ಬಂಗಾರಪೇಟೆ: ಕನ್ನಡಿಗರಿಗೆ ಸಾರ್ವಭೌಮತ್ವ ಇದೆ, ಪ್ರತಿಯೊಬ್ಬರು ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದಾಗ ಮಾತ್ರ ಕನ್ನಡ ಭಾಷೆ, ನೆಲ, ಜಲ ಉಳಿಯುತ್ತದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಬೂದಿಕೋಟೆ ಹೋಬಳಿಯ ಮೂತನೂರು ಗ್ರಾಮದಲ್ಲಿ ಜೈ ಭುವನೇಶ್ವರಿ ಕರುನಾಡ ಸೇನೆ ವತಿಯಿಂದ ಗ್ರಾಮ ಘಟಕ ಉದ್ಘಾಟನೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ವೈಟ್‌ಫಿಲ್ಡನ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಮೂತನೂರು ಗ್ರಾಮದ ಹಾಗೂ ಸುತ್ತಮುತ್ತಲಿನ ನೂರಾರು ಜನರು ಪ್ರಯೋಜನ ಪಡೆದರು.
ಇದನ್ನೂ ಓದಿ :ಭಾರತದ ಮಾರುಕಟ್ಟೆಗೆ ಬರಲಿದೆ ಜಾಗ್ವಾರ್ ಐ ಪೇಸ್
ಕರ್ನಾಟಕ ಸಿಂಹ ಘರ್ಜನೆ ವೇದಿಕೆ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಸ್ವಾಮಿ, ಜೈ ಭುವನೇಶ್ವರಿ ಕರುನಾಡ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಅರಳು ಮಲ್ಲಿಗೆ ಸಾಹಿತ್ಯ ರಾಜ್ಯ ಪುರಸ್ಕೃತ ಕವಿ ಲಕ್ಷ್ಮಯ್ಯ, ಮೂತನೂರು ಘಟಕದ ಅಧ್ಯಕ್ಷ ಶಿವಾರಾಮ, ಕಸಾಪ ಜಿಲ್ಲಾ ಸಂಚಾಲಕ ರಾಜೇಂದ್ರ ಆಚಾರ್ಯ, ಮಾನವ ಹಕ್ಕುಗಳ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷೆ ಪದ್ಮಾ ಅಮರನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.