Advertisement

ಬಂಗಾರಪೇಟೆ: ಕಾಂಗ್ರೆಸ್‌ ಬೆಂಬಲಿತರು ಅಧಿಕ ಗೆಲುವು

12:33 PM Dec 31, 2020 | Team Udayavani |

ಬಂಗಾರಪೇಟೆ: ತಾಲೂಕಿನ 21 ಗ್ರಾಪಂಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಸದಸ್ಯರೇ ಆಯ್ಕೆಯಾಗಿದ್ದಾರೆ. ಕಳೆದ ಭಾನುವಾರ ನಡೆದ ತಾಲೂಕಿನ 21 ಗ್ರಾಪಂಗಳ 391 ಸ್ಥಾನಗಳಿಲ್ಲಿ ಚುನಾವಣೆಗೂ ಮೊದಲೇ 29 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 362 ಸ್ಥಾನಗಳಿಗೆ 999 ಮಂದಿ ಕಣದಲ್ಲಿದ್ದರು. ಹಲವು ಘಟಾನುಘಟಿಗಳಲ್ಲಿ ಕೆಲವರೂ ಮಾತ್ರ
ಗೆದ್ದರೆ, ಉಳಿದವರು ಸೋಲುಂಡಿದ್ದಾರೆ. ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪರ ಸ್ವ ಗ್ರಾಪಂ ಕೆಸರನಹಳ್ಳಿ ಹಲವು ದಶಕಗಳಿಂದ ಅವರ ಮುಷ್ಠಿಯಲ್ಲಿದ್ದು, ಈ ಚುನಾವಣೆಯಲ್ಲಿ ಅದು ಸಡಿಲಗೊಂಡಿದೆ.

Advertisement

ಮಾಜಿ ಶಾಸಕರ ಪುತ್ರನಿಗೆ ಸೋಲು: ಕೆಸರನಹಳ್ಳಿ ಗ್ರಾಪಂ ಬೆಂಗನೂರು ಗ್ರಾಮದಿಂದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪರ ಕಿರಿಯ ಪುತ್ರ ಬಿ.ವಿ.  ಪ್ರತಾಪ್‌ ಸ್ಪರ್ಧಿಸಿ 139 ಮತಗಳ ಅಂತರದಿಂದ ಕಾಂಗ್ರೆಸ್‌ ಬೆಂಬಲಿತ ಗಂಗಾಧರ್‌ ವಿರುದ್ಧ ಸೋತಿದ್ದರೆ, ಪಂಚಾಯ್ತಿಯಲ್ಲಿ ಬಿಜೆಪಿ ಬೆಂಬಲಿತ ಮಾಜಿ ಅಧ್ಯಕ್ಷ ಮಂಜುನಾಥ್‌ ಮಾತ್ರ ಒಂದು
ಮತದಿಂದ ಗೆದ್ದಿದ್ದಾರೆ.

ಇಂದಿರಾನಗರ ಕ್ಷೇತ್ರದಲ್ಲಿ ಪುರಸಭೆ ಸದಸ್ಯ ಕಪಾಲಿ ಶಂಕರ್‌ ಪತ್ನಿ ಲಲಿತಾ ಗೆಲುವು ಸಾಧಿಸಿದ್ದು, ಈ ಗ್ರಾಪಂನಲ್ಲಿ ಗೆದ್ದವರು ಬಹುತೇಕ ಕಾಂಗ್ರೆಸ್‌ ಬೆಂಬಲಿಗರು ಎಂಬುದು ವಿಶೇಷವಾಗಿದೆ.

