ಬಂಗಾರಪೇಟೆ: ಆಧುನಿಕತೆ ಮುಂದುವರಿದಂತೆ ಗ್ರಾಮೀಣ ಭಾಗದಲ್ಲಿದ್ದ ಕೆಲವು ಪದ್ಧತಿಗಳು ನಿಧನವಾಗಿ ನೇಪತ್ಯಕ್ಕೆ ಸರಿಯುತ್ತಿವೆ. ಅದರಲ್ಲಿ ಕಣಿ ಹೇಳುವ ಕೊರವಂಜಿಗಳೂ ಸೇರಿದ್ದಾರೆ. ಹಿಂದೆ ಊರೂರು ಅಲೆಯುತ್ತ, ಮನೆ ಬಾಗಿಲಿಗೇ ಹೋಗಿ ವಿಶೇಷ ವೇಷಭೂಷಣಗಳಿಂದ ಹಾಡಿನ ಮೂಲಕ ಭವಿಷ್ಯ ಹೇಳುತ್ತಿದ್ದ ಕೊರವಂಜಿಗಳು ಈಗ ಸಿಗುವುದೇ ಅಪರೂಪ. ಇಂತಹ ಕಣಿ ಹೇಳುವ ಕೊರವಂಜಿಗಳು ಪಟ್ಟಣದಲ್ಲಿ ಇದ್ದಾರೆ.
Advertisement
ಜೈನ ದೇಗುಲ ಮುಂಭಾಗ ಮಂಗಳವಾರ ಮತ್ತು ಶುಕ್ರವಾರದಂದು ಸಾಂಪ್ರದಾಯದಿಂದ ಬಂದಿರುವ ಕಣಿ ಹೇಳುವ ಕಾಯಕವನ್ನು ಮಹಿಳೆಯರಿಬ್ಬರು ವ್ಯಾಪಾರದ ಜೊತೆ ಮಾಡುತ್ತಿದ್ದಾರೆ. ಹಳ್ಳಿಗಳಿಂದ ಬರುವ ಮಹಿಳೆಯರು ನವಧಾನ್ಯ, ಎಲೆ-ಅಡಕೆ, ದಕ್ಷಿಣೆ ಕೊಟ್ಟು ಕಣಿ ಕೇಳುತ್ತಾರೆ.
Related Articles
Advertisement
ಬಂಗಾರಪೇಟೆ ತಾಲೂಕಿನ ಜನತೆ ಸಂತೆಯ ದಿನವಾದ ಶುಕ್ರವಾರ ಈಗಲೂ ಸಾಕಷ್ಟು ಮಂದಿ ಕಣಿ ಕೇಳಲು ಬರುತ್ತಾರೆ. ಗ್ರಾಮೀಣ ಮತ್ತು ಪಟ್ಟಣದ ಜನತೆ, ಪಟ್ಟಣದಲ್ಲಿ ಪಚ್ಚೆ ಸಾಮಗ್ರಿಯನ್ನು ಗಂಧಿಗೆ ಅಂಗಡಿಗಳಲ್ಲಿ ಪಡೆದು ಕಣಿಯಮ್ಮ ಹೇಳಿದಂತೆ ರೋಗಿ ಅಥವಾ ಸಮಸ್ಯೆ ಇರುವವರನ್ನು ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿಕೊಂಡು ಬರುವುದು ವಾಡಿಕೆಯಾಗಿದೆ.