Advertisement

ಎಳನೀರು ಬಂಗಾರ ಪಲ್ಕೆ ಫಾಲ್ಸ್‌ ದುರಂತ : 6ನೇ ದಿನದ ಶೋಧ ಕಾರ್ಯವೂ ವಿಫ‌ಲ

10:57 PM Jan 30, 2021 | Team Udayavani |

ಬೆಳ್ತಂಗಡಿ: ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದಲ್ಲಿ ಜ. 25ರಂದು ಗುಡ್ಡ ಕುಸಿತಗೊಂಡು ಮಣ್ಣಿನಡಿ ಸಿಲುಕಿದ ಸನತ್‌ ಶೆಟ್ಟಿ (20) ಅವರ ದೇಹಕ್ಕಾಗಿ ನಡೆಸುತ್ತಿರುವ ಶೋಧ ಕಾರ್ಯ ಆರನೇ ದಿನವೂ ಪೂರ್ಣಗೊಂಡಿದ್ದು ಯಾವುದೇ ಕುರುಹು ಲಭ್ಯವಾಗಿಲ್ಲ.

Advertisement

ದೇಹವು ಕೆಳಸ್ಥರದ ಬಂಡೆಗಳಡಿ ಸಿಲುಕಿರುವ ಸಾಧ್ಯತೆ ಇದೆಯಂದು ಅಲ್ಲಿಂದ ಸಂಪೂರ್ಣ ಮಣ್ಣು ತೆರವುಗೊಳಿಸಿದರೂ ಪ್ರಯೋಜನವಾಗಿಲ್ಲ. ರವಿವಾರ ಮೇಲ್ಭಾಗದಲ್ಲಿರುವ ಮಣ್ಣು ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಡೆ ತೆರವಿಗೆ ಕ್ರಷರ್‌ ಬಳಸಿದ್ದು, ಜೆಸಿಬಿ ಮೊದಲಾದ ಯಂತ್ರೋಪಕರಣ ಬಳಸಲು ಸಾಧ್ಯವಾಗದೇ ಇರುವುದರಿಂದ ರಭಸದಲ್ಲಿ ನೀರು ಹಾಯಿಸಿ ಮಣ್ಣು ಕರಗಿಸುವ ಪ್ರಯತ್ನ ಸಾಗಿದೆ. ಎರಡು ದಿನಗಳ ಹಿಂದೆ ಕಾರ್ಯಾಚರಣೆಯಲ್ಲಿ ತೊಡಗಿದ್ದವರು ಮಣ್ಣಿನಡಿಯಿಂದ ಕೊಳೆತ ವಾಸನೆ ಬರುತ್ತಿದೆ ಎಂದು ತಿಳಿಸಿದ್ದರೂ ದೇಹ ಪತ್ತೆಯಾಗದಿರುವುದು ಕಳವಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಮಂಗಳೂರು ವಿಮಾನ ನಿಲ್ದಾಣ29.41 ಲ.ರೂ. ಮೌಲ್ಯದಚಿನ್ನ ಅಕ್ರಮ ಸಾಗಾಟ ಪತ್ತೆ

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕಾಧ್ಯಕ್ಷ ಮಹೇಶ್‌ ಶೆಟ್ಟಿ ತಿಮರೋಡಿ ಸಹಿತ ಹತ್ತಾರು ಯುವಕರು, ಉಪನಿರೀಕ್ಷಕ ನಂದಕುಮಾರ್‌ ಎಂ.ಎಂ. ಸ್ಥಳದಲ್ಲಿ ಮೊಕ್ಕಂ ಹೂಡಿ ಪ್ರತಿನಿತ್ಯ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ನೆರವು ನೀಡುತ್ತಿದ್ದಾರೆ.

Advertisement

ಅರಣ್ಯಗಳಾಚೆ ಅಕ್ರಮ ಪ್ರವೇಶ ವಿರುದ್ಧ ಕ್ರಮ
ಬೆಳ್ತಂಗಡಿ: ಮಲವಂತಿಗೆ ದುರಂತದಲ್ಲಿ ಯುವಕನ ಮೃತದೇಹ ಹೊರತೆಗೆಯಲು ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸಲಾಗುತ್ತಿದೆ. ಬಂಡೆ ಒಡೆಯುವ ಸಲುವಾಗಿ ಯಂತ್ರೋಪಕರಣ ಬಳಸಲಾಗಿರುವ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದು ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್‌ ತಿಳಿಸಿದರು.

ಬಳಿಕ ಬೆಳ್ತಂಗಡಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಟ್ರೆಕಿಂಗ್‌, ಮೋಜು ಮಸ್ತಿ ವಿಚಾರವಾಗಿ ದೂರುಗಳು ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಪ್ರದೇಶವನ್ನು ಕೇಂದ್ರೀಕರಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಅಕ್ರಮ ಹೋಂಸ್ಟೇಗಳ ಕುರಿತು ಪೊಲೀಸ್‌ ಇಲಾಖೆ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗುವುದು. ಈ ವಿಚಾರವಾಗಿ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next