ನವ ದೆಹಲಿ : ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದ ಅಗತ್ಯ ಹಣ ವರ್ಗಾವಣೆ ಇತ್ಯಾದಿಗಳನ್ನು ನಾಳೆಯೊಳಗೆ ಮುಗಿಸಿಕೊಳ್ಳುವುದು ಉತ್ತಮ. ಯಾಕೆಂದರೇ, ಮೇ 23 ರಿಂದ 14 ಗಂಟೆಗಳ ಕಾಲ ಎನ್ ಇ ಎಫ್ ಟಿ ಉನ್ನತೀಕರಣ ಇರುವುದರಿಂದ ಯಾವುದೇ ಕಾರ್ಯ ನಡೆಯುವುದಿಲ್ಲ.
ಶನಿವಾರ ಮಧ್ಯರಾತ್ರಿಯಿಂದ ಎಲ್ಲಾ ಬ್ಯಾಂಕುಗಳ ಎನ್ ಇ ಎಫ್ ಟಿ ಸೇವೆ ಕಾರ್ಯಚರಣೆ ಮಾಡುವುದಿಲ್ಲ, ಅಂದರೆ ಸುಮಾರು 14 ಗಂಟೆಗಳ ಕಾಲ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ (ಎನ್ ಇ ಎಫ್ ಟಿ) ಸೇವೆ ಬಂದ್ ಇರಲಿದೆ.
ಇದನ್ನೂ ಓದಿ : ಡಿಸಿಗಳಿಂದ ಮಾಹಿತಿ ಸಂಗ್ರಹಿಸಲು ಅಡ್ಡಿ;ಹಕ್ಕುಚ್ಯುತಿನಿರ್ಣಯ ಮಂಡನೆಗೆ ನಿರ್ಧಾರ:ಸಿದ್ದರಾಮಯ್ಯ
ತಾಂತ್ರಿಕ ಉನ್ನತಿಕರಣದ ಹಿನ್ನೆಲೆ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಗ್ರಾಹಕರು ಎನ್ ಇ ಎಫ್ ಟಿ ಮೂಲಕ ಹಣ ವರ್ಗಾವಣೆಯ ಯೋಜನೆಯನ್ನು ಮೊದಲೇ ಪೂರ್ಣಗೊಳಿಸಿಕೊಳ್ಳುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ( ಆರ್ ಬಿ ಐ) ಕೆಲವು ದಿನಗಳ ಹಿಂದೆ ಪ್ರಕಟಣೆ ನೀಡಿತ್ತು ಹಾಗೂ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ವಿನಂತಿ ಮಾಡಿಕೊಂಡಿತ್ತು.
ಈ ಕುರಿತು ಹೇಳಿಕೆ ನೀಡಿರುವ ಆರ್ ಬಿ ಐ, ಎನ್ ಇ ಎಫ್ ಟಿ ಸೇವೆಯ ಪರ್ಫಾರ್ಮೆನ್ಸ್ ಹಾಗೂ ರಿಜಿಲಿಯನ್ಸ್ ನ ತಾಂತ್ರಿಕ ಉನ್ನತ ದರ್ಜೆಗೆ ಏರಿಸಲಾಗುತ್ತಿದೆ ಎಂದಿದ್ದು, ಮೇ 22, 2021ರ ದಿನದ ವಹಿವಾಟುಗಳು ಪೂರ್ಣಗೊಂಡ ಮಧ್ಯರಾತ್ರಿಯಿಂದ 14 ಗಂಟೆಗಳ ಕಾಲ ಈ ಕಾರ್ಯ ನಡೆಯಲಿದ್ದು,14 ಗಂಟೆಗಳ ಕಾಲ ಎಲ್ಲಾ ಬ್ಯಾಂಕ್ ಗಳಲ್ಲಿ ಈ ಸೇವೆ ಲಭ್ಯವಿರುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಆರ್ ಟಿ ಜಿ ಎಸ್ (ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್) ಸೇವೆ ಅಬಾಧಿತವಾಗಿರಲಿದೆ ಎಂದು ಆರ್ ಬಿ ಐ ಮಾಹಿತಿ ನೀಡಿದೆ.
ಇದನ್ನೂ ಓದಿ : ಖ್ಯಾತ ಪರಿಸರವಾದಿ, ಚಿಪ್ಕೊ ಚಳವಳಿ ನೇತಾರ ಸುಂದರ್ ಲಾಲ್ ಕೋವಿಡ್ ನಿಂದ ನಿಧನ