Advertisement
ಕಳೆದ ಮೂರು ನಾಲ್ಕು ದಶಕಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಅಂಕಲ್‌ಗೆ 75 ವರ್ಷಗಳು ತುಂಬುತ್ತಿವೆ. ಅಷ್ಟು ವಯಸ್ಸಾದವರು ಅಂಕಲ್ ಹೇಗಾಗುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಅವರ ನಿಜವಾದ ಹೆಸರು ಎಮ್.ಎಸ್. ಶ್ಯಾಮಸುಂದರ್ ಆಗಿದ್ದರೂ, ಅಂಕಲ್ ಶ್ಯಾಮ್ ಎಂದೇ ಬಹುತೇಕರಿಗೆ ಚಿರಪರಿಚಿತ. 1968ರಲ್ಲಿ ಹೆಬ್ಟಾಳದಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಂಡ ಅಂಕಲ್ ಶ್ಯಾಮ್ ವೃತ್ತಿಯ ಜೊತೆಗೇ ರಂಗಭೂಮಿ ಕೆಲಸಗಳಲ್ಲಿ ತೊಡಗಿಕೊಂಡರು. 1980ರಲ್ಲಿ “ಆಂತರಂಗ’ ಎಂಬ ರಂಗತಂಡವನ್ನು ಕಟ್ಟಿದರು. ‘ಅಂತರಂಗ’ ತಂಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ನಟ, ರಂಗಕರ್ಮಿ ಸಿ.ಆರ್.ಸಿಂಹ ಹಾಗೂ ಆರ್.ನಾಗೇಶ್ ಅವರ ಉಪಸ್ಥಿತಿಯಲ್ಲಿ ಚೊಚ್ಚಲ ನಾಟಕ ‘ನಾಯಕ’ ಭರ್ಜರಿ ಪ್ರದರ್ಶನ ಕಂಡಿತ್ತು. ಅಂದಿನಿಂದ ತಮ್ಮ ರಂಗತಂಡವನ್ನು ಬೆಳೆಸಬೇಕೆಂಬ ಉಮೇದು ಹೆಚ್ಚಿತ್ತು. ನಂತರ ಅಂತರಂಗ ಕ್ಕೆ ಡಾ.ಬಿ.ವಿ.ರಾಜಾರಾಂ ನಿರ್ದೇಶಿಸಿ, ಸಿ.ಜಿ.ಕೆ ರವರು ಬೆಳಕಿನ ವಿನ್ಯಾಸ ಮಾಡಿದ ‘ಬೇಟೆ’ ನಾಟಕ ಅಪಾರ ಯಶಸ್ಸು ಗಳಿಸಿತು. ಮೇಕಪ್ ನಾಣಿಯವರ ಪರಿಚಯವಾಗಿ ಕೈಲಾಸಂ ನಾಟಕಗಳ ಬಗ್ಗೆ ಒಲವು ಮೂಡಿತು. ಕೈಲಾಸಂ ನಾಟಕಗಳೂ ಯಶಸ್ಸು ಕಂಡವು. ಶ್ರೀನಿವಾಸ್ ಜಿ. ಕಪ್ಪಣ್ಣ, ಕೆ.ವಿ. ನಾಗರಾಜ್ ಮೂರ್ತಿ, ಸಿ.ಕೆ.ಗುಂಡಣ್ಣ, ಎಲ್ಲರೂ ಅಂತರಂಗದ ಬೆಳವಣಿಗೆಗೆ ಕೈಜೋಡಿಸಿ¨ªಾರೆ. ತಂಡ ಇಲ್ಲಿಯ ತನಕ ತಂಡ 41 ರಂಗ ಪ್ರಯೋಗಗಳು, 6 ಬೀದಿ ನಾಟಕಗಳನ್ನು ಪ್ರದರ್ಶಿಸಿದೆ.
Advertisement
ಅಂಕಲ್ ಅಂತರಂಗದಲ್ಲೇ ಬೆಂಗ್ಳೂರೂ ಅಡಗಿದೆ…
03:33 PM Nov 17, 2018 | |
Advertisement
Udayavani is now on Telegram. Click here to join our channel and stay updated with the latest news.