ಇದನ್ನೂ ಓದಿ:ವಿರೋಧ ಪಕ್ಷದವರ ವಿರೋಧದ ಕಾರಣಕ್ಕೆ ನೈಟ್ ಕರ್ಫ್ಯೂ ಹಿಂಪಡೆದೆವು: ಸಚಿವ ಸುಧಾಕರ್

ದಂಪತಿಗಳ ಗೆಲುವು: ಡಿಕೆಹಳ್ಳಿ ಗ್ರಾಪಂ ದಾಸರಹೊಸಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಉದ್ಯಮಿ ಜಿ.ಆರ್‌.ಗೋಪಾಲರೆಡ್ಡಿ ಮತ್ತು ಅವರ ಪತ್ನಿ ಮಂಜುಳಾ ಇಬ್ಬರೂ ಗೆಲುವು ದಾಖಲಿಸಿದ್ದಾರೆ. ಕಾರಹಳ್ಳಿ ಗ್ರಾಪಂನ ತಿಮ್ಮಾಪುರದಿಂದ ಗಿರಿಜಮ್ಮ ಗೆದ್ದಿದ್ದರೆ, ಅವರ ಪತಿ ಕೃಷ್ಣಮೂರ್ತಿ ಯಳಬುರ್ಗಿ ಗ್ರಾಮದಿಂದ ಜಯಗಳಿಸಿದ್ದಾರೆ. ಕಾಮಸಮುದ್ರ ಗ್ರಾಪಂ ಮಾಜಿ ಅಧ್ಯಕ್ಷ ಆದಿನಾರಾಯಣ ಹಾಗೂ ವಟ್ಟಿಗಲ್‌ನಿಂದ ಸ್ಪರ್ಧಿಸಿದ್ದ ಅವರ ಪತ್ನಿ ಸಹ ಜಯ ಸಾಧಿಸಿರುವರ ದಂಪತಿಗಳಲ್ಲಿ ಪ್ರಮುಖರಾಗಿದ್ದಾರೆ.

Advertisement

ಸೋತ ಪ್ರಮುಖರು: ಗ್ರಾಪಂನ ಸೋತವರ ಪೈಕಿ ಟಿಎಪಿಸಿಎಂಎಸ್‌ ಅಧ್ಯಕ್ಷ ಜಿ.ರಾಜಾರೆಡ್ಡಿ, ಬೂದಿಕೋಟೆ ಬ್ಲಾಕ್‌ ಅಧ್ಯಕ್ಷ ಕೆ.ವಿ.ನಾಗರಾಜ್‌, ಮಾಗೊಂದಿ ಶ್ರೀನಿವಾಸನಾಯ್ಡು, ಮಾಜಿ ಶಾಸಕ ವೆಂಕಟಮುನಿಯಪ್ಪ ಪುತ್ರ ಪ್ರತಾಪ್‌, ತಾಪಂ ಸದಸ್ಯ ಹುನ್ಕುದ ವೆಂಕಟೇಶ್‌, ಬಿಜೆಪಿ ತಾಲೂಕು ಅಧ್ಯಕ್ಷ ರಾಮಾಪುರ ನಾಗೇಶ್‌ ಪತ್ನಿ ವಸಂತಮ್ಮ ಸೋತವರಲ್ಲಿ ಪ್ರಮುಖರು.
ಎಳೇಸಂದ್ರ ಗ್ರಾಪಂ ದಿನ್ನೂರು ಗ್ರಾಮದಲ್ಲಿ ಇಬ್ಬರು ಅಭ್ಯರ್ಥಿಗಳಾದ ಶ್ರೀನಿವಾಸರೆಡ್ಡಿ ಮತ್ತು ಅರುಣ್‌ಗೆ ಸಮ ಮತಗಳು ಬಂದಿದ್ದರಿಂದ ಲಾಟರಿಯಲ್ಲಿ ಶ್ರೀನಿವಾಸರೆಡ್ಡಿ ಗೆದ್ದರು.

ಬೂದಿಕೋಟೆ ಗ್ರಾಪಂನಲ್ಲಿ ಮಂಜುನಾಥ್‌ಗೆ ಸಹ ಲಾಟರಿಯಲ್ಲಿ ಅದೃಷ್ಟ ಒಲಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next