Advertisement

ಶಾಸಕರು-ಮಾಜಿ ಸಚಿವರ ಸ್ಪರ್ಧೆ ತಂದ ಕುತೂಹಲ!

12:12 PM Oct 27, 2020 | sudhir |

ಬಾಗಲಕೋಟೆ: ಸಹಕಾರ ವಲಯದ ಹಿರಿಯಣ್ಣ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಚುನಾವಣೆ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದು, ಇಬ್ಬರು ಹಾಲಿ ಶಾಸಕರು, ಇಬ್ಬರು ಎಂಎಲ್‌ಸಿಗಳು ಹಾಗೂ ಮೂವರು ಮಾಜಿ ಸಚಿವರು ಕಣದಲ್ಲಿದ್ದಾರೆ.
ಇದರಿಂದ ಸಹಕಾರ ಬ್ಯಾಂಕ್‌ನ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

Advertisement

ಹೌದು. ಪ್ರಸಕ್ತ ಚುನಾವಣೆಗೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್‌ ನ ಮಾಜಿ ಸಚಿವ ಎಸ್‌.ಆರ್‌.ಪಾಟೀಲ, ಕಾಂಗ್ರೆಸ್‌ ಶಾಸಕ ಆನಂದ ನ್ಯಾಮಗೌಡ, ಬಿಜೆಪಿಯ ಶಾಸಕ ಸಿದ್ದು ಸವದಿ, ಎಂಎಲ್‌ಸಿ ಹನಮಂತ ನಿರಾಣಿ,
ಕಾಂಗ್ರೆಸ್‌ನ ಮಾಜಿ ಸಚಿವರಾದ ಎಚ್‌.ವೈ.ಮೇಟಿ, ಅಜಯಕುಮಾರ ಸರನಾಯಕ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸ್ಪರ್ಧಿಸಿದ್ದಾರೆ. ಹೀಗಾಗಿ ಪ್ರತಿ ಬಾರಿಗಿಂತಲೂ ಈ ಬಾರಿ ಸಹಕಾರ ಬ್ಯಾಂಕ್‌ ಚುನಾವಣೆ ಪ್ರತಿಷ್ಠೆ ಹಾಗೂ ತುರುಸಿನಿಂದ
ನಡೆಯುತ್ತಿದೆ.

ಪರಿಷತ್‌ನ ವಿರೋಧ ಪಕ್ಷದ ನಾಯಕರೂ ಆಗಿರುವ ಎಸ್‌.ಆರ್‌. ಪಾಟೀಲ ಬೀಳಗಿ ತಾಲೂಕಿನ ಪಿಕೆಪಿಎಸ್‌ ಕ್ಷೇತ್ರದಿಂದ ಮೂರನೇ ಬಾರಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ ಶಾಸಕ ಆನಂದ ನ್ಯಾಮಗೌಡರು ಜಮಖಂಡಿ ಪಿಕೆಪಿಎಸ್‌ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ :ಹುಬ್ಬಳ್ಳಿ: ವಿಭವ ಇಂಡಸ್ಟ್ರೀಸ್‌ನಲ್ಲಿ ಅಗ್ನಿಅನಾಹುತ; ಕೋಟ್ಯಂತರ ರೂ. ಮೌಲ್ಯದ ವಸ್ತು ಹಾನಿ

ಬಿಜೆಪಿಯ ಶಾಸಕ ಸಿದ್ದು ಸವದಿ ರಬಕವಿ-ಬನಹಟ್ಟಿ ಪಿಕೆಪಿಎಸ್‌ ಕ್ಷೇತ್ರದಿಂದ, ಎಂಎಲ್‌ಸಿ ಹನಮಂತ ನಿರಾಣಿ ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಮಾಜಿ ಸಚಿವರಾದ ಎಚ್‌.ವೈ. ಮೇಟಿ ಅವರು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಕ್ಷೇತ್ರ, ಅಜಯಕುಮಾರ ಸರನಾಯಕ ಬಾಗಲಕೋಟೆ ಪಿಕೆಪಿಎಸ್‌ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ. ಕಾಂಗ್ರೆಸ್‌ನ ಇನ್ನೋರ್ವ
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹುನಗುಂದ ಪಿಕೆಪಿಎಸ್‌ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದಾರೆ.

Advertisement

ಸಾಹುಕಾರರ ಚುನಾವಣೆ: ಜಿಲ್ಲೆಯ ಸಹಕಾರ ಬ್ಯಾಂಕ್‌ ಗಳ ಹಿರಿಯಣ್ಣ, ರೈತರ ಕಷ್ಟಕ್ಕೆ ಸ್ಪಂದಿಸಬೇಕಿರುವ ಡಿಸಿಸಿ ಬ್ಯಾಂಕ್‌ ಈ ಬಾರಿ ಸಹಕಾರ ಚುನಾವಣೆ ಬದಲು ಸಾಹುಕಾರರ ಚುನಾವಣೆಯಾಗಿದೆ ಎಂಬ ಮಾತು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಅದರಲ್ಲೂ
ಮಾಜಿ, ಹಾಲಿ ಶಾಸಕರು, ಮಾಜಿ ಸಚಿವರು ತಮ್ಮ ತಮ್ಮ ಪಕ್ಷಗಳ 2ನೇ ದರ್ಜೆಯ ನಾಯಕರಿಗೆ, ಇಲ್ಲವೇ ಜಿಲ್ಲೆಯ ಸಹಕಾರ ವಲಯದ ಪ್ರಮುಖರಿಗೆ ಅವಕಾಶ ಮಾಡಿ ಕೊಡುವ ಬದಲು ತಾವೇ ಚುನಾವಣೆಗೆ ಸ್ಪರ್ಧಿಸಿದ್ದು, ಇದು ಹಲವು ವರ್ಷಗಳಿಂದ
ಸಹಕಾರ ವಲಯದಲ್ಲಿರುವ ಹಿರಿಯರು, ಆಯಾ ಪಕ್ಷಗಳ ಎರಡನೇ, 3ನೇ ದರ್ಜೆಯ ನಾಯಕರಲ್ಲಿ ಅಸಮಾಧಾನವೂ ಮೂಡಿಸಿದೆ.

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next