Advertisement

ಸಾಲು ಸಾಲು ಬ್ಯಾಂಕ್‌ ರಜೆ?

06:10 AM Dec 16, 2018 | |

ನವದೆಹಲಿ: ಡಿಸೆಂಬರ್‌ 20ರ ನಂತರ ಬ್ಯಾಂಕ್‌ ಕೆಲಸಗಳನ್ನು ಮಾಡಬೇಕು ಎಂದು ನೀವು ಯೋಜಿಸಿಕೊಂಡಿದ್ದರೆ, ಮೊದಲೇ
ಮುಗಿಸಿಕೊಳ್ಳಿ. ಯಾಕೆಂದರೆ ಡಿ. 21ರಿಂದ 25ರವರೆಗೆ ಸರಣಿ ರಜೆಗಳಿದ್ದು, 5 ದಿನಗಳವರೆಗೆ ಸತತವಾಗಿ ಬ್ಯಾಂಕ್‌ ಮುಚ್ಚಿರಲಿದೆ.

Advertisement

ಬ್ಯಾಂಕ್‌ ನೌಕರರು ಡಿ. 21 ಹಾಗೂ 26 ರಂದು ಮುಷ್ಕರ ಹೂಡಲು ನಿರ್ಧರಿಸಿದ್ದಾರೆ. ವಾರದಲ್ಲಿ ಐದು ದಿನಗಳ ಕೆಲಸ, ಸಂಬಳ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಮುಷ್ಕರಕ್ಕೆ ಕರೆ ನೀಡಿದೆ. ಈ ಮಧ್ಯೆ ಡಿ.22 ನಾಲ್ಕನೇ ಶನಿವಾರವಾಗಿರಲಿದೆ. ಡಿ. 23 ಭಾನುವಾರವಾಗಿದ್ದರೆ, ಡಿ.25 ಕ್ರಿಸ್‌ಮಸ್‌ ಪ್ರಯುಕ್ತ ರಜೆ ಇರಲಿದೆ. ಈ ಮಧ್ಯೆ ಸೋಮವಾರ ಅಂದರೆ ಡಿ. 24 ರಂದು ಮಾತ್ರ ಬ್ಯಾಂಕ್‌ ಕಾರ್ಯನಿರ್ವಹಿಸಲಿದೆ. ಅಂದು ತುರ್ತು ಕೆಲಸವಿರುವವರು ಬ್ಯಾಂಕ್‌ಗೆ ತೆರಳುವುದರಿಂದ, ಶಾಖೆಗಳಲ್ಲಿ ಬೇಗನೆ ಕೆಲಸ ಆಗದು.

Advertisement

Udayavani is now on Telegram. Click here to join our channel and stay updated with the latest news.

Next