Advertisement

Bangladesh: ಕೃಷ್ಣದಾಸ್‌ ಜಾಮೀನು ಅರ್ಜಿ: ಮುಂಚಿತ ವಿಚಾರಣೆ ತಿರಸ್ಕರಿಸಿದ ಬಾಂಗ್ಲಾ ಕೋರ್ಟ್‌

11:52 PM Dec 11, 2024 | Team Udayavani |

ಢಾಕಾ: ದೇಶದ್ರೋಹ ಪ್ರಕರಣದಲ್ಲಿ ಬಂಧಿತರಾಗಿರುವ ಬಾಂಗ್ಲಾದ ಹಿಂದೂ ಸಂತ ಚಿನ್ಮಯ್‌ ಕೃಷ್ಣ ದಾಸ್‌ ಜಾಮೀನು ಅರ್ಜಿಯ ವಿಚಾರಣೆಯನ್ನು ಜ. 2ಕ್ಕೂ ಮುಂಚಿತವಾಗಿ ನಡೆಸಬೇಕು ಎಂಬ ಮನವಿಯನ್ನು ಚಟ್ಟೋಗ್ರಾಮ್‌ ಕೋರ್ಟ್‌ ತಿರಸ್ಕರಿಸಿದೆ.

Advertisement

ಈ ಬಗ್ಗೆ ಮನವಿ ಸಲ್ಲಿಸಿರುವ ವಕೀಲರು ಈ ಕುರಿತು ವಕಾಲತ್ತು ನಡೆಸಲು ಕೃಷ್ಣ ದಾಸ್‌ ಅವರ ಅನುಮತಿ ಪಡೆದಿಲ್ಲ ಎಂಬುದನ್ನು ಪರಿಗಣಿಸಿದ ಕೋರ್ಟ್‌ ಅವಧಿ ಪೂರ್ವ ವಿಚಾರಣೆ ಮನವಿಯನ್ನು ತಿರಸ್ಕರಿಸಿತು. ಡಿ. 3ರಂದು ನಡೆಯಬೇಕಾಗಿದ್ದ ದಾಸ್‌ ಅವರ ಜಾಮೀನು ಅರ್ಜಿಯ ವಿಚಾ ರಣೆಯನ್ನು, ಅವರ ಪರ ಯಾವುದೇ ವಕೀಲರು ಹಾಜರಾಗದ ಕಾರಣ ಜ. 2ಕ್ಕೆ ಮುಂದೂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next