ರಾಮೇಶ್ವರಂ ಕೆಫೆಯಲ್ಲಿ ಮಾ. 1ರಂದು ಬಾಂಬ್ ಸ್ಫೋಟಿಸಿದ್ದ ಶಂಕಿತನ ಸುಳಿವು ಕೊನೆಗೂ ತನಿಖಾ
ಧಿಕಾರಿಗಳಿಗೆ ಸಿಕ್ಕಿದೆ. ಹಗಲಿರುಳೆನ್ನದೆ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಶೀಘ್ರದಲ್ಲೇ ಆತನನ್ನು ಹೆಡೆಮುರಿ ಕಟ್ಟಿ ಪ್ರಕರಣ ಪತ್ತೆಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಾಂಬ್ ಸ್ಫೋಟದ ಬಳಿಕ ಶಂಕಿತ ವ್ಯಕ್ತಿ ಬೆಂಗಳೂರಿನ ಹೂಡಿ ಬಳಿಯ ಮಸೀದಿಯೊಂದರಲ್ಲಿ ಬಟ್ಟೆ ಬದಲಾಯಿಸಿಕೊಂಡು, ಬಸ್‌ನಲ್ಲಿ ಹೋಗಿರುವ ಶಂಕೆಯಿದೆ. ಈ ವೇಳೆ ಆತ ಬಿಟ್ಟು ಹೋಗಿರುವ ಟೋಪಿ ಪೊಲೀಸರ ಕೈಸೇರಿದೆ.
Advertisement
ಶಂಕಿತನ ಪ್ರಯಾಣ ಹೇಗಿತ್ತು?ಮಾ. 1ರಂದು ಸಂಜೆ ಬೆಂಗಳೂರಿನ ಗೊರಗುಂಟೆ ಪಾಳ್ಯದಲ್ಲಿ ಕೆಎಸ್ಸಾರ್ಟಿಸಿ ಬಸ್ ಏರಿ ತುಮಕೂರು ತಲುಪಿ, ಅಲ್ಲಿಂದ ಬಳ್ಳಾರಿಗೆ ಹೋಗಿದ್ದಾನೆ. ಬಳಿಕ ಬಳ್ಳಾರಿಯಿಂದ ಉತ್ತರ ಕನ್ನಡ ಜಿÇÉೆಯ ಭಟ್ಕಳಕ್ಕೆ ತೆರಳಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮತ್ತೂಂದೆಡೆ ಬಳ್ಳಾರಿಯಿಂದ ಶಂಕಿತ ಬೀದರ್‌ನತ್ತ ಪ್ರಯಾಣಿಸಿರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ.
ಈ ಸುಳಿವು ಸಿಗುತ್ತಿದ್ದಂತೆ ಬೆಂಗಳೂರು ಪೊಲೀಸರು ತುಮ ಕೂರಿನಲ್ಲಿ ಪರಿಶೀಲನೆ ನಡೆಸಿ, ಬಳ್ಳಾರಿ ತಲುಪುವಷ್ಟರಲ್ಲಿ ಬಾಂಬರ್ ಅಲ್ಲಿಂದ ಬೇರೆಡೆ ಹೋಗಿದ್ದಾನೆ ಎನ್ನಲಾಗಿದೆ. ಬಾಂಬರ್‌ನ ನೈಜ ಫೋಟೋ ಪೊಲೀಸರಿಗೆ ದೊರೆತಿದ್ದು, ಆರೋಪಿ ಯು ಹಿಂದಿ ಮಾತನಾಡಿರುವುದು ಕಂಡುಬಂದಿದೆ. ಹೀಗಾಗಿ ಆತ ಹೊರರಾಜ್ಯದ ನಿವಾಸಿಯಾಗಿರುವ ಸಾಧ್ಯತೆ ಗಳಿವೆ ಎನ್ನಲಾಗಿದೆ. ಸೀಟಿನಿಂದ ಕದಲದ ಶಂಕಿತ
ಶಂಕಿತನಿದ್ದ ಕೆಎಸ್ಸಾರ್ಟಿಸಿ ಬಸ್ ಸಂಜೆ 4.30ಕ್ಕೆ ತುಮಕೂರಿನ ಕಳ್ಳಂಬೆಳ್ಳ ಟೋಲ… ಹಾಗೂ ಸಂಜೆ 5 ಗಂಟೆಗೆ ಶಿರಾವನ್ನು ದಾಟಿರುವುದು ತನಿಖಾಧಿಕಾರಿಗಳಿಗೆ ಕಂಡು ಬಂದಿದೆ. ತುಮಕೂರಿನಿಂದ ಬಳ್ಳಾರಿಗೆ ದೀರ್ಘ ಪ್ರಯಾಣ ಮಾಡಿದರೂ ಬಸ್ ಬಳ್ಳಾರಿಗೆ ತಲುಪಿದ ಅನಂತರವೇ ಶಂಕಿತ ಬಸ್‌ನಿಂದ ಇಳಿದಿ¨ªಾನೆ. ಮಾರ್ಗ ಮಧ್ಯೆ ಹಲವು ಕಡೆ ಬಸ್ ನಿಲುಗಡೆ ಮಾಡಿದರೂ ಆತ ಮಾತ್ರ ಬಸ್ ಸೀಟಿನಿಂದ ಕದಲಲಿಲ್ಲ. ತನ್ನ ಸುಳಿವು ಸಿಗದಂತೆ ಎಚ್ಚರ ವಹಿಸಿ ಬಸ್‌ನಿಂದ ಇಳಿಯದಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
Related Articles
ಆರೋಪಿಯು ರಾಮೇಶ್ವರಂ ಕೆಫೆಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿರುವ ಸಿಸಿ ಕೆಮರಾ ದೃಶ್ಯಾವಳಿ ಎಲ್ಲೆಡೆ ವೈರಲ್ ಆಗಿದೆ. ವೋಲ್ವೋ ಬಸ್‌ನ ಮುಂದಿನ ಮೆಟ್ಟಿಲು ಗಳಲ್ಲಿ ಏರುತ್ತಿರುವುದು ಪತ್ತೆಯಾಗಿದೆ. ಬಸ್‌ನ ಒಳಭಾಗದ ಆರಂಭದಲ್ಲಿ ಸಿಸಿಟಿವಿ ಕೆಮರಾ ಗಮನಿಸಿರುವ ಆತ ಅದರಿಂದ ತಪ್ಪಿಸಿಕೊಳ್ಳಲು ದೃಶ್ಯ ಕೆಮರಾ ಕಣ್ಣಿಗೆ ಸಿಕ್ಕದ ಮುಂದಿನ ಆಸನದಲ್ಲೇ ಕುಳಿತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಮಾಸ್ಕ್ ಇಲ್ಲದೆ ಕೆಎಸ್ಸಾರ್ಟಿಸಿ ಬಸ್ಸಿನ ಹಿಂಭಾಗದ ಸೀಟಿನಲ್ಲಿ ಕುಳಿತಿರುವ ಮತ್ತೂಂದು ಚಿತ್ರ ವೈರಲ್ ಆಗಿದೆ. ಬಳ್ಳಾರಿಯ ಬಸ್ ನಿಲ್ದಾಣದಲ್ಲಿ ಆರೋಪಿಯು ಓಡಾಡಿರುವ ಸಿಸಿ ಕೆಮರಾ ದೃಶ್ಯ ಎನ್‌ಐಎಗೆ ಸಿಕ್ಕಿದೆ ಎಂದು ಗೊತ್ತಾಗಿದೆ.
Advertisement