Advertisement

ಬೆಂಗಳೂರು ಚಲನಚಿತ್ರೋತ್ಸವ ಹೊರ ಗುತ್ತಿಗೆಗೆ ಆಕ್ರೋಶ!

08:50 PM Mar 11, 2021 | Team Udayavani |

ಬೆಂಗಳೂರು: ಮಾರ್ಚ್​ 24 ರಿಂದ ನಡೆಯಲಿರುವ 13ನೇ ಅವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದ ಹೊಣೆ ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ನೀಡುವ ಕಾರ್ಯ ಸದ್ದಿಲ್ಲದೆ ನೆಡೆದಿದೆ ಎನ್ನಲಾಗುತ್ತಿದ್ದು, ಸರ್ಕಾರದ ಈ ನಡೆ ವಿರುದ್ಧ ಕನ್ನಡದ ನಿರ್ದೇಶಕರು, ತಂತ್ರಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬೆಂಗಳೂರು ಚಲನಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ನಂತರ ನಡೆಯುತ್ತಿರುವ ಮೊದಲ ಚಿತ್ರೋತ್ಸವ ಇದು. ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಿದೆ. ಆದರೆ, ಪೂರ್ವ ಸಿದ್ಧತೆಗಳು ಇನ್ನೂ ಶುರುವಾಗಿಲ್ಲ. ಸರ್ಕಾರದ ಈ ಕ್ರಮ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಸಮಯವಿಲ್ಲವೆಂಬ ಕುಂಟು ನೆಪ ಹೇಳಿ ಇಡೀ ಕಾರ್ಯಕ್ರಮ ಆಯೋಜನೆ ಹೊಣೆಯನ್ನು(ಪ್ರಶಸ್ತಿಗೆ ಸಿನೆಮಾ ಆಯ್ಕೆ ಹೊರತುಪಡಿಸಿ) ಈವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಗೆ ವಹಿಸುವ ಯೋಚನೆ ಸರ್ಕಾರಕ್ಕಿದೆ ಎನ್ನಲಾಗುತ್ತಿದೆ.

ಸಚಿವರಿಗೆ ಪತ್ರ :

ಸರ್ಕಾರದ ಈ ಕ್ರಮದ ವಿರುದ್ಧ ನಾಗತಿಹಳ್ಳಿ ಚಂದ್ರಶೇಖರ, ಗಿರೀಶ ಕಾಸರವಳ್ಳಿ, ಪಿ.ಶೇಷಾದ್ರಿ, ಬಿ.ಸುರೇಶ, ಎಸ್.ಶಿವರಾಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವ ಸಿ.ಸಿ.ಪಾಟೀಲ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಚಲನಚಿತ್ರ ಉತ್ಸವ ಆಯಾ ಚಲನಚಿತ್ರ ಉದ್ಯಮದಲ್ಲಿರುವವರು ಸ್ವತಃ ನಡೆಸಬೇಕು. ‘ಚಿತ್ರೋತ್ಸವದ ಮೂಲಕ ಜಗತ್ತಿನ ಕೆಲವು ದೇಶಗಳ ಚಲನಚಿತ್ರೋದ್ಯಮದ ನಡುವೆ ಒಳ್ಳೆಯ ಸಂಬಂಧ, ಸಾಂಸ್ಕೃತಿಕ ವಿನಿಯಮ ಸಾಧ್ಯವಾಗುತ್ತದೆ. ಸ್ಥಳೀಯ ಚಿತ್ರೋದ್ಯಮ ಬೆಳೆಯಲು ವೇದಿಕೆಯಾಗುತ್ತದೆ. ಆದರೆ, ಖಾಸಗಿ ಈವೆಂಟ್ ಮ್ಯಾನೇಜ್​ಮೆಂಟ್ ಕಂಪನಿಗಳ ಹಸ್ತಕ್ಷೇಪದಿಂದ ಅಂಥ ಸಾಧ್ಯತೆ ಸಂಪೂರ್ಣ ನಾಶವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಅಕಾಡೆಮಿ ಸ್ಥಾಪನೆಯ ಉದ್ದೇಶವೇ ನಾಶ :

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ನಿಭಾಯಿಸುವ ಜವಾಬ್ದಾರಿ ಚಲನಚಿತ್ರ ಅಕಾಡೆಮಿಯದು. ಆದರೆ, ಹೊರಗುತ್ತಿಗೆ ನೀಡುವುದೇಕೆ ? ಹೀಗೆ ಮಾಡಿದರೆ ಅಕಾಡೆಮಿ ಸ್ಥಾಪನೆಯ ಉದ್ದೇಶವೇ ನಾಶವಾದಂತೆ ಆಗುತ್ತದೆ. ಕೂಡಲೇ ಹೊರಗುತ್ತಿಗೆ ನೀಡುವ ಯೋಚನೆ ಕೈ ಬಿಟ್ಟು ಚಲನಚಿತ್ರ ಅಕಾಡೆಮಿಯೇ ಚಿತ್ರೋತ್ಸವ ನಡೆಸಬೇಕೆಂದು ಕೂಡಲೇ ಆದೇಶ ನೀಡಿ ಎಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next