Advertisement

2 ನೇ ಟೆಸ್ಟ್ ; ಭಾರತದ ಬಿಗು ಬೌಲಿಂಗ್ ದಾಳಿಗೆ ನಲುಗಿದ ಬಾಂಗ್ಲಾ 227 ಕ್ಕೆ ಆಲೌಟ್

03:45 PM Dec 22, 2022 | Team Udayavani |

ಢಾಕಾ : ಇಲ್ಲಿಗುರುವಾರ ಆರಂಭವಾದ ಸರಣಿಯ ಕೊನೆಯ ಮತ್ತು ಎರಡನೆಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಆತಿಥೇಯ ಬಾಂಗ್ಲಾದೇಶ ಭಾರತದ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿ ಅಗ್ಗದ 227 ರನ್ ಗಳಿಗೆ ಸರ್ವ ಪತನ ಕಂಡಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾ 39 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಬರೋಬ್ಬರಿ 12 ವರ್ಷ ಗಳ ಬಳಿಕ ಟೆಸ್ಟ್ ತಂಡಕ್ಕೆ ಮರಳಿದ ವೇಗಿ ಜಯದೇವ್ ಉನಾದ್ಕತ್ ಅವರು ಜಾಕಿರ್ ಹಸನ್ ಅವರ ವಿಕೆಟ್ ಪಡೆದರು.

ಜಾಕಿರ್ ಹಸನ್ 15,ನಜ್ಮುಲ್ ಹೊಸೈನ್ ಶಾಂಟೊ 24, ಶಕೀಬ್ ಅಲ್ ಹಸನ್ 16, ಮುಶ್ಫಿಕರ್ ರಹೀಮ್ 26, ಲಿಟನ್ ದಾಸ್ 25, ಮೆಹಿದಿ ಹಸನ್ ಮಿರಾಜ್ 15, ನೂರುಲ್ ಹಸನ್ 6, ತಸ್ಕಿನ್ ಅಹ್ಮದ್ 1,ಖಾಲೇದ್ ಅಹ್ಮದ್ 0 ರನ್ ಗಳಿಸಿದರು. ಮೊಮಿನುಲ್ ಹಕ್ ಅವರು ಗರಿಷ್ಠ 84 ರನ್ ಗಳಿಸಿ ಔಟಾದರು. ತೈಜುಲ್ ಇಸ್ಲಾಂ ಔಟಾಗದೆ 4 ರನ್ ಗಳಿಸಿದರು.

ಭಾರತದ ಪರ ಬಿಗಿ ದಾಳಿ ನಡೆಸಿದ ಉಮೇಶ್ ಯಾದವ್ ಮತ್ತು ಅಶ್ವಿನ್ ತಲಾ 4 ವಿಕೆಟ್ ಕಬಳಿಸಿದರೆ, ಉನಾದ್ಕತ್ ಅವರು 2 ವಿಕೆಟ್ ಪಡೆದು ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next