Advertisement

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಕೋಟಿ ರೂ. ಸಾಲ

01:31 PM Jan 15, 2022 | Team Udayavani |

ಕೋಲಾರ: ಪ್ರತಿ ಶೋಷಿತ, ಬಡ ಕುಟುಂಬಕ್ಕೂ ಸಾಲ ಸೌಲಭ್ಯ ತಲುಪಿಸುವ ಸಂಕಲ್ಪದೊಂದಿಗೆ ಅವಿಭಜಿತ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 100ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ಜಿಲ್ಲೆಯ ಕೆಜಿಎಫ್‌ ತಾಲೂಕಿನ ವೆಂಗಸಂದ್ರದ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿಎನ್‌.ಜಿ.ಹುಲ್ಕೂರು ಹಾಗೂ ವೆಂಗಸಂದ್ರ ಗ್ರಾಪಂ ವ್ಯಾಪ್ತಿಯ ರೈತರು, ಮಹಿಳೆಯರಿಗೆ ಬ್ಯಾಂಕ್‌ ಸಾಲ ಸೌಲಭ್ಯದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ಶಕ್ತಿಸಹಕಾರ ರಂಗಕ್ಕೆ ಮಾತ್ರವಿದೆ, ಯಾವುದೇ ಬ್ಯಾಂಕ್‌ ಸಾಲ ನೀಡುವುದಿಲ್ಲ ಎಂದು ತಿರಸ್ಕಾರಕ್ಕೆ ಒಳಪಟ್ಟ ಬಡ ರೈತರು, ಮಹಿಳೆಯರನ್ನು ಗುರುತಿಸಿ ನೆರವಾಗುವ ಆಲೋಚನೆ ನಮ್ಮದಾಗಿದೆ. ಅಂತಹ ಶಕ್ತಿ, ಬಲಿಷ್ಠತೆಸಹಕಾರ ರಂಗಕ್ಕಿದೆ ಎಂದು ವಿವರಿಸಿದರು.

ರೈತರು ಬೆಳೆ ಬೆಳೆಯಲು ಸಿದ್ಧ: ಜಾತಿ, ಪಕ್ಷರಹಿತವಾಗಿ ಕೇವಲ 5 ಗುಂಟೆ, 10 ಗುಂಟೆ ಜಮೀನುಹೊಂದಿರುವ ರೈತರಿಗೂ ಸಾಲ ನೀಡುವ ಧ್ಯೇಯಹೊಂದಿದ್ದೇವೆ, ಸದಾ ಮಳೆಯಿಲ್ಲದೇ ಬರಎದುರಿಸುತ್ತಿದ್ದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿದೇವರ ಕೃಪೆಯಿಂದ ನೀರು ಕಾಣಿಸುತ್ತಿದೆ, ರೈತರು ಬೆಳೆ ಬೆಳೆಯಲು ಸಿದ್ಧರಿದ್ದು, ಅವರಿಗೆ ಬೆಳೆ ಸಾಲಒದಗಿಸಿ ನೆರವಿಗೆ ಡಿಸಿಸಿ ಬ್ಯಾಂಕ್‌ ನಿಲ್ಲಲಿದೆ ಎಂದು ತಿಳಿಸಿದರು.

ಶೋಷಿತರ ಧ್ವನಿಯಾಗಬೇಕು: ಡಿಸಿಸಿ ಬ್ಯಾಂಕ್‌ಪ್ರಯತ್ನಕ್ಕೆ ಸೊಸೈಟಿಗಳು ಕೈಜೋಡಿಸಬೇಕು, ಕೇವಲಪಡಿತರ ವಿತರಣೆಗೆ ಸೀಮಿತವಾಗದೇ ರೈತರು,ಮಹಿಳೆಯರಿಗೆ ನೆರವಾಗುವ ಮೂಲಕ ಬಡ,ಶೋಷಿತರ ಧ್ವನಿಯಾಗಬೇಕು ಎಂದು ಕಿವಿಮಾತು ಹೇಳಿದರು.

Advertisement

ಮನೆ ಬಾಗಿಲಿಗೆ ಬ್ಯಾಂಕ್‌ ಸೌಲಭ್ಯ: ಶಾಸಕಿ ಎಂ. ರೂಪಕಲಾ ಮಾತನಾಡಿ, ನಾನು ಶಾಸಕಿಯಾದರೂಡಿಸಿಸಿ ಬ್ಯಾಂಕ್‌ ನಿರ್ದೇಶಕಿಯಾಗಿ ಜವಾಬ್ದಾರಿ ಇದೆ,ಸಾಲ ಅಗತ್ಯವಿರುವವರನ್ನು ಗುರುತಿಸುವ ಕೆಲಸವನ್ನುಮಾಡಿ, ಆರ್ಥಿಕವಾಗಿ ಬಲ ತುಂಬುವ ಕೆಲಸ ಮಾಡೋಣ ಎಂದು ಕೋರಿದರು.

