Advertisement
ಪಟ್ಟಣದ ಅರಣ್ಯ ಉದ್ಯಾನವನದಲ್ಲಿ ನಡೆದ ರೈತಸಂಘದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಆಸ್ತಿಗಳನ್ನು ಉಳಿಸುವಂತೆ ದಾಖಲೆಗಳ ಸಮೇತ ತಾಲೂಕು ಆಡಳಿತಕ್ಕೆ ಮನವಿ ನೀಡಿ ತಿಂಗಳು ಕಳೆದರೂ ರಾಜಕೀಯ ಒತ್ತಡ ಹಾಗು ಭೂ ಮಾಫಿಯಾ ದಂಧೆಕೋರರ ಒತ್ತಡಕ್ಕೆ ಮಣಿದು ಕೆರೆ, ರಾಜಕಾಲುವೆಗಳನ್ನು ಉಳಿಸಲು ಫಲವಾಗಿ ಪ್ರತಿ ವರ್ಷ ಮಳೆ ಬಂದಾಗ ಬಡವರ ಬದುಕು ಬೀದಿಗೆ ಬೀಳುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದ ತಾಲೂಕುಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಪ್ರಧಾನ ಕಾರ್ಯದರ್ಶಿ ಮುನ್ನಾ, ಕೆಜಿಎಫ್ ತಾಲೂಕು ಅಧ್ಯಕ್ಷ ವೇಣು, ಸುರೇಶ್‌ರೆಡ್ಡಿ, ಸುರೇಶ್ ಗೌಡ, ವೆಂಕಟರಾಮಪ್ಪ, ಬೂದಿಕೋಟೆ ನಾಗಯ್ಯ, ಮುನಿರಾಜು, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾಲೂಕು ಅಧ್ಯಕ್ಷ ಪ್ರಭಾಕರ್, ಮುದುವಾಡಿ ಚಂದ್ರಪ್ಪ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಇತರರಿದ್ದರು.
ಅಧಿಕಾರಿಗಳಿಂದ ಹಿಂದೇಟುಸ್ಥಳೀಯ ಶಾಸಕರು ಅಭಿವೃದ್ಧಿಪಡಿಸಿರುವ ಎಸ್ ಎನ್ ಸಿಟಿ ಲೇಔಟ್‌ನಲ್ಲಿ ಸರ್ಕಾರಿ ರಸ್ತೆ, ಗೋಮಾಳ, ಕೆರೆ ಜಮೀನು ಒತ್ತುವರಿಯಾಗಿದೆ. ಜತೆಗೆ ರಾಜ್ಯ
ಹೆದ್ದಾರಿಗೆ ಹೊಂದಿಕೊಂಡಿರುವ 35 ಗುಂಟೆ ಗುಂಡು ತೋಪು ದೇವಸ್ಥಾನದ ನೆಪದಲ್ಲಿ ಒತ್ತುವರಿ ಮಾಡಿಕೊಂಡು ಹೆಬ್ಟಾಗಿಲು ನಿರ್ಮಿಸಿದ್ದು, ಎಲ್ಲಾ
ದಾಖಲೆಗಳು ಅಧಿಕಾರಿಗಳ ಬಳಿ ಇದ್ದರೂ ತೆರವುಗೊಳಿಸಲು ಹಿಂದೇಟು ಹಾಕುತ್ತಿರುವುದು ಏಕೆ?, ಬಡವರಿಗೆ ಒಂದು ನ್ಯಾಯ ಶ್ರೀಮಂತರಿಗೆ
ಒಂದು ನ್ಯಾಯವೇ ಎಂದು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.