Advertisement

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

11:04 PM Jun 15, 2021 | Team Udayavani |

ದುಬಾೖ: ಬಾಂಗ್ಲಾದೇಶದ ಅನುಭವಿ ಆಟಗಾರ ಮುಶ್ಫಿಕರ್‌ ರಹೀಂ ಮತ್ತು ಸ್ಕಾಟ್ಲೆಂಡ್‌ ಮಹಿಳಾ ತಂಡದ ಆಲ್‌ರೌಂಡರ್‌ ಕ್ಯಾಥರಿನ್‌ ಬ್ರೈಸ್‌ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಮೇ ತಿಂಗಳ ಆಟಗಾರರನ್ನಾಗಿ ಆಯ್ಕೆ ಮಾಡಿದೆ.

Advertisement

ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್‌ ರಹೀಂ ಕಳೆದ ತಿಂಗಳು ಶ್ರೀಲಂಕಾ ಎದುರು ಟೆಸ್ಟ್‌ ಮತ್ತು ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವನಿತಾ ವಿಭಾಗದ ಸಾಧಕಿ ಬ್ರೈಸ್‌ ಕಳೆದ ತಿಂಗಳು ಐಸಿಸಿ ರ್‍ಯಾಂಕಿಂಗ್‌ ಯಾದಿಯ ಅಗ್ರ ಹತ್ತರೊಳಗೆ ಕಾಣಿಸಿಕೊಂಡ ಸ್ಕಾಟ್ಲೆಂಡ್‌ನ‌ ಮೊದಲ ಕ್ರಿಕೆಟರ್‌ ಎನಿಸಿಕೊಂಡಿದ್ದರು. ಮೇ ತಿಂಗಳಲ್ಲಿ ಅವರು ಐರ್ಲೆಂಡ್‌ ವಿರುದ್ಧ 4 ಟಿ20 ಪಂದ್ಯಗಳನ್ನಾಡಿ 96 ರನ್‌ ಜತೆಗೆ 5 ವಿಕೆಟ್‌ ಕೂಡ ಉರುಳಿಸಿದ್ದರು.

ಇದನ್ನೂ ಓದಿ :ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

Advertisement

Udayavani is now on Telegram. Click here to join our channel and stay updated with the latest news.

Next