Advertisement

ವಿಜಯಪುರ : ಸಾಲಕ್ಕೆ ಹೆದರಿ ನವವಿವಾಹಿತ ಯುವ ರೈತ ಆತ್ಮಹತ್ಯೆ

06:48 PM Jan 12, 2021 | sudhir |

ವಿಜಯಪುರ : ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಕೆಲವೇ ತಿಂಗಳ ಹಿಂದೆ ವಿವಾಹ ಆಗಿದ್ದ ಯುವ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

Advertisement

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ರೈತನನ್ನು ವೀರೇಶ ಮಾರುದ್ರಪ್ಪ ಬಡಿಗೇರ ಎಂದು ಗುರುತಿಸಲಾಗಿದೆ.

ಕಳೆದ 7 ತಿಂಗಳ ಹಿಂದಷ್ಟೇ ಸುಧಾ ಎಂಬವರೊಂದಿಗೆ ವೀರೇಶನ ವಿವಾಹವಾಗಿತ್ತು. ದೇವರಹಿಪ್ಪರಗಿ ತಾಲೂಕು ಕೊಕಟನೂರಲ್ಲಿ ಜಮೀನು ಇದ್ದು ಅಲ್ಲೇ ಕೃಷಿಕನಾಗಿದ್ದ. ಅಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಾಗೂ ಖಾಸಗಿಯಾಗಿ ಸುಮಾರು 5 ಲಕ್ಷ ರೂ. ವರೆಗೆ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಸಂಪುಟ ವಿಸ್ತರಣೆಗೆ ಕ್ಷಣಗಣನೆ; ಏಳು ಶಾಸಕರಿಗೆ ಮಂತ್ರಿಪಟ್ಟ…ಯಾರ ಪಾಲಿಗೆ ಅದೃಷ್ಟ?

ಮದುವೆಯಾದ ಮೇಲೆ ತಾಯಿಯ ತವರುಮನೆ ಬಿದರಕುಂದಿ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಈತ ಸಾಲ ಮಾಡಿ ಖರೀದಿಸಿದ್ದ ಬೈಕ್ ಮರುಪಾವತಿ ಆಗದ ಕಾರಣ ಫೈನಾನ್ಸ್ ಸಂಸ್ಥೆ ಈಚೆಗೆ ಸ್ವಾದೀನ‌ಕ್ಕೆ ಪಡೆದಿತ್ತು. ಇದರಿಂದ ತೀವ್ರ ಮಾನಸಿಕವಾಗಿ ನೊಂದಿದ್ದ ವಿರೇಶ, ಖಿನ್ನತೆಗೆ ಒಳಗಾಗಿದ್ದ.

Advertisement

ಗರ್ಭಿಣಿ ಪತ್ನಿಯನ್ನು ತಾನೇ ಸೋಮವಾರ ತವರು ಮನೆಗೆ ಕಳಿಸಿ, ಇಂದು ಊರಿಗೆ ಮರಳಿ ಬೆಳಿಗ್ಗೆ ನೇಣಿಗೆ ಶರಣಾಗಿದ್ದಾನೆ.

ಈ ಬಗ್ಗೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.