Advertisement

Bangladesh Crisis: ಉಡುಪಿಯಲ್ಲಿ ಮಾನವ ಸರಪಳಿ ರಚನೆ

10:27 PM Aug 12, 2024 | Team Udayavani |

ಉಡುಪಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಅಕ್ರಮಣವನ್ನು ವಿರೋಧಿಸಿ, ಸಮಾಜದ ಜಾಗೃತಿಗಾಗಿ ಸೋಮವಾರ ಹಿಂದೂ ಹಿತರಕ್ಷಣ ಸಮಿತಿಯಿಂದ ಉಡುಪಿ ನಗರದಲ್ಲಿ ಮಾನವ ಸರಪಳಿ ರಚಿಸಲಾಯಿತು.

Advertisement

ಕಲ್ಸಂಕದಿಂದ ಆರಂಭಗೊಂಡ ಮಾನವ ಸರಪಳಿ ಸಿಟಿ ಬಸ್‌ ನಿಲ್ದಾಣದ ವರೆಗೆ ಹಾಗೂ ಮಣಿಪಾಲ ಮಾರ್ಗದಲ್ಲಿ ಕಡಿಯಾಳಿಯವರೆಗೂ ಮಾನವ ಸರಪಣಿ ರಚಿಸಿ, ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷತ್‌, ಹಿಂದೂ ಜಾಗರಣ ವೇದಿಕೆ, ಬಿಜೆಪಿ ಹೀಗೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಾಂಗ್ಲಾದ ಹಿಂದೂಗಳಿಗೆ ರಕ್ಷಣೆ ನೀಡಬೇಕು. ಇತರೆಲ್ಲ ವಿಷಯಗಳಿಗೂ ಮಾರುದ್ಧ ಹೇಳಿಕೆ ನೀಡುವವರು ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ಬಾಂಗ್ಲಾದಲ್ಲಿ ರಾಜಕೀಯ ಅಸ್ಥಿರತೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮುಸ್ಲಿಂ ಮತೀಯವಾದಿಗಳು ಅಲ್ಪಸಂಖ್ಯಾಕ ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ರಾಷ್ಟ್ರೀಯವಾದಿ ಭಾರತೀಯರು ಒಕ್ಕೊರಲಿನಿಂದ ಖಂಡಿಸಬೇಕು. ಹಿಂದೂ ದೇವಸ್ಥಾನ, ಆರಾಧನಾ ಕೇಂದ್ರಗಳ ಮೇಲೆ ದಾಳಿ, ಹಿಂದೂ ಧರ್ಮೀಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಾ ಹಿಂದೂ ವಿರೋಧಿ ನೀತಿ ನಡೆಸುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಬಾಂಗ್ಲಾ ಸರಕಾರ ತತ್‌ಕ್ಷಣ ಕಠಿನ ಕ್ರಮಕೈಗೊಂಡು ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಯಶ್‌ಪಾಲ್‌ ಸುವರ್ಣ ತಿಳಿಸಿದರು.

ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಭಾರತದ ಸಮಸ್ತ ಹಿಂದೂ ಧರ್ಮದ ಹಿತರಕ್ಷಣೆಗೆ ಸದಾ ಸಿದ್ಧವಾಗಿರುವ ಹಿಂದೂ ಹಿತರಕ್ಷಣ ಸಮಿತಿಯು ಬಾಂಗ್ಲಾದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಅವರ ಸುರಕ್ಷೆಗೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದರು.

Advertisement

ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ, ಮಾಜಿ ಶಾಸಕ ಲಾಲಾಜಿ ಆರ್‌. ಮೆಂಡನ್‌, ಪ್ರಮುಖರಾದ ದಿನಕರ ಶೆಟ್ಟಿ ಹೆರ್ಗ, ವಾದಿರಾಜ್‌, ಸತೀಶ್‌ ಕುತ್ಯಾರ್‌, ಮಹೇಶ್‌ ಬೈಲೂರು, ಉಮೇಶ್‌ ಸೂಡ, ಶಿಲ್ಪಾ ಸುವರ್ಣ, ನಯನಾ ಗಣೇಶ್‌, ಮಟ್ಟಾರು ರತ್ನಾಕರ ಹೆಗ್ಡೆ, ಶ್ರೀಶ ನಾಯಕ್‌, ಸುಪ್ರಸಾದ್‌ ಶೆಟ್ಟಿ, ಶ್ಯಾಮಲಾ ಕುಂದರ್‌, ಸಂಧ್ಯಾ ರಮೇಶ್‌, ಪೃಥ್ವಿರಾಜ್‌ ಶೆಟ್ಟಿ ಬಿಲ್ಲಾಡಿ, ವೀಣಾ ಶೆಟ್ಟಿ, ಸುಮಿತ್ರಾ ನಾಯಕ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next