Advertisement

Bangladesh; ಸರಕಾರದ ಮುಖ್ಯಸ್ಥರ ಬಳಿ 27 ಖಾತೆ : ಹಿಂದೂ ವ್ಯಕ್ತಿಗೂ ಸ್ಥಾನ

01:26 AM Aug 10, 2024 | Team Udayavani |

ಢಾಕಾ: ಬಾಂಗ್ಲಾದೇಶದ ಮಧ್ಯಾಂತರ ಸರಕಾರದ ಮುಖ್ಯಸ್ಥರಾಗಿ ನೊಬೆಲ್‌ ಪುರಸ್ಕೃತ ಮೊಹಮ್ಮದ್‌ ಯೂನುಸ್‌ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ, ಸಲಹಾ ಸಮಿತಿಯ 16 ಸದಸ್ಯರಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. 84 ವರ್ಷದ ಯೂನುಸ್‌, ರಕ್ಷಣೆ, ಸಾರ್ವಜನಿಕ ಆಡಳಿತ, ಶಿಕ್ಷಣ, ಇಂಧನ ಸೇರಿ 27 ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

Advertisement

ಮಾಜಿ ಸಚಿವ ಹುಸೇನ್‌ ಅವರಿಗೆ ವಿದೇಶಾಂಗ ಖಾತೆ ನೀಡಲಾಗಿದೆ. ಬಾಂಗ್ಲಾದೇಶ ಬ್ಯಾಂಕ್‌ನ ಮಾಜಿ ಗವರ್ನರ್‌ ಸಲಾಹುದ್ದೀನ್‌ ಅಹ್ಮದ್‌ಗೆ ವಿತ್ತ ಖಾತೆ, ಮಾಜಿ ಅಟಾರ್ನಿ ಜನರಲ್‌ ಎ.ಎಫ್.ಹಸನ್‌ ಆರೀಫ್ಗೆ ಸ್ಥಳೀಯ ಆಡಳಿತ ಜವಾಬ್ದಾರಿ ನೀಡಲಾಗಿದೆ. ಇನ್ನು ಸರಕಾರದ ಭಾಗವಾಗಿರುವ ವಿದ್ಯಾರ್ಥಿ ಚಳವಳಿಯ ಮುಖಂಡ ರಾದ ಎಂ.ನಹೀದ್‌ ಇಸ್ಲಾಂ, ಆಸೀಫ್ ಮಹಮ್ಮದ್‌ಗೆ ಕ್ರಮವಾಗಿ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ, ಹಾಗೂ ಕ್ರೀಡಾ ಇಲಾಖೆ ನೀಡಲಾಗಿದೆ.

ಏಕೈಕ ಹಿಂದೂ ವ್ಯಕ್ತಿಗೂ ಸ್ಥಾನ
16 ಸದಸ್ಯರ ಸಲಹಾ ಸಮಿತಿಯಲ್ಲಿ ಏಕೈಕ ಹಿಂದೂ ವ್ಯಕ್ತಿ ಪ್ರೊಫೆಸರ್‌ ಬಿಧಾನ್‌ ರಂಜನ್‌ ರಾಯ್‌ ಅವರಿಗೆ ಸ್ಥಾನ ನೀಡಲಾಗಿದೆ. ಮಾಜಿ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ರಾಜತಾಂತ್ರಿಕರು, ಸಾಮಾಜಿಕ ಕಾರ್ಯಕರ್ತರು ಮಧ್ಯಾಂತರ ಸರಕಾರದ ಭಾಗವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next