ದಾವಣಗೆರೆ: ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಉಡುಗೆಗೆ ಆಧುನಿಕ ಸ್ಪರ್ಷ ನೀಡಿ ವಿಶಿಷ್ಟವಾಗಿ ತಯಾರಿಸಿದ ‘ ಬಂಜಾರ ವಸ್ತ್ರ ಸಂಸ್ಕೃತಿ’ ಉಡುಪುಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಿಡುಗಡೆಗೊಳಿಸಿದರು.
ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಭಾಯಾಗಡ್ ದಲ್ಲಿ ರವಿವಾರ ನಡೆದ ಸಂತ ಸೇವಾಲಾಲ್ ಅವರ 282ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಈ ಉಡುಪುಗಳನ್ನು ಬಿಡುಗಡೆಗೊಳಿಸಿದರು.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿ ಪಡಿಸಿದ ವಸ್ತ್ರ ವಿನ್ಯಾಸ ಇದಾಗಿದೆ. ಸಾಮಾನ್ಯವಾಗಿ ಲಂಬಾಣಿ ಉಡುಗೆ ಬಹು ಆಕರ್ಷಣೀಯವಾಗಿದ್ದರೂ ಹೆಚ್ಚು ಭಾರವಿರುವ ಕಾರಣ ದಿಂದ ಮಾರುಕಟ್ಟೆಯಲ್ಲಿ ಹಿನ್ನಡೆಯಾಗಿತ್ತು. ಈಗ ಈ ಉಡುಗೆಯ ಭಾರ ಕಡಿಮೆ ಮಾಡಿರುವುದು ವಿಶೇಷವಾಗಿದೆ. ಟೆಕ್ಸ್ ಟೈಲ್ ನಲ್ಲಿ ಉಡುಪು ಸಿದ್ಧಪಡಿಸಿ ಅವುಗಳಿಗೆ ಬಂಜಾರ ಮಹಿಳೆಯರ ಕೈ ಕಸೂತಿಯಲ್ಲಿ ಕಲೆ ಅರಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ:ಇಂದು ಕೃಷ್ಣ-ಮಿಲನಾ ಮದುವೆ: ಪ್ರೇಮಿಗಳ ದಿನದಂದು ಹಸೆಮಣೆಗೆ
ದೇಶ, ವಿದೇಶಗಳಿಗೂ ಈ ಉಡುಪುಗಳನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅಮೇಜಾನ್ ನಂತಹ ಆನ್ ಲೈನ್ ಮಾರುಕಟ್ಟೆಯಲ್ಲಿಯೂ ಈ ಉಡುಗೆಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ತಿಳಿಸಿದರು.