Advertisement

ಶಿರಡಿ ದೇಣಿಗೆ ಇಡಲು ಜಾಗವಿಲ್ಲ!

12:54 AM Jun 15, 2019 | mahesh |

ಶಿರಡಿ: ಜಗದ್ವಿಖ್ಯಾತ ಸಾಯಿಬಾಬಾ ದೇಗುಲದಲ್ಲಿ ಶುಕ್ರವಾರ ನಡೆಯಬೇಕಿದ್ದ ಭಕ್ತಾದಿಗಳ ದೇಣಿಗೆ ಹಣದ ಎಣಿಕೆ ಕಾರ್ಯ ಸ್ಥಗಿತಗೊಳಿಸಲಾಗಿದೆ. ದೇಣಿಗೆಯಲ್ಲಿ ಬಂದ ನಾಣ್ಯಗಳನ್ನು ಸಂಗ್ರಹಿಸಿಡಲು ತಮ್ಮಲ್ಲಿ ಸ್ಥಳಾವ ಕಾಶವಿಲ್ಲ ಎಂದು ಬ್ಯಾಂಕುಗಳು ತಿಳಿಸಿರು ವುದು ಇದಕ್ಕೆ ಕಾರಣ ಎಂದು ಶಿರಡಿ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್‌ (ಎಸ್‌ಎಸ್‌ಎಸ್‌ಟಿ) ಸಿಇಒ ದೀಪಕ್‌ ಮುಗ್ಲೀಕರ್‌ ತಿಳಿಸಿದ್ದಾರೆ.

Advertisement

ಅಸಲಿಗೆ, ವಾರಕ್ಕೆರಡು ಬಾರಿ ಬ್ಯಾಂಕ್‌ ಅಧಿಕಾರಿಗಳ ಸಮ್ಮುಖದಲ್ಲಿ ದೇಗುಲದಲ್ಲಿ ಹಣ ಎಣಿಕೆ ಮಾಡಲಾಗುತ್ತದೆ. ಪ್ರತಿ ದಿನದ ಒಂದು ಅವಧಿಯ ಎಣಿಕೆಯಲ್ಲಿ ಸರಾಸರಿ 2 ಕೋಟಿ ರೂ. ಸಂಗ್ರಹವಾಗುತ್ತಿದ್ದು ಅದರಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದಷ್ಟು ನಾಣ್ಯಗಳೇ ಇರುತ್ತವೆ. ಅದಿಷ್ಟೂ ಹಣವನ್ನು ಎನ್‌ಎಸ್‌ಎಸ್‌ಟಿಯು ನೋಂದಾಯಿಲ್ಪಟ್ಟಿ ರುವ ಬ್ಯಾಂಕುಗಳಲ್ಲಿ ರೊಟೇಷನ್‌ ಪದ್ಧತಿ ಪ್ರಕಾರ ಠೇವಣಿ ಇಡಲಾಗುತ್ತದೆ. ಈಗಾಗಲೇ 1.5 ಕೋಟಿ ರೂ.ಗಳಷ್ಟು ನಾಣ್ಯಗಳು ರುವುದರಿಂದ ಹೆಚ್ಚಿನ ನಾಣ್ಯ ಸಂಗ್ರಹಣೆಗೆ ಜಾಗವಿಲ್ಲ ಎಂದು ಬ್ಯಾಂಕುಗಳು ಹೇಳಿದ್ದು, ಈ ಸಮಸ್ಯೆ ಬಗೆಹರಿಸುವಂತೆ ಆರ್‌ಬಿಐಗೆ ಪತ್ರ ಬರೆದಿರುವುದಾಗಿ ದೀಪಕ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next