Advertisement

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

05:14 PM Apr 28, 2024 | Team Udayavani |

ಹೈದರಾಬಾದ್: ಬಹುಭಾಷಾ ನಟಿ ಸಮಂತಾ ಅವರಿಗಿಂದು 37ನೇ ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ್ದಾರೆ.

Advertisement

ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಸಿನಿಮಾರಂಗದಿಂದ ಬ್ರೇಕ್‌ ಪಡೆದಿರುವ ಸಮಂತಾ, ಪ್ರವಾಸ ಮಾಡುತ್ತಾ ಜಾಲಿ ಮೂಡ್‌ ನಲ್ಲಿದ್ದಾರೆ. ಹುಟ್ಟುಹಬ್ಬಕ್ಕೆ ಅವರು ಕಂಬ್ಯಾಕ್‌ ಮಾಡುತ್ತಿರುವ ಸಿನಿಮಾದ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ.

ಇತ್ತೀಚೆಗೆ ಸಮಂತಾ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದ್ದು ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದರು. ಇದೀಗ ಸಮಂತಾ ತಮ್ಮ ಹೊಸ ಸಿನಿಮಾವನ್ನು ಅನೌನ್ಸ್‌ ಮಾಡಿದ್ದಾರೆ. ಸಿನಿಮಾಕ್ಕೆ ʼಬಂಗಾರಂʼ ಎನ್ನುವ ಟೈಟಲ್‌ ಇಡಲಾಗಿದ್ದು, ತಾಳಿ ಹಾಕಿಕೊಂಡು ಕೈಯಲ್ಲಿ ಗನ್‌ ಹಿಡಿದು ರಕ್ತಸಿಕ್ತ ಅವತಾರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ.

ಮೇಲ್ನೋಟಕ್ಕೆ ಇದೊಂದು ಮಹಿಳಾ ಪ್ರಧಾನ ಸಿನಿಮಾದಂತೆ ಕಾಣುತ್ತಿದ್ದು, ಶೀಘ್ರದಲ್ಲಿ ಸಿನಿಮಾ ಸಟ್ಟೇರಲಿದೆ. ಈ ಸಿನಿಮಾವನ್ನು ಸಮಂತಾ ಅವರ ತ್ರಲಾಲಾ ಮೂವಿಂಗ್‌ ಪಿಕ್ಚರ್ಸ್‌ ಸಂಸ್ಥೆಯೇ ನಿರ್ಮಾಣ ಮಾಡಲಿದೆ.

ಸದ್ಯ ರಾಜ್ & ಡಿಕೆ ಮತ್ತು ಸೀತಾ ಆರ್ ಮೆನನ್ ಅವರ ʼಸಿಟಾಡೆಲ್‌ ಇಂಡಿಯಾ: ಹನಿ ಬನ್ನಿʼ ವೆಬ್‌ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ವರುಣ್‌ ಧವನ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next