Advertisement
ವಿಶೇಷವಾಗಿ ಹಿಂದೂ ಸಮುದಾಯಕ್ಕೆ ಸೇರಿದ 49 ಶಿಕ್ಷಕರಿಂದ ಆಗ್ರಹಪೂರ್ವಕವಾಗಿ ರಾಜೀನಾಮೆ ಪಡೆಯಲಾಗಿದೆ ಎಂದು ಬಾಂಗ್ಲಾದೇಶ ಛಾತ್ರ ಐಕ್ಯ ಪರಿಷತ್‌ನ ಸಂಯೋಜಕ ಸಜೀಬ್ ಸರ್ಕಾರ್ ಆರೋಪಿಸಿದ್ದಾರೆ.
Related Articles
ಈ ಕುರಿತು ಲೇಖಕಿ ತಸ್ಲಿಮಾ ನಸ್ರಿನ್ ಪ್ರತಿಕ್ರಿಯೆ ನೀಡಿ, ಬಾಂಗ್ಲಾದಲ್ಲಿ ಶಿಕ್ಷಕರ ರಾಜೀನಾಮೆಗೆ ಆಗ್ರಹಿಸಲಾಗುತ್ತಿದೆ. ಪತ್ರ ಕರ್ತರು, ಸಚಿವರು ಮತ್ತು ಅಧಿಕಾರಿಗಳನ್ನು ಹಿಂಸಿಸಲಾಗುತ್ತಿದೆ. ಅಹಮದಿ ಮತ್ತು ಶಿಯಾ ಮುಸಲ್ಮಾನರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಈ ಕುರಿತು ಮಧ್ಯಾಂತರ ಸರಕಾರದ ಮುಖ್ಯಸ್ಥ ಯೂನುಸ್ ತುಟಿ ಬಿಚ್ಚಿಲ್ಲ ಎಂದು ಟೀಕಿಸಿದ್ದಾರೆ.
Advertisement
ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಮತ್ತು ಬಾಂಗ್ಲಾದೇಶ ಪೂಜಾ ಉಡಾjಪನ್ ಪರಿಷತ್ ನೀಡಿರುವ ಮಾಹಿತಿಯಂತೆ ಹಸೀನಾ ಪದಚ್ಯುತಿಯ ಅನಂತರ ಅಲ್ಪಸಂಖ್ಯಾಕರ ಮೇಲೆ ಸುಮಾರು 205 ದಾಳಿಗಳು ನಡೆದಿವೆ.