Advertisement

ಸಾಲ ಪಡೆದು ಬ್ಯಾಂಕ್‌ಗೆ ವಂಚನೆ: ಇಡಿ ದಾಳಿ

02:47 PM Jun 08, 2023 | Team Udayavani |

ಬೆಂಗಳೂರು: ವಂಚನೆ ಆರೋಪದ ಮೇಲೆ ಭಾರತ್‌ ಇನ್ಫ್ರಾ ಎಕ್ಸ್‌ಪೋರ್ಟ್‌ ಆ್ಯಂಡ್‌ ಇಂಪೋರ್ಟ್ಸ್ ಲಿಮಿಟೆಡ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಂಪನಿಗೆ ಸಂಬಂಧಿಸಿದ ಬೆಂಗಳೂರು ಮತ್ತು ದಾವಣಗೆರೆ 7 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

Advertisement

ಇದೇ ವೇಳೆ 100 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳು ಪತ್ತೆಯಾಗಿದ್ದು, ಸಂಸ್ಥೆ ಹೊಂದಿರುವ ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ತಿಳಿಸಿದೆ. ಭಾರತ್‌ ಇನ್ಫ್ರಾ ಎಕ್ಸ್‌ಪೋರ್ಟ್‌ ಆ್ಯಂಡ್‌ ಇಂಪೋರ್ಟ್ಸ್ ಲಿಮಿಟೆಡ್‌ ಬೆಂಗಳೂರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ವಿವಿಧ ರೂಪದಲ್ಲಿ 113.38 ಕೋಟಿಗೂ ಅಧಿಕ ಸಾಲ ಪಡೆದುಕೊಂಡಿತ್ತು. ಆದರೆ, ಸಕಾಲದಲ್ಲಿ ಮರು ಪಾವತಿಸದ ಕಾರಣ 2017ರಲ್ಲಿ ಕಂಪನಿಯ ಖಾತೆಯನ್ನು ಅನುತ್ಪಾದಕ ಆಸ್ತಿ(ಎನ್‌ಪಿಎ) ಘೋಷಣೆ ಮಾಡಲಾಗಿತ್ತು. ಈ ವೇಳೆ 113.38 ಕೋಟಿಬಾಕಿ ಉಳಿಸಿಕೊಂಡಿತ್ತು ಎಂಬುದು ಪತ್ತೆಯಾಗಿದೆ.

ಈ ಸಂಬಂಧ ಬ್ಯಾಂಕ್‌ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಈ ವೇಳೆ ವಂಚಿಸಿದ ಕಂಪನಿ ಬ್ಯಾಂಕ್‌ನಿಂದ ಪಡೆದ ಸಾಲವನ್ನು ದುರುಪಯೋಗ ಪಡಿಸಿಕೊಂಡಿದ್ದು, ಈ ಹಣವನ್ನು ಬೇರೆಡೆ ಹೂಡಿಕೆ ಮಾಡಿದೆ. ಅದನ್ನು ಮರೆಮಾಚಲು ಕಂಪನಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ಸಲ್ಲಿಸಿರುವುದು ಗೊತ್ತಾಗಿದೆ.

ಇಡಿ ತನಿಖೆ ವೇಳೆ 101.18 ಕೋಟಿ ರೂ. ಅನ್ನು ಆರಾಧ್ಯ ವೈರ್‌ ರೋಪ್ಸ್‌ ಪ್ರೈ.ಲಿಗೆ 10 ಸಾಲದ ಪತ್ರದ ಮೂಲಕ ನೀಡಿದೆ. ಹಲವು ಬ್ಯಾಂಕ್‌ ಖಾತೆ ಮೂಲಕ ಹಣ ವಹಿವಾಟು ನಡೆಸಿರುವುದು ಗೊತ್ತಾಗಿದೆ. ಜತೆಗೆ ಕೆಲ ಸಂದರ್ಭದಲ್ಲಿ ಈ 2 ಕಂಪನಿಗಳಿಗೆ ನಕಲಿ ವಾಹನಗಳ ವಿವರ ಮತ್ತು ಇನ್‌ವಾಯ್ಸ ಗಳನ್ನು ನೀಡಿದ ಸಾರಿಗೆ ಗುತ್ತಿಗೆದಾರ ಮತ್ತು ಮಧ್ಯವರ್ತಿಗಳ ಪರವಾಗಿ ಪಾವತಿ ಮಾಡಲಾಗಿದೆ ಎಂದು ಇ.ಡಿ. ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next