Advertisement

Bangladesh ಪ್ರವಾಹ: ಇನ್ನೂ 3 ಲಕ್ಷ ಮಂದಿ ಸಂಕಷ್ಟದಲ್ಲಿ!

01:31 AM Aug 26, 2024 | Team Udayavani |

ಢಾಕಾ: ಪ್ರವಾಹದಿಂದ ತತ್ತರಿಸಿದ್ದ ಬಾಂಗ್ಲಾದೇಶದಲ್ಲಿ ಇದೀಗ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಆದರೂ ಇನ್ನೂ 3 ಲಕ್ಷ ಮಂದಿ ತುರ್ತು ಆಶ್ರಯ ಶಿಬಿರಗಳಲ್ಲಿದ್ದು, ಅವರಿಗೆ ನೆರವು ಒದಗಿಸುವ ಅಗತ್ಯವಿದೆ ಎಂದು ಅಲ್ಲಿನ ಆಡಳಿತ ತಿಳಿಸಿದೆ. 18 ಮಂದಿ ಸಾವಿಗೀಡಾದ ಪ್ರವಾಹದಿಂದ ಬರೋಬ್ಬರಿ 52 ಲಕ್ಷ ಮಂದಿಗೆ ತೊಂದರೆಯಾಗಿದೆ. ಮೊದಲೇ ರಾಜಕೀಯ ಬಿಕ್ಕಟ್ಟಿನಲ್ಲಿರುವ ದೇಶದಲ್ಲಿ ಈ ಪ್ರವಾಹ ಪರಿಸ್ಥಿತಿಯನ್ನು ನಿವಾರಿಸುವುದೇ ಸದ್ಯಕ್ಕೆ ಅಲ್ಲಿನ ಮಧ್ಯಾಂತರ ಸರಕಾರದ ಎದುರಿರುವ ಪ್ರಮುಖ ಸವಾಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.