ಸೆಂಚುರಿಯನ್ : ದಕ್ಷಿಣ ಆಫ್ರಿಕಾ ನೆಲದಲ್ಲಿ ಬಾಂಗ್ಲಾದೇಶ ಮೊದಲ ಬಾರಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಐತಿಹಾಸಿಕ ದಾಖಲೆ ಬರೆದಿದೆ.
ಶುಕ್ರವಾರ ನಡೆದ ಸರಣಿಯ ಆರಂಭಿಕ ಪಂದ್ಯವನ್ನು 38 ರನ್‌ಗಳಿಂದ ಗೆದ್ದ ಬಾಂಗ್ಲಾದೇಶ ಸರಣಿ ಮುನ್ನಡೆ ಸಾಧಿಸಿ ಹೊಸ ಹುರುಪು ಪಡೆದುಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಬಾಂಗ್ಲಾದೇಶದ ಬ್ಯಾಟ್ಸ್‌ಮನ್‌ಗಳು ಅಮೋಘ ಆಟವಾಡಿ 7 ವಿಕೆಟ್ ನಷ್ಟಕ್ಕೆ 314 ರನ್ ಗಳ ಭಾರಿ ಮೊತ್ತ ಪೇರಿಸಿದರು. ಶಕಿಬ್ ಅಲ್ ಹಸನ್ (77), ಲಿಟ್ಟನ್ ದಾಸ್ (50) ಮತ್ತು ಯಾಸಿರ್ ಅಲಿ (50) ಅರ್ಧಶತಕಗಳ ನೆರವಿನಿಂದ ದೊಂದಿಗೆ ಭರ್ಜರಿ ಮೊತ್ತ ಕಲೆ ಹಾಕಲಾಯಿತು.
ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಸ್ಪಿನ್ನರ್ ಮೆಹಿದಿ ಹಸನ್ ಬಿಗಿ ದಾಳಿಗೆ ಸಿಲುಕಿ 48.5 ಓವರ್‌ಗಳಲ್ಲಿ 276 ರನ್‌ಗಳಿಗೆ ಆಲೌಟ್ ಆಯಿತು. ಮಿರಾಜ್ ಒಂಬತ್ತು ಓವರ್‌ಗಳಲ್ಲಿ 61 ರನ್ ನೀಡಿದರೂ 4 ವಿಕೆಟ್ ಗಳನ್ನು ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ರೋಚಕ ಹಣಾಹಣಿಯ ಪಂದ್ಯದ 46 ನೇ ಓವರ್‌ನಲ್ಲಿ ಡೇವಿಡ್ ಮಿಲ್ಲರ್(79) ಸ್ಟಂಪ್ ಔಟಾಗುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿನ ಕೊನೆಯ ಭರವಸೆ ತೊಡೆದುಹಾಕಿತು. ಕೊನೆಯ ವಿಕೆಟ್ ಆಟದಲ್ಲೂ ಗೆಲುವಿನ ಭರವಸೆ ಮೂಡಿಸಿದ ಕೇಶವ್ ಮಹಾರಾಜ್ 23 ರನ್ ಗಳಿಗೆ ಔಟಾಗಿ ನಿರಾಶೆ ಮೂಡಿಸಿದರು. ಕೊನೆಯಲ್ಲಿ ಬಂದ ಲುಂಗಿ ನಿಗಿಡಿ 15 ರನ್ ಗಳಿಸಿ ಅಜೇಯರಾಗಿ ಉಳಿದರು. ರಾಸ್ಸಿ ವಾನ್ ಡೆರ್ ಡುಸ್ಸೇನ್ ಗರಿಷ್ಟ 86 ರನ್ ಗಳಿಸಿದರು.
ಬಾಂಗ್ಲಾ ಪರ ತಕ್ಸೀನ್ ಅಹಮದ್ 3, ಶೋರೀಫುಲ್ ಇಸ್ಲಾಮ್ 2 ವಿಕೆಟ್ ಪಡೆದರು.