Advertisement

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

12:24 PM Apr 20, 2024 | Team Udayavani |

ಕೊಚ್ಚಿ: ಈ ವರ್ಷ ಮಾಲಿವುಡ್‌ ಸಿನಿರಂಗದ ಕೆಲ ಸಿನಿಮಾಗಳು ಲೋ ಬಜೆಟ್‌ ನಲ್ಲಿ ತಯಾರಾಗಿ ಬಿಗ್‌ ಹಿಟ್‌ ಆಗಿವೆ. ಈ ಸಾಲಿನಲ್ಲಿ ʼಪ್ರೇಮಲುʼ ಸಿನಿಮಾ ಕೂಡ ಸೇರಿದೆ.

Advertisement

ಗಿರೀಶ್‌ ಎಡಿ ನಿರ್ದೇಶನದ ʼಪ್ರೇಮಲುʼ ರೊಮ್ಯಾಂಟಿಕ್ ಕಂ ಕಾಮೆಡಿ ಕಥಾಹಂದರವನ್ನೊಳಗೊಂಡಿದ್ದು, ಯುವ ಜನರ ಮನಸ್ಸನ್ನು ಸಿನಿಮಾ ಗಮನ ಸೆಳೆದಿತ್ತು.‌ ಬಾಕ್ಸ್‌ ಆಫೀಸ್‌ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡುವ ಮೂಲಕ ಮಾಲಿವುಡ್‌ ನಲ್ಲಿ ಹಿಟ್‌ ಲಿಸ್ಟ್‌ ಗೆ ಸೇರಿತು.

ಮಾಲಿವುಡ್‌ ಮಾತ್ರವಲ್ಲದೆ ಸಿನಿಮಾಕ್ಕೆ ಟಾಲಿವುಡ್‌ ನಲ್ಲೂ ಉತ್ತಮ ಪ್ರತಿಕ್ರಿಯೆ ಕೇಳಿಬಂದಿತ್ತು. ತೆಲುಗಿಗೆ ಡಬ್‌ ಆಗಿ ಸಿನಿಮಾ ರಿಲೀಸ್‌ ಆಗಿತ್ತು. ರಾಜಮಾಳಿ ಅವರ ಪುತ್ರ ಕಾರ್ತಿಕೇಯ ಟಾಲಿವುಡ್‌ ನಲ್ಲಿ ಸಿನಿಮಾವನ್ನು ವಿತರಿಸಿದ್ದರು.

ʼಪ್ರೇಮಲುʼ ಇತ್ತೀಚೆಗಷ್ಟೇ ಓಟಿಟಿಗೆ ಎಂಟ್ರಿ ಆಗಿದೆ. ಈ ನಡುವೆ ಸಿನಿಮಾದ ಸೀಕ್ವೆಲ್‌ ಅನೌನ್ಸ್‌ ಆಗಿರುವುದು ಪ್ರೇಕ್ಷಕರಿಗೆ ಸರ್ಪ್ರೈಸ್‌ ಸಿಕ್ಕಂತಾಗಿದೆ.

ಇದನ್ನೂ ಓದಿ: Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Advertisement

ʼಪ್ರೇಮಲುʼ ನಿರ್ಮಾಣ ಸಂಸ್ಥೆಯಾದ ಭಾವನಾ ಸ್ಟುಡಿಯೋಸ್ ಸಿನಿಮಾದ ಸೀಕ್ವೆಲ್‌ ತೆರೆಗೆ ಬರುವುದಾಗಿ ಶುಕ್ರವಾರ(ಏ.19 ರಂದು) ಅಧಿಕೃತವಾಗಿ ಅನೌನ್ಸ್‌ ಮಾಡಿದೆ.

2025 ರಂದು ʼಪ್ರೇಮಲುʼ ಸೀಕ್ವೆಲ್‌ ತೆರೆ ಕಾಣಲಿದೆ. ಸೀಕ್ವೆಲ್‌ ನಲ್ಲಿ ಮೊದಲ ಭಾಗದ ನಾಯಕ – ನಾಯಕಿಯಾದ ನಸ್ಲೆನ್ ಕೆ ಗಫೂರ್ ಮತ್ತು ಮಮಿತಾ ಬೈಜು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಸದ್ಯ ʼಪ್ರೇಮಲು-2ʼ ಅನೌನ್ಸ್‌ ಆದ ಬಳಿಕ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ಎರಡನೇ ಭಾಗದಲ್ಲಿ ಯಾವ ರೀತಿಯ ಕಥೆ ಇರಲಿದೆ ಎನ್ನುವುದರ ಬಗ್ಗೆ ಮಾಲಿವುಡ್‌ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ

‘ಪ್ರೇಮಲು’ ಚಿತ್ರದಲ್ಲಿ ನಸ್ಲೆನ್ ಕೆ ಗಫೂರ್ ಮತ್ತು ಮಮಿತಾ ಬೈಜಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಂಗೀತ್ ಪ್ರತಾಪ್, ಶ್ಯಾಮ್ ಮೋಹನ್, ಮೀನಾಕ್ಷಿ ರವೀಂದ್ರನ್, ಅಖಿಲಾ ಭಾರ್ಗವನ್ ಮತ್ತು ಅಲ್ತಾಫ್ ಸಲೀಂ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ವರ್ಷ ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ‘ಪ್ರೇಮಲು’ ಕೂಡ ಒಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next