Advertisement

Bangladesh; ಇನ್‌ಸ್ಟಾ,ವಾಟ್ಸ್‌ಆ್ಯಪ್‌,ಯುಟ್ಯೂಬ್‌ ಬಳಕೆಗೆ ನಿರ್ಬಂಧ: ವರದಿ

12:09 AM Aug 04, 2024 | Team Udayavani |

ಢಾಕಾ: ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟಾ ಗ್ರಾಂ, ಟಿಕ್‌ಟಾಕ್‌, ಯುಟ್ಯೂಬ್‌, ವಾಟ್ಸ್‌ಆ್ಯಪ್‌ ಬಳಕೆ ಯನ್ನು ಬಾಂಗ್ಲಾದೇಶದಲ್ಲಿ ನಿರ್ಬಂಧಿಸಲಾಗಿದೆ. ಟರ್ಕಿ ಸರಕಾರ ಇಂಥದ್ದೇ ನಿರ್ಬಂಧ ಹೇರಿದ ಬೆನ್ನಲ್ಲೇ ಬಾಂಗ್ಲಾದಲ್ಲಿ ಕೂಡ ಅಲ್ಲಿನ ಸರಕಾರ ಆ.2ರಂದು ಈ ಆದೇಶ ಹೊರಡಿಸಿದೆ. ಆದರೆ ನಿರ್ಬಂಧಕ್ಕೆ ಕಾರಣ ವೇನು ಎಂಬುದನ್ನು ಬಹಿರಂಗಪಡಿಸಲಾಗಿಲ್ಲ.

Advertisement

ಇತ್ತೀ ಚೆಗೆ ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲು ಬಗ್ಗೆ ಭಾರೀ ಪ್ರತಿಭಟನೆಗಳು ನಡೆದು ಹಿಂಸಾಚಾರಕ್ಕೆ ತಿರು ಗಿದ್ದವು. ಈ ವೇಳೆಯೂ ಜಾಲತಾಣಗಳ ಬಳಕೆಗೆ ನಿರ್ಬಂಧ ವಿಧಿಸಲಾಗಿತ್ತು ಹಾಗೂ ಅಂತರ್ಜಾಲ ಸೇವೆ ಕಡಿತಗೊಳಿಸಲಾಗಿತ್ತು. ಪ್ರತಿಭಟನೆಗಳು ತಣ್ಣ ಗಾದ ಬಳಿಕ ಈ ಸೇವೆ ಪುನಃಸ್ಥಾಪಿಸಲಾಗಿದೆ. ಅದರ ಬೆನ್ನಲ್ಲೇ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಲಾ ಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next