Advertisement

ಎಮರ್ಜಿಂಗ್‌ ಏಷ್ಯಾ ಕಪ್‌ ಕ್ರಿಕೆಟ್‌ ಭಾರತಕ್ಕೆ ಬಾಂಗ್ಲಾದೇಶ ಸವಾಲು

11:12 PM Jul 20, 2023 | Team Udayavani |

ಕೊಲಂಬೊ: ಲೀಗ್‌ ಹಂತ ದಲ್ಲಿ ಅಮೋಘ ಆಟದ ಪ್ರದರ್ಶನ ನೀಡಿದ ಭಾರತ “ಎ’ ತಂಡವು ಶುಕ್ರವಾರ ನಡೆಯುವ ಎಮರ್ಜಿಂಗ್‌ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ದ್ವಿತೀಯ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ “ಎ’ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.

Advertisement

ಮೊದಲ ಸೆಮಿಫೈನಲ್‌ ಪಂದ್ಯವು ಶ್ರೀಲಂಕಾ ಮತ್ತು ಪಾಕಿಸ್ಥಾನ ನಡುವೆ ನಡೆಯಲಿದೆ. ಈ ಪಂದ್ಯ ಬೆಳಗ್ಗೆ 10ಕ್ಕೆ ಆರಂಭವಾಗಲಿದೆ. ಈ ಕೂಟದ ಫೈನಲ್‌ ಜು. 23ರಂದು ನಡೆಯಲಿದೆ.

ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಿರುವ ಭಾರತ ಈ ಕೂಟದಲ್ಲಿ ಅಜೇಯ ಸಾಧನೆ ಮಾಡಿದೆ. ಸಮಯಕ್ಕೆ ಸರಿಯಾಗಿ ಆಟಗಾರರು ನಿರೀಕ್ಷಿತ ನಿರ್ವಹಣೆ ನೀಡಿದ್ದರಿಂದ ಭಾರತ ಆಡಿದ ಎಲ್ಲ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಯಶ್‌ ಧುಲ್‌, ಸಾಯಿ ಸುದರ್ಶನ್‌, ಅಭಿಷೇಕ್‌ ಶರ್ಮ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರೆ ಹರ್ಷಿತ್‌ ರಾಣ, ನಿಶಾಂತ್‌ ಸಿಂಧು ಮತ್ತು ರಾಜ್ಯವರ್ಧನ್‌ ಹಂಗಾಂರ್ಗೆಕರ್‌ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ. ರಾಜ್ಯವರ್ಧನ್‌ ಕೂಟದಲ್ಲಿಯೇ ಗರಿಷ್ಠ 8 ವಿಕೆಟ್‌ ಉರುಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next