Advertisement

ನೌಕರರ ಮುಷ್ಕರ; ಮೇ 30, 31ರಂದು ಬ್ಯಾಂಕ್ ಬಂದ್

02:11 PM May 24, 2018 | Sharanya Alva |

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮೇ 30, 31ರಂದು ಬ್ಯಾಂಕ್ ಬಂದ್ ಆಗಲಿದೆ.

Advertisement

ಯೂನೈಟೆಡ್ ಫೋರಂ ಆಫ್ ಯೂನಿಯನ್ಸ್ ಸೇರಿದಂತೆ ಒಟ್ಟು 9 ಯೂನಿಯನ್ ಗಳು ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ.

ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಯಲಿದ್ದು, ಸುಮಾರು 10 ಲಕ್ಷ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಅಸೋಸಿಯೇಷನ್ ಸಂಚಾಲಕ ವಸಂತ್ ರೈ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next