Advertisement

‘Goodachari 2’: ಗೂಢಚಾರಿ ಜೊತೆ ಬನಿತಾ!

03:14 PM Apr 03, 2024 | Team Udayavani |

ಅಡವಿ ಶೇಷ್‌ ನಟಿಸುತ್ತಿರುವ “ಗೂಢಚಾರಿ-2’ಕ್ಕೆ ಬನಿತಾ ಸಂಧು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗುಜರಾತ್‌ನ ಭುಜ್‌ ನಲ್ಲಿ ನಲ್ಲಿ ಗೂಢಚಾರಿ ಸೀಕ್ವೆಲ್‌ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ.

Advertisement

ಶೂಟಿಂಗ್‌ ಅಖಾಡಕ್ಕೆ ಶೀಘ್ರದಲ್ಲೇ ಬನಿತಾ ಕೂಡ ಎಂಟ್ರಿ ಕೊಡಲಿದ್ದಾರೆ. ಅಂದಹಾಗೇ ಇದು ಬನೀತಾ ಸಂಧುಗೆ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾವಾಗಿದೆ.

“ಅಕ್ಟೋಬರ್‌’, “ಸರ್ದಾರ್‌ ಉದಾಮ್’, “ಆದಿತ್ಯ ವರ್ಮಾ’ ಸೇರಿದಂತೆ ಹಲವು ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ ಅನುಭವ ಬನಿತಾ ಸಂಧು ಅವರಿಗಿದೆ.

‘ಗೂಢಚಾರಿ 2′ ಸಿನಿಮಾದಲ್ಲಿ ಅವರ ಪಾತ್ರ ಬಹಳ ವಿಭಿನ್ನವಾಗಿದ್ದು, ಹೊಸ ಅವತಾರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಅಡವಿ ಶೇಷ್‌ ಅಭಿನಯಿಸಿದ್ದ “ಮೇಜರ್‌’ ಚಿತ್ರಕ್ಕೆ ಸಂಕಲನಕಾರ ಆಗಿದ್ದ ವಿನಯ್‌ ಕುಮಾರ್‌ ಸಿರಿಗಿನೀದಿ ಅವರು “ಗೂಢಚಾರಿ 2′ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next