Advertisement
ಹೊಸ ಸೇತುವೆ ನಿರ್ಮಾಣದ ಪಕ್ಕದಲ್ಲಿ ಚಿಕ್ಕದಾದ ಹಳೆ ಸೇತುವೆ ಇದ್ದು, ಎರಡೂ ಅಕ್ಕಪಕ್ಕ ಇರುವ ಕಾರಣ ವಾಹನ ಸಂಚಾರಕ್ಕೆ ಯಾವ ಸೇತುವೆಯಲ್ಲಿ ಸಂಚರಿಸಬೇಕು ಎಂಬ ಗೊಂದಲಹೊಸದಾಗಿ ಈ ಮಾರ್ಗದಲ್ಲಿ ಬರುವ ವಾಹನ ಸವಾರರಿಗೆ ಉಂಟಾಗಿದೆ. ಇದರ ಜತೆಗೆ ಹಳೆಯ ಸೇತುವೆ ಸಣ್ಣದಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಒಂದು ವಾಹನ ಸಂಚರಿಸಿದ ಬಳಿಕ ಮತ್ತೂಂದು ವಾಹನದ ಚಾಲಕ ಕಾಯಬೇಕಾದ ಅನಿವಾರ್ಯ ಎದುರಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಬಳಿ ನಿರ್ಮಾಣ ಮಾಡುತ್ತಿರುವ ಮೇಲ್ಸೆತುವೆ ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ ಬರಲು ವಿಳಂಬವಾದ ಕಾರಣ ಕಾಮಗಾರಿ
ಪೂರ್ಣಗೊಳ್ಳಲು ಸ್ವಲ್ಪ ತಡವಾಗಿದೆ. ಅನುಮೋದನೆ ಕಾರ್ಯ ಇತ್ತೀಚೆಗೆ ಪೂರ್ಣಗೊಂಡಿದ್ದು, ಸೇತುವೆ ಬಳಿ ರಸ್ತೆ ನಿರ್ಮಿಸಲು ಜಲ್ಲಿ ಹಾಕಲಾಗಿದೆ. ಮುಂದಿನ 15 ದಿನಗಳಲ್ಲಿ ಡಾಂಬರು ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸಲಾಗುವುದು ಎಂದು ಗುತ್ತಿಗೆದಾರರಾದ ಕೆ.ಎಂ.ಮುರಳಿ ಮಾಹಿತಿ ನೀಡಿದ್ದಾರೆ.