Advertisement
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಹಸೀನಾ ಆಡಳಿತಾವಧಿಯಲ್ಲಿ ಪ್ರಜಾಪ್ರಭುತ್ವದ ತಣ್ತೀ ಅವಗಣಿಸಲಾಗಿತ್ತು. ಇದರಿಂದಾಗಿ ಆಡಳಿತ ವ್ಯವಸ್ಥೆ ಕುಸಿದು ಪ್ರಜಾಪ್ರಭುತ್ವ, ಆರ್ಥಿಕ ಸ್ಥಿರತೆ ಹಾಗೂ ಜನರ ನಂಬಿಕೆಯನ್ನು ಪುನಃಸ್ಥಾಪಿಸ ಬೇಕಾಗಿದೆ ಎಂದರು. ದೇಶದ ಸಾಂವಿಧಾನಿಕ ಮತ್ತು ನ್ಯಾಯಾಂಗ ವ್ಯವಸ್ಥೆ ಗಳಲ್ಲಿ ಬದಲಾವಣೆಯಾದ ಬಳಿಕವಷ್ಟೇ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲಾಗುತ್ತದೆ ಎಂದರು.
ಇದೇ ವೇಳೆ, ದೇಶದ ವಿರುದ್ಧ “ದೊಡ್ಡ ರಾಷ್ಟ್ರಗಳು ನಡೆಸುತ್ತಿರುವ ಅಪಪ್ರಚಾರ ತಡೆಯಬೇಕು’ ಎಂದು ಮೊಹಮ್ಮದ್ ಯೂನುಸ್ ಹೇಳಿದ್ದಾರೆ. ಈ ಮೂಲಕ ಭಾರತ ಪರೋಕ್ಷವಾಗಿ ಬಾಂಗ್ಲಾದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದಿದ್ದಾರೆ. ಯೂನುಸ್‌ರಿಂದ ನರಹತ್ಯೆ: ಹಸೀನಾ
ಮೊಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಾಂತರ ಸರಕಾರ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾಕರ ಮೇಲೆ ದಾಳಿಗೆ ಕಾರಣವಾಗಿದೆ. ಅವರು ನರಹತ್ಯೆ ಎಸಗಿದ್ದಾರೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ.