ಢಾಕಾ: ಬಾಂಗ್ಲಾದೇಶ – ಭಾರತದ ನಡುವಿನ ಮಹತ್ವದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲ್ಲೇಬೇಕಾದ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿನ ತಪ್ಪನ್ನು ತಿದ್ದಿಕೊಂಡು ಭಾರತ ಮೈದಾನಕ್ಕಿಳಿದಿದೆ. ಟಾಸ್ ಗೆದ್ದು ಬಾಂಗ್ಲಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಈ ಪಂದ್ಯ ಕೂಡ “ಶೇರ್ ಎ ಬಾಂಗ್ಲಾ ಸ್ಟೇಡಿಯಂ’ನಲ್ಲೇ ನಡೆಯಲಿದೆ. ಇಲ್ಲಿನ ಟ್ರ್ಯಾಕ್ ಹೇಗೆ ವರ್ತಿಸುತ್ತದೆ ಎಂಬುದು ಈಗಾಗಲೇ ಸಾಬೀತಾಗಿದೆ. ಇದು ಅಪ್ಪಟ ಬೌಲಿಂಗ್ ಟ್ರ್ಯಾಕ್. ಸ್ಪಿನ್ ಮತ್ತು ಫಾಸ್ಟ್ ಬೌಲರ್‌ಗಳಿಬ್ಬರೂ ಇದರ ಪ್ರಯೋಜನ ಎತ್ತಬಲ್ಲರು.
ದ್ವಿತೀಯ ಪಂದ್ಯದಲ್ಲಿ ಭಾರತ ತನ್ನ ಕ್ಷೇತ್ರರಕ್ಷಣೆಯನ್ನು ಬಲಗೊಳಿಸಿಕೊಳ್ಳಬೇಕು. ವೃತ್ತಿಪರ ಕ್ರಿಕೆಟಿಗರೇ ಸುಲಭದ ಕ್ಯಾಚ್‌ಗಳನ್ನು ಬಿಟ್ಟು ತಂಡ ಸೋಲುವಂತಾದರೆ ಅದು ಖಂಡಿತ ಅಕ್ಷಮ್ಯ. ಇಂಥ ತಪ್ಪು ಮರುಕಳಿಸಬಾರದು; ಹೊಸ ತಪ್ಪು ಕೂಡ ಕಾಣಿಸಿಕೊಳ್ಳಬಾರದು. ಹಾಗೆಯೇ ಬಾಂಗ್ಲಾದೇಶದಲ್ಲಿ ಇತಿಹಾಸ ಪುನರಾವರ್ತನೆ ಆಗಬಾರದು.
ತಂಡಗಳು:
Related Articles
ಭಾರತ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್(ನಾಯಕ), ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್(ಕೀಪರ್), ಮಹಮ್ಮದುಲ್ಲಾ, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನಸುಮ್ ಅಹ್ಮದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರಹಮಾನ್
ಭಾರತ ಶಹಬಾಜ್ ಅಹ್ಮದ್ ಹಾಗೂ ಕುಲ್ ದೀಪ್ ಸೆನ್ ಅವರನ್ನು ಹೊರಗಿಟ್ಟು, ಆಲ್ ರೌಂಡರ್ ಅಕ್ಷರ್ ಪಟೇಲ್ ಹಾಗೂ ವೇಗಿ ಉಮ್ರಾನ್ ಮಲಿಕ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.