ಕೋವಿಡ್‌ 1 ಮತ್ತು 2ನೇ ಅಲೆಯಿಂದ ಆರ್ಥಿಕತೆಗೆ ಪೆಟ್ಟು ಬಿದ್ದಿದೆ, ರೈತರು ಸಂಕಷ್ಟಕ್ಕೊಳಗಾಗಿದ್ದಾರೆ,ಕೆರೆಗಳಿಗೆ ನೀರು ಬಂದಿದ್ದು, ಕೃಷಿ ಚೇತರಿಕೆಯತ್ಸಾಗುತ್ತಿರುವಾಗಲೇ 3ನೇ ಅಲೆಯ ಆತಂಕವೂ ಇದೆ.ಈ ಹಿನ್ನೆಲೆಯಲ್ಲಿ ಬೆಳೆ ಇಡುವ ಪ್ರಾಮಾಣಿಕ ರೈತರಿಗೆನೆರವಾಗುವ ಪ್ರಯತ್ನ ನನ್ನದಾಗಿದೆ ಎಂದು ತಿಳಿಸಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿ, ಕುಟುಂಬಕ್ಕೂ ಸಾಲ ಸೌಲಭ್ಯವನ್ನು ತಲುಪಿಸುವ ಬದ್ಧತೆ ಡಿಸಿಸಿ ಬ್ಯಾಂಕ್‌ಅಧ್ಯಕ್ಷರು, ಆಡಳಿತ ಮಂಡಳಿಯವರಿಗಿದೆ. ಅವರಆಶಯವನ್ನು ಈಡೇರಿಸಲು ನಾವು ಸಂಕಲ್ಪತೊಡೋಣ, ಬಡ ರೈತರನ್ನು ಗುರುತಿಸಿ ಅವರಿಗೆಸಹಾಯ ಸಿಗುವಂತೆ ಮಾಡೋಣ ಎಂದು ಹೇಳಿದರು.

ಬಡ್ಡಿದಂಧೆಗೆ ಮುಕ್ತಿ ಕಾಣಿಸಿ: ಕೆಜಿಎಫ್‌ ತಾಲೂಕಿನ ರೈತರು, ಮಹಿಳೆಯರಿಗೆ ಅತಿ ಹೆಚ್ಚು ಸಾಲ ಸೌಲಭ್ಯ ಒದಗಿಸುವುದು ಡಿಸಿಸಿ ಬ್ಯಾಂಕ್‌ನ ಧ್ಯೇಯವಾಗಿದೆ. ಸಾಲ ಪಡೆಯಲು ಅಗತ್ಯ ದಾಖಲೆಗಳನ್ನು ಆಯಾಗ್ರಾಪಂ ವ್ಯಾಪ್ತಿಯ ಮುಖಂಡರು ಸಂಗ್ರಹಿಸಬೇಕು,ರೈತರಿಗೆ ಸಾಲ ಸೌಲಭ್ಯದ ಅರಿವು ನೀಡಬೇಕು,ಮಹಿಳೆಯರಿಗೆ ಸಂಘ ರಚಿಸಿಕೊಂಡು ಬಡ್ಡಿರಹಿತಸಾಲ ಪಡೆದು ಜನರ ರಕ್ತ ಹೀರುವ ಮೀಟರ್‌ ಬಡ್ಡಿದಂಧೆಗೆ ಮುಕ್ತಿ ಕಾಣಿಸಬೇಕು ಎಂದರು.

ಕೆಜಿಎಫ್‌ ತಾಲೂಕು ಎಪಿಎಂಸಿ ಅಧ್ಯಕ್ಷವಿಜಯರಾಘವರೆಡ್ಡಿ, ಪದ್ಮನಾಭರೆಡ್ಡಿ, ಎಂ.ಬಿ.ಕೃಷ್ಣಪ್ಪ, ನಲ್ಲೂರು ಸುರೇಂದ್ರ, ಶಂಕರ್‌, ಮುಖಂಡರಾದ ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕಪ್ರಭಾಕರ್‌, ಗ್ರಾಪಂಮಾಜಿ ಅಧ್ಯಕ್ಷ ಶ್ರೀರಾಮಪ್ಪ, ನಾರಾಯಣಸ್ವಾಮಿ,ನರೇಶ್‌, ಅನೇಕ ಮುಖಂಡರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next