿಲೀನ ಪ್ರಕ್ರಿಯೆಯಿಂದ ಕೆಲವು ಶಾಖೆಗಳನ್ನೇ ಮುಚ್ಚಬೇಕಾದಾಗ, ಲಾಭ ತರದ ಗ್ರಾಮಾಂತರ ಶಾಖೆಗಳು ಬಲಿ ಪಶುಗಳಾಗಿ ಮಾಡಬಹುದು ಅನ್ನೋ ಅನುಮಾನವೂ ಇದೆ. ಬ್ಯಾಂಕಿಂಗ್ ವಲಯದ ಆದ್ಯತೆ ಸುಸ್ತಿ ಸಾಲದಿಂದ ಬ್ಯಾಂಕುಗಳನ್ನು ಉಳಿಸಿ ಬೆಳಸುವುದೇ ವಿನಃ, ಅವುಗಳನ್ನು ಮುಚ್ಚಿ ಅರ್ಥಿಕ ಪ್ರಗತಿಗೆ ಕೆಂಪು ನಿಶಾನೆ ತೋರುವುದಲ್ಲ. ಬ್ಯಾಂಕುಗಳ ಮತ್ತು ಶಾಖೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದೇ ಉದ್ದೇಶವಾದರೆ, ಹೊಸ ಬ್ಯಾಂಕ್ ಸ್ಥಾಪನೆಗೆ ಅನುಮತಿಯನ್ನು ಕೊಡುವುದು ಏಕೆ ಅನ್ನೋ ಪ್ರಶ್ನೆಯನ್ನು ಕಾರ್ಮಿಕ ಸಂಘಗಳು ಕೇಳುತ್ತಿವೆ. ಈ ನಿಲುವು ಸರ್ಕಾರದ ಮಹತ್ವಾ ಕಾಂಕ್ಷಿ ಹಣಕಾಸು ಸೇರ್ಪಡೆ ಗೆ ಅಡ್ಡಿಯಾಗಬಹುದು ಅನ್ನೋ ಅನುಮಾನವೂ ಇದೆ. ಮೊದಲು ಬ್ಯಾಂಕ್‌ಗಳ ಅರ್ಥಿಕ ಆರೋಗ್ಯ ಸುಧಾರಿಸಲಿ, ಅಮೇಲೆ ವಿಲೀನವಾಗಲಿ ಎನ್ನುವ ಹಿಂದಿನ ರಿಸರ್ವ್‌ಬ್ಯಾಂಕ್ ಗವರ್ನರ್ ರಘುರಾಮನ… ರಾಜನ್ ಸಲಹೆಯಲ್ಲಿ ಕಾರ್ಮಿಕ ಸಂಘಗಳು ಬಲವನ್ನು ಕಂಡುಕೊಂಡಿವೆ. ರಮಾನಂದ ಶರ್ಮ