Advertisement

ಬಳೆ ಬಳೆ ಅಂದದ ಚೆಂದುಳ್ಳಿ!

11:42 AM Oct 19, 2017 | |

ಫ್ಯಾಷನ್‌ಲೋಕದಲ್ಲಿ ಇದೀಗ ಸುದ್ದಿ ಮಾಡಿರುವ ಟ್ರೆಂಡ್‌ ಎಂಬೆಲಿಷ್ಡ್ ಕಫ್ಸ್. “ಕಫ್ಸ್’ ಅಂದರೆ ಅಂಗಿಯ ತೋಳಿನ ತುದಿಯ ಭಾಗ. ಎಂಬೆಲಿಷ್ಡ್ ಕಫ್ಸ್ ಅಂದರೆ ಅಂಗಿಯ ತೋಳಿನ ತುದಿಯ ಭಾಗದಲ್ಲಿ ಅಲಂಕಾರ. ಸಾಲಿಡ್‌ ಕಲರ್‌, ಅಂದರೆ ಒಂದೇ ಬಣ್ಣದ ಉಡುಪಿನಲ್ಲಿ ಈ ಶೈಲಿ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಉಡುಪು ತಿಳಿ ಬಣ್ಣ, ಇಲ್ಲವೇ ಗಾಢ ಬಣ್ಣವಿರಬೇಕು. ಬಣ್ಣಬಣ್ಣದ ಉಡುಪಿನಲ್ಲಿ ಈ ಅಲಂಕಾರ ಕಾಣದಂತೆ ಮುಚ್ಚಿಹೋಗುತ್ತದೆ.

Advertisement

ಒಂದೋ ಇಡೀ ಉಡುಪು ಬೋಳಾಗಿರಬೇಕು, ಇಲ್ಲವೇ ಕೇವಲ ತೋಳು ಬೋಳಾಗಿರಬೇಕು. ಆಗ ತೋಳಿನ ತುದಿಯ ಭಾಗದಲ್ಲಿ ಮಾತ್ರ ಅಲಂಕಾರವಿದ್ದಾಗ ಅದು ಬಳೆಗಳಂತೆ ಕಾಣುತ್ತವೆ. ಈ ಅಲಂಕಾರ ಉಡುಪಿನ ಅಂದ ಹೆಚ್ಚಿಸುತ್ತದೆ. ಅಲ್ಲದೇ… ಡ್ರೆಸ್‌ ಜೊತೆಗೆ ಬಳೆ, ಬ್ರೇಸ್ಲೆಟ್‌, ಕೈಗಡಿಯಾರದಂಥ ಆಕ್ಸೆಸರೀಸ್‌ ತೊಡುವ ಅವಶ್ಯಕತೆ ಇರುವುದಿಲ್ಲ. 

ಆಕ್ಸೆಸರೀಸ್‌ ತೊಟ್ಟರೆ, ಉಡುಪಿನ ಅಂದ ಕಾಣಿಸುವುದಿಲ್ಲ. ಹಾಗಾಗಿ ಈ ಉಡುಪಿನ ಜೊತೆ ಕಿವಿಯೋಲೆ, ಉಂಗುರ ತೊಡಬಹುದು. ವಿಶೇಷವೆಂದರೆ, ಇದು ಕೇವಲ ವೆಸ್ಟರ್ನ್ ಅಲ್ಲದೆ ಇಂಡಿಯನ್‌ ಉಡುಪಿಗೂ ಚೆನ್ನಾಗಿ ಒಪ್ಪುತ್ತದೆ. ಹಾಗಾಗಿ ಈ ಶೈಲಿಯ ಉಡುಪನ್ನು ಪಾರ್ಟಿ, ಹಬ್ಬ, ಪೂಜೆ, ಮದುವೆ, ಆಫೀಸ್‌ವೇರ್‌, ಕ್ಯಾಶುವಲ… ಅಥವಾ ಯಾವುದೇ ಸಭೆ ಸಮಾರಂಭಕ್ಕೂ ತೊಡಬಹುದು.

ವೆಸ್ಟರ್ನ್ ಅಂದರೆ ಪಾಶ್ಚಾತ್ಯ ಉಡುಗೆಗಳಲ್ಲಿ ಜಂಪ್‌ ಸೂಟ್‌, ಶರ್ಟ್‌ (ಅಂಗಿ) ಜಾಕೆಟ್, ಟ್ಯೂನಿಕ್‌, ಫಾರ್ಮಲ… ಶರ್ಟ್‌, ಬ್ಲೇಜರ್‌, ಗೌನ್‌ನಂಥ ಉಡುಪಿನ ತೋಳಿನಲ್ಲಿ ಈ ಶೈಲಿ ಬಳಸಬಹುದು. ಇನ್ನು ಇಂಡಿಯನ್‌ ಅಂದರೆ ಸಾಂಪ್ರದಾಯಿಕ ಉಡುಗೆಗಳಲ್ಲಿ ಸೀರೆಯ ಬ್ಲೌಸ್‌ (ರವಿಕೆ) ಚೂಡಿದಾರ, ಸಲ್ವಾರ್‌ ಕಮೀಜ…, ಕುರ್ತಾ, ಅನಾರ್ಕಲಿ, ಪಟಿಯಾಲ ಸೂಟ್‌, ಲಂಗ ದಾವಣಿ, ಉದ್ದ ಲಂಗ ಅಥವಾ ಘಾಗ್ರಾ ಚೋಲಿಯಂಥ ಉಡುಗೆಯ ತೋಳಿಗೂ ಅಳವಡಿಸಬಹುದಾಗಿದೆ.

