ದೇವನಹಳ್ಳಿ: ಯುವ ಕಾಂಗ್ರೆಸ್‌ನಲ್ಲಿಹೊಸ ಸಮಿತಿ ರಚನೆ ಮಾಡುವ ವಿಚಾರದಲ್ಲಿ ಯಾವ ಯಾವ ಆಕಾಂಕ್ಷಿಗಳುಇದ್ದಾರೆ, ಯಾವ ರೀತಿ ಬೂತ್ ಮಟ್ಟದಲ್ಲಿ ಯುವಕಾಂಗ್ರೆಸ್ ಸಂಘಟಿಸಬೇಕು ಎಂಬುವುದರ ಬಗ್ಗೆ ಚರ್ಚಿಸಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷಕೆ.ಆರ್.ನಾಗೇಶ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿತಾಲೂಕು ಯುವ ಕಾಂಗ್ರೆಸ್‌ನಿಂದನಡೆದ ಬೂತ್ ಸಮಿತಿ ರಚನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಯಾರ್ಯಾರಿಗೆ ಯಾವ ತರದ ಹುದ್ದೆ ನೀಡಲುಹೋಬಳಿವಾರು ಸಮಿತಿ ರಚನೆಮಾಡುವ ಬಗ್ಗೆ ಚರ್ಚಿಸಿ, ಸೂಕ್ತತೀರ್ಮಾನ ಕೈಗೊಳ್ಳಲಾಗಿದೆ.
ಮುಂಬರುವ ಜಿಪಂ, ತಾಪಂ ಚುನಾವಣೆಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್‌ಸಮಿತಿಯನ್ನು ಶೀಘ್ರದಲ್ಲಿ ರಚನೆಮಾಡಲಾಗುತ್ತದೆ. ಮುಂದಿನದಿನಗಳಲ್ಲಿಸಮಿತಿ ರಚನೆ ಮಾಡಿ, ಯಾರು ಯಾವಜವಾಬ್ದಾರಿ ವಹಿಸಿದ್ದಾರೆ ಎಂಬವುದರಸಂಪೂರ್ಣ ಮಾಹಿತಿ ನೀಡಲಾಗುತ್ತದೆಎಂದು ಹೇಳಿದರು.
ಉದ್ಯೋಗ ಸೃಷ್ಟಿಗೆ ಸರ್ಕಾರ ವಿಫಲ:ಪ್ರಧಾನಿ ಮೋದಿ ಸರ್ಕಾರ ಕೇಂದ್ರದಲ್ಲಿಅಧಿಕಾರಕ್ಕೆ ಬರುವ ಮುಂಚೆ 2 ಕೋಟಿಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದುಹೇಳಿದ್ದರು. ಆದರೆ, 7 ವರ್ಷ ಕಳೆದರೂಯುವಕರಿಗೆ ಉದ್ಯೋಗ ಸೃಷ್ಟಿಸಲುಸರ್ಕಾರ ವಿಫಲವಾಗಿದೆ. ನಿರುದ್ಯೋಗಸಮಸ್ಯೆ ರಾಷ್ಟ್ರದಲ್ಲಿ ತಾಂಡವವಾಡುತ್ತಿದೆ.ಜಿಡಿಪಿ ಕುಸಿತಗೊಂಡಿದೆ ಎಂದು ಕಿಡಿಕಾರಿದರು.
ಯುವ ಕಾಂಗ್ರೆಸ್ ಬ್ಲಾಕ್‌ಅಧ್ಯಕ್ಷ ರಾಘವೇಂದ್ರ ಸಭೆ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಸುಮಂತ್, ಕನ್ನಮಂಗಲಸಂದೀಪ್, ಚಂದ್ರು, ಮನು, ಸಾಗರ್,ಗಂಗೂಲಿ, ಅರುಣ್, ಚರಣ್, ಚೇತನ್,ಭರತ್ ಹಾಜರಿದ್ದರು.