Advertisement

ಎ.30ರೊಳಗೆ Self-Certified ಆಗದಿದ್ದರೆ ಬ್ಯಾಂಕ್‌ ಖಾತೆಗಳು ಬ್ಲಾಕ್‌

05:17 PM Apr 13, 2020 | Team Udayavani |

ಹೊಸದಿಲ್ಲಿ : 2014ರ ಜುಲೈ 1ರಿಂದ 2105ರ ಆಗಸ್ಟ್‌ 31ರ ನಡುವಿನ ಅವಧಿಯಲ್ಲಿ ಬ್ಯಾಂಕ್‌ ಖಾತೆ ತೆರೆದವರು ಎಫ್ಎಟಿಸಿಎ (ವಿದೇಶ ಖಾತೆ ತೆರಿಗೆ ಬದ್ಧತೆಯ ಕಾಯಿದೆ) ಅಡಿ 2017ರ ಎಪ್ರಿಲ್‌ 30ರ ಒಳಗೆ “ಸೆಲ್ಫ್ ಸರ್ಟಿಫಿಕೇಶನ್‌’ (ಸ್ವಯಂ ಪ್ರಮಾಣೀಕೃತ ದಾಖಲೆ) ಸಲ್ಲಿಸದಿದ್ದಲ್ಲಿ ಅಂತಹವರ ಖಾತೆಗಳನ್ನು ಬ್ಲಾಕ್‌ ಮಾಡಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 

Advertisement

ಹೀಗೆ ಬ್ಲಾಕ್‌ ಮಾಡಲ್ಪಟ್ಟ ಖಾತೆಗಳಲ್ಲಿ ಖಾತೆದಾರರು ಅನಂತರ ಯಾವುದೇ ವಹಿವಾಟು ಮಾಡುವಂತಿಲ್ಲ ಎಂದು ಇಲಾಖೆ ಸ್ಪಷ್ಟವಾಗಿ ಹೇಳಿದೆ.

ಸೆಂಟ್ರಲ್‌ ಬೋರ್ಡ್‌ ಆಪ್‌ ಡೈರೆಕ್ಟ್ ಟ್ಯಾಕ್ಸಸ್‌ (ಸಿಬಿಡಿಟಿ) ಈ ಹೇಳಿಕೆಯನ್ನು ಪ್ರಕಟಿಸಿದೆ.

ಈ ವಿಷಯದಲ್ಲಿ ನೀವು ತಿಳಿದಿರಬೇಕಾದ ಮುಖ್ಯ ಸಂಗತಿಗಳು ಇಂತಿವೆ : 

Advertisement

* ಎಫ್ಎಟಿಸಿಎ ಕಾಯಿದೆಯಡಿ ಭಾರತ ಮತ್ತು ಅಮೆರಿಕ ನಡುವೆ ಹಣಕಾಸು ಮಾಹಿತಿಗಳು ತನ್ನಿಂತಾನೇ ವಿನಿಮಯಗೊಳ್ಳುತ್ತವೆ.

* 2015ರ ಆಗಸ್ಟ್‌ 31ರಿಂದ ಜಾರಿಗೆ ಬರುವಂತೆ ಈ ಕಾಯಿದೆಯಡಿ ಭಾರತ ನಡುವೆ ಒಪ್ಪಂದ ಏರ್ಪಟ್ಟಿದೆ.

* ಖಾತೆದಾರರು ತಮ್ಮ ತೆರಿಗೆ ನಿವಾಸ ದೇವ, ತೆರಿಗೆ ಗುರುತುಪತ್ರ ಸಂಖ್ಯೆ, ತಾವು ಜನಿಸಿದ ರಾಷ್ಟ್ರ, ತಮ್ಮ ಪೌರತ್ವದ ದೇಶ ಇತ್ಯಾದಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.

* ಖಾತೆದಾರರು ಸ್ವ ಪ್ರಮಾಣೀಕೃತ ದಾಖಲೆ ಪತ್ರಗಳನ್ನು ಎ.30ರ ಒಳಗಾಗಿ ಸಲ್ಲಿಸದ ಕಾರಣಕ್ಕೆ ತಮ್ಮ ಖಾತೆ ಬ್ಲಾಕ್‌ ಆದಲ್ಲಿ, ಅದನ್ನು ಮರು ಚಾಲನೆಗೊಳಿಸಲು ಅನಂತರದಲ್ಲಿ ಅದೇ ಪ್ರಕ್ರಿಯೆಯನ್ನು ಪಾಲಿಸಬೇಕಾಗುತ್ತದೆ.

* ಮ್ಯೂಚುವಲ್‌ ಫ‌ಂಡ್‌ಗಳಿಗೆ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಕೂಡ ತಮ್ಮ ಗ್ರಾಹಕರು ಈ ನಿಯಮವನ್ನು ಪಾಲಿಸುವಂತೆ ಸೂಚಿಸಲಾಗಿದೆ.

* ಈ ಹಿಂದೆ ಈ ವಿಷಯದಲ್ಲಿ ಕೆಲವು ತಾಂತ್ರಿಕ ಅಡಚಣೆಗಳು ಕಂಡು ಬಂದುದನ್ನು ಅನುಸರಿಸಿ ತೆರಿಗೆ ಇಲಾಖೆಯು 2016 ಆಗಸ್ಟ್‌ 31ರ ಗಡುವನ್ನು ಸ್ವಯಂ ಪ್ರಮಾಣೀಕೃತ ದಾಖಲೆಗಳ ಸಲ್ಲಿಕೆಗಾಗಿ ವಿಸ್ತರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next