ಈ ಎಂಬೆಲಿಷ್ಡ್ ಕಫ್ ಶೈಲಿಯ ಅಲಂಕಾರಕ್ಕೆ ಹೆಚ್ಚಾಗಿ ಬಂಗಾರಕ್ಕೆ ಹೋಲುವ ವಸ್ತುಗಳನ್ನು ಬಳಸಲಾಗುತ್ತದೆ. ಆದ್ದರಿಂದ ಇವು ಚಿನ್ನದ ಬಳೆಗಳಂತೆ ಅಥವಾ ಕೈಗೆ ತೊಡುವ ಆಭರಣದಂತೆಯೇ ಕಾಣಿಸುತ್ತವೆ. ಚಿನ್ನಕ್ಕೆ ಸೀಮಿತವಾಗದೆ ಈ ಶೈಲಿಯ ಅಲಂಕಾರಕ್ಕೆ ಬೆಳ್ಳಿ, ಪಳ ಪಳ ಹೊಳೆಯುವ ಬಣ್ಣದ ವಸ್ತುಗಳನ್ನೂ ಬಳಸಲಾಗುವುದು. ಕಲ್ಲು, ಗಾಜಿನ ಚೂರು, ಪ್ಲಾಸ್ಟಿಕ್‌, ಮುತ್ತು, ರತ್ನಕ್ಕೆ ಹೋಲುವಂಥ ಕಲ್ಲುಗಳು, ಮಣಿಗಳು ಮುಂತಾದವುಗಳಿಂದ ಎಂಬೆಲಿಷ್ಡ್ ಕಫ್ಸ್ ಶೈಲಿಯ ಅಲಂಕಾರ ಮಾಡಲಾಗುತ್ತದೆ.

Advertisement

ಸಿನಿಮಾ ನಟಿಯರು ಈ ಶೈಲಿಯ ಅಲಂಕಾರವುಳ್ಳ ತೋಳಿನ ಉಡುಗೆಯನ್ನು ಫ್ಯಾಷನ್‌ ಶೋ, ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಿನಿಮಾ ಪ್ರಮೋಷನ್‌ಗಳಲ್ಲಿ ತೊಟ್ಟಿರುವ ಚಿತ್ರಗಳನ್ನು ನೀವು ನೋಡಿರುತ್ತೀರ. ತಾರೆಯರ ಅಭಿಮಾನಿಗಳು ಅದಕ್ಕೆ ಮಾರುಹೋಗಿ ರವಿಕೆ, ಜಾಕೆಟ್‌ ಮತ್ತು ಕುರ್ತಾಗಳ ತೋಳುಗಳಿಗೆ ಈ ರೀತಿಯ ಅಲಂಕಾರ ಮಾಡಿಸುತ್ತಿದ್ದಾರೆ! ತಮ್ಮ ನೆಚ್ಚಿನ ಧಾರಾವಾಹಿಯ ನಾಯಕಿಯರೂ ಇಂಥ ಫ್ಯಾಷನ್‌ ಅನ್ನು ಅನುಕರಿಸುತ್ತಿರುವ ಕಾರಣ ವೀಕ್ಷಕರೂ ಇಂಥ ಉಡುಪುಗಳನ್ನು ತೊಡಲು ಮುಂದಾಗುತ್ತಿದ್ದಾರೆ.

ದೀಪಾವಳಿಗೆ ಪ್ರತಿ ವರ್ಷವೂ ಸಾಂಪ್ರದಾಯಿಕ ಉಡುಪನ್ನು ತೋಡುತ್ತೀರ. ಈ ಬಾರಿಯೂ ಹಾಗೇ ಮಾಡಿ. ಆದರೆ ಅದಕ್ಕೊಂದು ಟ್ವಿಸ್ಟ್ ನೀಡಿ. ಎಂಬೆಲಿಷ್ಡ್ ಕಫ್ಸ್ ಶೈಲಿಯ ಅಲಂಕಾರವುಳ್ಳ ತೋಳಿನ ಉಡುಪು ತೊಟ್ಟು, ಸರಳವಾಗಿ ಕಂಡರೂ ಅದ್ಧೂರಿಯಾಗಿರುವ ಈ ಹೊಸ ಟ್ರೆಂಡ್‌ನ್ನು ನಿಮ್ಮ ಉಡುಪಿನ ಸಂಗ್ರಹಕ್ಕೆ ಸೇರಿಸಿ.

Advertisement

Udayavani is now on Telegram. Click here to join our channel and stay updated with the latest news.

Next