Advertisement
ರೈತ ಮುಖಂಡರಾದ ಹೂ.ಕೆ.ಮಹೇಂದ್ರ, ಎಚ್.ಸಿ.ನರಸಿಂಹಮೂರ್ತಿ ಮಾತನಾಡಿ,ಬ್ಯಾಂಕ್‌ನಲ್ಲಿ 11 ಸಾವಿರಕ್ಕೂ ಅಧಿಕಸದಸ್ಯರಿದ್ದು, ಸದಸ್ಯರಿಗೆ ವಾರ್ಷಿಕ ಸಭೆಯಆಹ್ವಾನ ಪತ್ರಿಕೆ ನೀಡಿಲ್ಲ ಎಂದು ದೂರಿದರು.ಇದಕ್ಕೆ ಪ್ರತಿಕ್ರಿಯಿಸಿದ ಎಂ.ಡಿ.ಮಂಚಯ್ಯ,ನಿಯಮ ಪ್ರಕಾರ ಸದಸ್ಯತ್ವ ಇರುವ 5047ಮಂದಿಗೆ ಆಹ್ವಾನ ಪತ್ರ ಕಳುಹಿಸಲಾಗಿದೆ ಎಂದು ಅಂಚೆ ಇಲಾಖೆಯ ಸ್ವೀಕೃತಿ ದಾಖಲೆಗಳನ್ನು ಪ್ರದರ್ಶಿಸಿದರು. ಅಂಬೇಡ್ಕರ್ ಭವನದಲ್ಲಿ 200- 250 ಮಂದಿ ಮಾತ್ರ ಕುಳಿತುಕೊಳ್ಳಲು ಅವಕಾಶ ಇದೆ. ಆದರೆ, 5,047 ಮಂದಿಗೆ ಆಹ್ವಾನ ನೀಡಿದ್ದರೆ ಇಷ್ಟು ಚಿಕ್ಕ ಭವನದಲ್ಲಿ ವಾರ್ಷಿಕಸಭೆ ನಡೆಸಲು ಹೇಗೆ ಸಾಧ್ಯ ಎಂದು ಸದಸ್ಯರು ಪ್ರಶ್ನಿಸಿದರು.
Related Articles
Advertisement
ಆಕ್ರೋಶ: ಮಧ್ಯಾಹ್ನವಾಗುತ್ತಿದ್ದಂತೆಯೇ ಸಭೆಗೆಗ್ರಾಮೀಣ ಭಾಗದಿಂದ ರೈತರು ಆಗಮಿಸಿದ್ದರು. ವಾರ್ಷಿಕ ಸಭೆಯಲ್ಲಿ ಉಪಾಹಾರ ವ್ಯವಸ್ಥೆ ಕಲ್ಪಿಸಿಲ್ಲ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಉದ್ರಿಕ್ತರಾದ ರೈತರು ಆಡಳಿತಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರೈತರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗದ ಇದೊಂದು ವಾರ್ಷಿಕ ಸಭೆಯೇ?,ಕನಿಷ್ಠ ಸೌಜನ್ಯವೂ ಇಲ್ಲ ಎಂದು ದೂರಿದಸದಸ್ಯರು, ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಈ ಸಂದರ್ಭದಲ್ಲಿ ಆಡಳಿತಮಂಡಳಿ ಸಮಾಧಾನ ಪಡಿಸಲು ಯತ್ನಿಸಿದರೂಯಾವುದೇ ಉಪಯೋಗ ಆಗಲಿಲ್ಲ. ಒಟ್ಟರೆ ಪಿಕಾರ್ಡ್ ಬ್ಯಾಂಕ್ ವಾರ್ಷಿಕ ಸಭೆ ಗೊಂದಲ, ಅವ್ಯವಸ್ಥೆಗಳ ಆಗರವಾಗಿತ್ತು.
ಸಭೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಎನ್.ಮಲ್ಲಿಕಾರ್ಜುನ, ಶಂಕರ ಲಿಂಗೇಗೌಡ, ಪುಟ್ಟರಾಜು, ಗುರುಮೂರ್ತಿ, ಶುಭಮಂಗಳಾ, ನಾಗರಾಜು, ನಾಗರಾಜು,ಬಸವರಾಜು, ಚಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಾರ್ಷಿಕ ಸಭೆ ಅಪಾರ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು.ಮಧ್ಯಾಹ್ನದ ವೇಳೆಯಲ್ಲಿ ರೈತರ ಸ್ಥಿತಿಗಮನಿಸಿದಾಗ ಉಪಾಹಾರದವ್ಯವಸ್ಥೆ ಮಾಡಬೇಕಿತ್ತು ಅನಿಸಿತು. ಕೋವಿಡ್ ಹಿನ್ನೆಲೆಯಲ್ಲಿ ಉಪಾಹಾರ ಕಲ್ಪಿಸಿಲ್ಲ. ನಮ್ಮಿಂದ ತಪ್ಪಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ. – ಎಂ.ಡಿ.ಮಂಚಯ್ಯ, ಬ್ಯಾಂಕ್ ಅಧ್ಯಕ್ಷ