Advertisement

Bangladesh: ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಿದ ಬಾಂಗ್ಲಾದೇಶ್ ಸರ್ಕಾರ!

01:36 PM Jul 25, 2024 | Team Udayavani |

ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಸರ್ಕಾರ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭಾರತದ ರಾಯಭಾರಿ ಕಚೇರಿಗೆ ಔಪಚಾರಿಕ ದೂರು ಸಲ್ಲಿಸಿದೆ ಎಂದು ವರದಿಯಾಗಿದೆ.

Advertisement

ಎಎನ್‌ ಐ ವರದಿ ಪ್ರಕಾರ, ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಹಿಂಸಾಚಾರದಿಂದ ನಲುಗಿ ಹೋಗಿದ್ದು, ಈ ಘಟನೆಯ ನಂತರ ಬಾಂಗ್ಲಾದೇಶದ ನಿರಾಶ್ರಿತರು ಪಶ್ಚಿಮಬಂಗಾಳಕ್ಕೆ ಆಗಮಿಸಲು ಮುಕ್ತ ಅವಕಾಶ ಇರುವುದಾಗಿ ಮಮತಾ ಬ್ಯಾನರ್ಜಿ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ತಿಳಿಸಿದೆ.

“ಒಂದು ವೇಳೆ ಬಾಂಗ್ಲಾದ ಅಸಹಾಯಕ ಜನರು ನಮ್ಮ ಬಾಗಿಲು ಬಡಿದರೆ, ನಾವು ಅವರಿಗೆ ಖಂಡಿತವಾಗಿಯೂ ಆಶ್ರಯ ನೀಡುತ್ತೇವೆ” ಎಂದು ಕೋಲ್ಕತಾದಲ್ಲಿ ನಡೆದ ಟಿಎಂಸಿಯ ಹುತಾತ್ಮರ ದಿನಾಚರಣೆಯ ಕಾರ್ಯಕ್ರಮದಲ್ಲಿ ಬ್ಯಾನರ್ಜಿ ಹೇಳಿಕೆ ನೀಡಿದ್ದರು.

ಮಮತಾ ಬ್ಯಾನರ್ಜಿ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಗ್ಲಾ ಸರ್ಕಾರ ಭಾರತದ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದು, ಬ್ಯಾನರ್ಜಿ ಉಲ್ಲೇಖಿಸಿರುವ ವಿಶ್ವಸಂಸ್ಥೆಯ ನಿರ್ಣಯ ಬಾಂಗ್ಲಾದೇಶಕ್ಕೆ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

Advertisement

ಬಾಂಗ್ಲಾದೇಶದಲ್ಲಿ ಅಧಿಕಾರಿಗಳು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ರೀತಿ ಜನರಿಗೆ ಆಶ್ರಯ ನೀಡುವುದಾಗಿ ಭರವಸೆ ನೀಡುವುದು, ಜನರನ್ನು ಪ್ರಚೋದನೆಗೆ ಒಳಪಡಿಸಿದಂತಾಗಲಿದೆ. ಮುಖ್ಯವಾಗಿ ಭಯೋತ್ಪಾದಕರು, ಸಮಾಜಘಾತುಕರು ಇದರ ಲಾಭಪಡೆಯಬಹುದು ಎಂದು ಬಾಂಗ್ಲಾ ಕಳವಳ ವ್ಯಕ್ತಪಡಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next