Advertisement

ಬಾಂಗ್ಲಾ ಡಿಜಿಟಲ್‌ ಭದ್ರತೆ ಮಸೂದೆಗೆ ಪತ್ರಕರ್ತರ ವಿರೋಧ

07:05 PM Feb 01, 2018 | udayavani editorial |

ಢಾಕಾ  : ನೂರಾರು ಬಾಂಗ್ಲಾದೇಶೀ ಪತ್ರಕರ್ತರು ಇಂದು ಬೀದಿಗಿಳಿದು ಸರಕಾರದ ಹೊಸ ಡಿಜಿಟಲ್‌ ಭದ್ರತಾ ಮಸೂದೆಯನ್ನು ವಿರೋಧಿಸಿದರು. 

Advertisement

ಈ ಮಸೂದೆಯು ಕಾಯಿದೆಯಾಗಿ ಜಾರಿಗಿ ಬಂದಲ್ಲಿ ಮಾಧ್ಯಮಕ್ಕೆ ಸ್ವಾತಂತ್ರ್ಯಕ್ಕೆ ಭಾರೀ ಧಕ್ಕೆ ಒದಗಲಿದೆ ಎಂದು ಪ್ರತಿಭಟನೆ ನಿರತ ಪತ್ರಕರ್ತರು ಹೇಳಿದ್ದಾರೆ.

ಡಿಜಿಟಲ್‌ ಭದ್ರತಾ ಕಾಯಿದೆಯ ಪ್ರಕಾರ ಯಾವುದೇ ಪತ್ರಕರ್ತ ಬೇಹುಗಾರಿಕೆ ಉದ್ದೇಶದಿಂದ ಇಲೆಕ್ಟ್ರಾನಿಕ್‌ ಉಪಕರಣಗಳನ್ನು ಬಳಸಿಕೊಂಡು ಸರಕಾರಿ ಕಚೇರಿಗಳನ್ನು ಅಕ್ರಮವಾಗಿ ಪ್ರವೇಶಿಸಿ ರಹಸ್ಯ ಮಾಹಿತಿಗಳನ್ನು ಕಲೆ ಹಾಕಿದಲ್ಲಿ ಆತನಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next